ಸೋನಿಯಾ ಗಾಂಧಿಗೆ ಸಚಿವೆ ಸ್ಮೃತಿ ಇರಾನಿ ಲೇವಡಿ

ನವದೆಹಲಿ, ಗುರುವಾರ, 10 ಆಗಸ್ಟ್ 2017 (10:44 IST)

Widgets Magazine

ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 70 ನೇ ವರ್ಷಾಚರಣೆ ಸಂದರ್ಭ ಸಂಸತ್ತಿನಲ್ಲಿ ವಿಪಕ್ಷ ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ನಡೆಸಿದ ಭಾಷಣವನ್ನು ಸಚಿವೆ ಸ್ಮೃತಿ ಇರಾನಿ ವ್ಯಂಗ್ಯ ಮಾಡಿದ್ದಾರೆ.


 
ಪ್ರಧಾನಿ ಮೋದಿ ಇಡೀ ದೇಶದ ಬಗ್ಗೆ ಮಾತನಾಡಿದರು. ಆದರೆ ಸೋನಿಯಾ ಗಾಂಧಿ ತಮ್ಮ ಭಾಷಣದಲ್ಲಿ ರಾಷ್ಟ್ರದ ದೃಷ್ಟಿಯಿಂದ ಮಾತನಾಡುವುದು ಬಿಟ್ಟು ತಮ್ಮ ಕುಟುಂಬದ ಬಗ್ಗೆ ಮಾತನಾಡಿದರು ಎಂದು ಇರಾನಿ ಫೇಸ್ ಬುಕ್ ಪೇಜ್ ನಲ್ಲಿ ಟೀಕಿಸಿದ್ದಾರೆ.
 
ಪ್ರಧಾನಿ ಮೋದಿ ಭ್ರಷ್ಟಾಚಾರ ನಿರ್ಮೂಲನೆ, ಈ ದೇಶದ ಉದ್ಧಾರದ ಬಗ್ಗೆ ಮಾತನಾಡಿ ತಾವು ಇಡೀ ದೇಶದ ಪ್ರತಿನಿಧಿ ಎಂದು ಸಾರಿದರು. ಆದರೆ ಸೋನಿಯಾ ತಮ್ಮ ಭಾಷಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್, ನೆಹರೂ ಪಾತ್ರದ ಬಗ್ಗೆ ಹೊಗಳಿಕೊಂಡು ತಮ್ಮ ಕುಟುಂಬದ ಬೆನ್ನು ತಟ್ಟಿಕೊಂಡರು ಎಂದು ಅವರು ಟೀಕಿಸಿದ್ದಾರೆ.
 
ಇದನ್ನೂ ಓದಿ… ಬ್ರೆಡ್ ಬಗ್ಗೆ ನಿಮಗೆ ಗೊತ್ತಿರದ ಶಾಕಿಂಗ್ ವಿಷಯಗಳು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸೋನಿಯಾ ಗಾಂಧಿ ಸ್ಮೃತಿ ಇರಾನಿ ಕ್ವಿಟ್ ಇಂಡಿಯಾ ಚಳವಳಿ ಪ್ರಧಾನಿ ಮೋದಿ ರಾಷ್ಟ್ರೀಯ ಸುದ್ದಿಗಳು Pm Modi Sonia Gandhi Smriti Irani National News Quit India Movement

Widgets Magazine

ಸುದ್ದಿಗಳು

news

ವಿವಾದಕ್ಕೀಡಾದ ಬೆಂಗಳೂರಿನ ಶಾಲೆಯ ಚೀನಾ ವರ್ಷಾಚರಣೆ

ಬೆಂಗಳೂರು: ಒಂದೆಡೆ ಗಡಿಯಲ್ಲಿ ಚೀನಾ ಕಾಲ್ಕೆರೆದು ಜಗಳ ತೆಗೆಯುತ್ತಿದ್ದರೆ, ರಾಜ್ಯ ರಾಜಧಾನಿಯ ...

news

ಇಂದು ಮತ್ತೆ ಡಿಕೆಶಿವಕುಮಾರ್ ಗೆ ಐಟಿ ಡ್ರಿಲ್

ಬೆಂಗಳೂರು: ಮೊನ್ನೆಯಷ್ಟೇ ಐಟಿ ದಾಳಿಗೆ ತುತ್ತಾಗಿದ್ದ ಸಚಿವ ಡಿಕೆ ಶಿವಕುಮಾರ್ ರನ್ನು ಇಂದು ಮತ್ತೆ ಐಟಿ ...

news

‘ಕ್ವಿಟ್ ಇಂಡಿಯಾ ಅಲ್ಲ, ಬಿಜೆಪಿ ಕ್ವಿಟ್ ಇಂಡಿಯಾ’

ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 70 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸದುದ್ದೇಶಕ್ಕೆ ಬಳಕೆಯಾಗಬೇಕಿದ್ದ ...

news

ಚೀನಾಗೆ ತಕ್ಕ ಎದಿರೇಟು ಕೊಟ್ಟ ಅರುಣ್ ಜೇಟ್ಲಿ

ನವದೆಹಲಿ: ಢೋಕ್ಲಾಂ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಯುದ್ಧೋನ್ಮಾದದಲ್ಲಿರುವ ಚೀನಾಕ್ಕೆ ವಿದೇಶಾಂಗ ಸಚಿವ ...

Widgets Magazine