ಸೋನಿಯಾ ಕಾರ್ಯದರ್ಶಿ ಅಹ್ಮದ್ ಪಟೇಲ್ ಗೆಲುವು ಖಚಿತ: ಗೋಯಲ್

ಬೆಂಗಳೂರು, ಭಾನುವಾರ, 30 ಜುಲೈ 2017 (16:47 IST)

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದು ಖಚಿತ. ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಗುಜರಾತ್‌ನ ಕಾಂಗ್ರೆಸ್ ಮುಖಂಡ ಶಕ್ತಿ ಸಿನ್ಹ ಗೋಯಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆ ಸಂಬಂಧ ಯಾವುದೇ ಗೊಂದಲವಿಲ್ಲ. ಎಲ್ಲಾ ಪ್ರಶ್ನೆಗಳಿಗೆ ಕಾಂಗ್ರೆಸ್ ಶಾಸಕರು ಉತ್ತರ ನೀಡಲಿದ್ದಾರೆ.ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದ್ದಾರೆ.
 
ರಾಜ್ಯಸಭೆಯ ಕಾಂಗ್ರೆಸ್ ಅಭ್ಯರ್ಥಿ ಅಹ್ಮದ್ ಪಟೇಲ್ ಗೆಲ್ಲಲು ಅಗತ್ಯವಾಗಿರುವ ಸಂಖ್ಯಾಬಲ ಕಾಂಗ್ರೆಸ್ ಬಳಿಯಿದೆ. ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ರಾಜಕೀಯದ ಬಗ್ಗೆ ಶಾಸಕರೇ ಮಾಹಿತಿ ನೀಡಲಿದ್ದಾರೆ ಎಂದರು.
 
ರೆಸಾರ್ಟ್‌ನಲ್ಲಿ ಶಾಸಕರು ಮಜಾ ಮಾಡುತ್ತಿದ್ದಾರೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಅವರು, ಮಜಾ ಮಾಡಬೇಕೆಂದರೆ ಬಿಜೆಪಿ 15 ಕೋಟಿ ಆಫರ್ ನೀಡಿತ್ತು. ಆ ಹಣವನ್ನು ಪಡೆದುಕೊಂಡು ವಿಶ್ವದಾದ್ಯಂತ ಪ್ರವಾಸ ಮಾಡಿ ಮಜಾ ಮಾಡುತ್ತಿದ್ದೇವು. ಬೆಂಗಳೂರಿಗೆ ಬರುವ ಅಗತ್ಯವಿರುತ್ತಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಫ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಅಧಿಕಾರ ಬಲ, ಹಣಬಲ, ತೋಳ್ಬಲದಿಂದ ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶಕ್ತಿ ಸಿನ್ಹ ಗೋಯಲ್ ಗುಡುಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಅಹ್ಮದ್ ಪಟೇಲ್ ಸೋನಿಯಾ ಗಾಂಧಿ ರಾಜ್ಯಸಭೆ ಚುನಾವಣೆ ಅಮಿತ್ ಶಾ ಪ್ರಧಾನಿ ಮೋದಿ Ahmed Patel Sonia Gandhi Amit Sha Pm Modi Rajya Sabha Election

ಸುದ್ದಿಗಳು

news

ವಂದೇ ಮಾತರಂ ಹಾಡುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ: ನಖ್ವಿ

ವಂದೇ ಮಾತರಂ ಹಾಡುವುದು ಬಿಡುವುದು ಜನರ ಆಯ್ಕೆಗೆ ಬಿಟ್ಟ ವಿಚಾರ. ಒಂದು ವೇಳೆ ವಂದೇ ಮಾತರಂ ...

news

ವಾಮಮಾರ್ಗದಿಂದ ರಾಜ್ಯಗಳ ಕಬಳಿಕೆ: ಮೋದಿ ವಿರುದ್ಧ ದೇವೇಗೌಡ ವಾಗ್ದಾಳಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಾಮ ಮಾರ್ಗದ ಮೂಲಕ ಎಲ್ಲಾ ರಾಜ್ಯಗಳನ್ನು ವಶಕ್ಕೆ ತೆಗೆದುಕೊಳ್ಳಲು ...

news

ನೆಹರೂ-ಎಡ್ವಿನಾ ಮೌಂಟ್ ಬೇಟನ್ ಸಂಬಂಧದ ರಹಸ್ಯ ಬಿಚ್ಚಿಟ್ಟ ಎಡ್ವಿನಾ ಪುತ್ರಿ

ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಮತ್ತು ಕೊನೆಯ ಬ್ರಿಟಿಷ್ ವೈಸರಾಯ್ ಲಾರ್ಡ್ ಲೂಯಿಸ್ ...

news

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ ಅರೆಸ್ಟ್

ಬೆಂಗಳೂರು: ಶಾಲಾ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ...

Widgets Magazine