ವೀರಯೋಧ ಕೊಪ್ಪದ್ ಪತ್ನಿಗೆ ಉದ್ಯೋಗ ನೀಡಿದ ಸ್ಮೃತಿ ಇರಾನಿ

ನವದೆಹಲಿ, ಗುರುವಾರ, 9 ಮಾರ್ಚ್ 2017 (15:10 IST)

Widgets Magazine

ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿದ್ದರೂ ಸತತ 6 ದಿನಗಳ ಕಾಲ ಜೀವವನ್ನು ಹಿಡಿದುಕೊಂಡಿದ್ದ ವೀರಯೋಧ, ಹುತಾತ್ಮ ಹನುಮಂತ ಕೊಪ್ಪದ್ ಪತ್ನಿ ಮಹಾದೇವಿಗೆ  ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ನೀಡಿದ್ದಾರೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಇದನ್ನು ಸ್ಪಷ್ಟ ಪಡಿಸಿದ್ದಾರೆ.

ಕೇಂದ್ರ ರೇಷ್ಮೆ ಇಲಾಖೆಯ ಮೂಲಕ ಮಹಾದೇವಿ ಅವರಿಗೆ ಆಫರ್ ಲೆಟರ್ ಕಳುಹಿಸಲಾಗಿದ್ದು, ಈ ಕೆಲಸವನ್ನು ಒಪ್ಪಿಕೊಳ್ಳುವುದಾಗಿ ಕೊಪ್ಪದ್ ಪತ್ನಿ ತಿಳಿಸಿದ್ದಾರೆ.
 
ಕಳೆದ ವರ್ಷ ಫೆಬ್ರವರಿಯಲ್ಲಿ ಸಿಯಾಚಿನ್‌ನಲ್ಲಿ ಸಂಭವಿಸಿದ ಹಿಮಪಾತದಲ್ಲಿ ಇನೇಕ ಸೈನಿಕರು ದುರ್ಮರಣವನ್ನಪ್ಪಿದ್ದರು. ಆದರೆ ಕೊಪ್ಪದ್ 6 ದಿನಗಳ ಬಳಿಕ ಹಿಮದಡಿಯಲ್ಲಿ ಜೀವಂತವಾಗಿ ಸಿಕ್ಕಿ ಸಂಪೂರ್ಣ ದೇಶಕ್ಕೆ ಆಶ್ಚರ್ಯ ಮತ್ತು ಹೆಮ್ಮೆಯುಂಟಾಗುವಂತೆ ಮಾಡಿದ್ದರು. ಕೋಮಾ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು. 
 
ಕೇಂದ್ರ ಸರ್ಕಾರ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿಯನ್ನು ನೀಡಿತ್ತು ತಮ್ಮ ಪತಿಯ ಸಾವಿನಿಂದ ಜರ್ಜರಿತವಾಗಿದ್ದರೂ ಆತನ ಶೌರ್ಯ, ತ್ಯಾಗಕ್ಕೆ ಅಭಿಮಾನ ವ್ಯಕ್ತ ಪಡಿಸಿದ್ದ ಪತ್ನಿ ತನ್ನ ಮಗಳನ್ನು ಸಹ ತಂದೆಯಂತೆ ಮಿಲಿಟರಿಗೆ ಸೇರಿಸುವುದಾಗಿ ಹೇಳಿದ್ದರು.
 
ರಾಜ್ಯ ಸರ್ಕಾರ ಹನುಮಂತಪ್ಪ ಕೊಪ್ಪದ್ ಪರಿವಾರಕ್ಕೆ 25 ಲಕ್ಷ ರೂಪಾಯಿ ಪರಿಹಾರ, 4 ಎಕರೆ ಜಮೀನು ನೀಡಿತ್ತು. ಅಲ್ಲದೇ ಕೊಪ್ಪದ್ ಅವರ ಪತ್ನಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಅದು ಒಂದು ವರ್ಷವಾದರೂ ಭರವಸೆಯಾಗಿಯೇ ಉಳಿದಿತ್ತು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ವೀರಯೋಧ ಕೊಪ್ಪದ್ ಪತ್ನಿ ಉದ್ಯೋಗ ಸ್ಮೃತಿ ಇರಾನಿ Send Smriti Irani Siachen Braveheart Job Offer Letter

Widgets Magazine

ಸುದ್ದಿಗಳು

news

ತಮಿಳುನಾಡು: "ಅಮ್ಮ"ನ ಕ್ಷೇತ್ರದಲ್ಲಿ ಏ.12 ರಂದು ವೋಟಿಂಗ್

ಚೆನ್ನೈ: ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ನಿಧನದಿಂದ ತೆರವಾದ ಆರ್.ಕೆ.ನಗರ್ ವಿಧಾನಸಭಾ ...

news

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಕಸ್ಮಿಕವಾಗಿ ಉಪಚುನಾವಣೆ ಬಂದಿವೆ. ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ...

news

ಶಾಕಿಂಗ್: ತಂಗಿ ಮದುವೆ ಜವಾಬ್ದಾರಿ ತಪ್ಪಿಸಿಕೊಳ್ಳಲು ಈತ ಮಾಡಿದ್ದೇನು ಗೊತ್ತಾ?

ಸಹೋದರಿಯ ಮದುವೆಯ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳ ಬಯಸಿದ ಯುವಕನೋರ್ವ ಆಕೆಯನ್ನು ಹತ್ಯೆಗೈದ ಹೇಯ ಘಟನೆ ...

news

ಎರಡೂ ಕ್ಷೇತ್ರಗಳಲ್ಲಿ 100ಕ್ಕೆ ನೂರರಷ್ಟು ಗೆಲ್ಲುತ್ತೇವೆ: ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣವಿರುವುದರಿಂದ ನಂಜನಗೂಡು ಮತ್ತು ಗುಂಡ್ಲುಪೇಟೆ ...

Widgets Magazine