ಸ್ಮೃತಿ ಇರಾನಿಗೆ ಹೆಚ್ಚುವರಿಯಾಗಿ ವಾರ್ತಾ ಮತ್ತು ಪ್ರಸಾರ ಖಾತೆ ಹೊಣೆ

ನವದೆಹಲಿ, ಮಂಗಳವಾರ, 18 ಜುಲೈ 2017 (15:49 IST)

ಕೇಂದ್ರದ ನಗರಾಭಿವೃದ್ಧಿ ಸಚಿವರಾಗಿದ್ದ ವೆಂಕಯ್ಯನಾಯ್ಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಗೆ ಹೆಚ್ಚುವರಿಯಾಗಿ ವಾರ್ತಾ ಮತ್ತು ಪ್ರಸಾರ ಖಾತೆಯ ಹೊಣೆ ನೀಡಲಾಗಿದೆ. 
 
ಗ್ರಾಮೀಣ ಅಭಿವೃದ್ಧಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ನಗರಾಭಿವೃದ್ಧಿ ಖಾತೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.
 
ಬಿಜೆಪಿ ಸಂಸದೀಯ ಸಮಿತಿಯಿಂದ ಎನ್‌ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರಿಂದ ವೆಂಕಯ್ಯ ನಾಯ್ಡು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
 
ಪ್ರಧಾನಿ ಮೋದಿಯ ಸೂಚನೆ ಮೇರೆಗೆ ಜವಳಿಖಾತೆ ಸಚಿವೆ ಸ್ಮೃತಿ ಇರಾನಿ ಮತ್ತು ನರೇಂದ್ರ ತೋಮರ್ ಅವರಿಗೆ ಹೆಚ್ಚುವರಿಯಾಗಿ ಒಂದೊಂದು ಖಾತೆಗಳು ದೊರೆತಿವೆ ಎಂದು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಸ್ಮೃತಿ ಇರಾನಿ ವಾರ್ತಾ ಮತ್ತು ಪ್ರಸಾರ ಖಾತೆ ನರೇಂದ್ರ ತೋಮರ್ ನಗರಾಭಿವೃದ್ಧಿ ಖಾತೆ ವೆಂಕಯ್ಯ ನಾಯ್ಡು Smriti Irani Narendra Tomar Urban Development Venkaiah Naidu I&b Ministry

ಸುದ್ದಿಗಳು

news

ಫ್ರೀಡಂ ಫೈಟರ್ ಬಾಲಗಂಗಾಧರ ತಿಲಕ್ ಮರಿಮೊಮ್ಮಗನ ವಿರುದ್ಧ ರೇಪ್ ಕೇಸ್ ದಾಖಲು

ಪುಣೆ: ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಗಧರ ತಿಲಕ್ ಮರಿ ಮೊಮ್ಮಗ ರೋಹಿತ್ ತಿಲಕ್‌ನನ್ನು ...

news

ಡಿಐಜಿ ರೂಪಾಗೆ ವರ್ಗಾವಣೆ ಶಿಕ್ಷೆ ಅಲ್ಲ: ಆರ್.ಕೆ.ದತ್ತಾ

ಕಾರಾಗೃಹದ ಡಿಐಜಿಯಾಗಿದ್ದ ರೂಪಾ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ...

news

ವಿಶ್ವ ಕನ್ನಡ ಸಮ್ಮೇಳನ ಮುಂದೂಡುವ ಅಗತ್ಯವಿಲ್ಲ: ಚಿದಾನಂದ ಮೂರ್ತಿ

ಬೆಂಗಳೂರು: ರಾಜ್ಯದಲ್ಲಿ ಬರ ಎದುರಾಗಿದ್ದರಿಂದ ವಿಶ್ವ ಕನ್ನಡ ಸಮ್ಮೇಳನ ಮುಂದೂಡಿ ಎನ್ನುವ ಚಂಪಾ ಹೇಳಿಕೆಗೆ ...

news

10 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಚಿಕ್ಕಪ್ಪ

ನವದೆಹಲಿ: ಕಳೆದೊಂದು ವರ್ಷದಿಂದ 10 ವರ್ಷದ ಬಾಲಕಿಯ ಮೇಲೆ ಆಕೆಯ ಚಿಕ್ಕಪ್ಪನೆ ಅತ್ಯಾಚಾರವೆಸಗಿದ ಹೇಯ ಘಟನೆ ...

Widgets Magazine