10 ಕೋಟಿ ವೆಚ್ಚದಲ್ಲಿ ಪ್ರಧಾನಿ ಮೋದಿ ದೇವಾಲಯ ನಿರ್ಮಾಣ

ನವದೆಹಲಿ, ಮಂಗಳವಾರ, 3 ಅಕ್ಟೋಬರ್ 2017 (13:34 IST)

ಮೀರತ್‌ನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು ಮೋದಿ ಹೆಸರಿನಲ್ಲಿ 100 ಅಡಿ ಎತ್ತರದ ಮೋದಿ ಪ್ರತಿಮೆಯಿರುವ ದೇವಾಲಯವನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿದ್ದಾರೆ. 
ಕಳೆದ ವರ್ಷ ಸೇವೆಯಿಂದ ನಿವೃತ್ತರಾದ ಉತ್ತರಪ್ರದೇಶದ ಮೀರತ್‌ ಜಿಲ್ಲೆಯ ನಿವೃತ್ತ ಇಂಜಿನಿಯರ್ ಜೆಪಿ ಸಿಂಗ್, ಸರ್ದಾನಾ ಪಟ್ಟಣದಲ್ಲಿ ಮೋದಿ ಮಂದಿರ ದೇವಾಲಯವನ್ನು ನಿರ್ಮಿಸಿ 100 ಅಡಿ ಎತ್ತರದ ಪ್ರಧಾನಿ ಮೋದಿ ಪ್ರತಿಮೆಯನ್ನು ಸ್ಥಾಪಿಸುವ  ಯೋಜನೆ ಹೊಂದಿದ್ದಾರೆ. ಆಕ್ಟೋಬರ್ 23 ರಂದು ಭೂಮಿ ಪೂಜೆ ನೆರವೇರಲಿದ್ದು, ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.  
 
ಕಳೆದ 70 ವರ್ಷಗಳಿಂದ ದೇಶದಲ್ಲಿ ದುರಾಡಳಿತವಿತ್ತು. ಇದೀಗ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಅಧಿಕಾರವಧಿಯಲ್ಲಿ ದೇಶ ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇಂತಹ ಶ್ರೇಷ್ಠ ವ್ಯಕ್ತಿಗೆ ಸ್ಮಾರಕ ನಿರ್ಮಿಸುವುದು ಅರ್ಹವಾಗಿದೆ. ಆದ್ದರಿಂದ ಮೋದಿ ಮಂದಿರ ನಿರ್ಮಿಸಲು ನಿರ್ಧರಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
 
ಮೋದಿ ಮೋದಿರ ದೇವಾಲಯದೊಳಗೆ 100 ಅಡಿ ಎತ್ತರದ ಪ್ರಧಾನಿ ಮೋದಿ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ದೇವಾಲಯದ ಗರ್ಭಗುಡಿಯಲ್ಲಿ ಮೋದಿ ಮೂರ್ತಿಯಿರುವುದಿಲ್ಲ. ಯಾಕೆಂದರೆ ಮೋದಿ ದೇವರಲ್ಲ. ದೇವಾಲಯದ ಗರ್ಭಗುಡಿಯೊಳಗೆ ವಿಷ್ಣು ಮತ್ತು ಲಕ್ಷ್ಮಿಯ ಮೂರ್ತಿಗಳಿರಲಿವೆ. ಪ್ರಧಾನಿ ಮೋದಿಯನ್ನು ಗೌರವಿಸುವ ಉದ್ದೇಶದಿಂದ ದೇವಾಲಯ ನಿರ್ಮಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. 
 
ಯೋಜನೆಯ ಸಂಪೂರ್ಣ ವೆಚ್ಚ ರೂ. 10 ಕೋಟಿಯಾಗಲಿದ್ದು ಎರಡು ವರ್ಷಗಳಲ್ಲಿ ಪ್ರತಿಮೆ ಮತ್ತು ದೇವಾಲಯ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ. ನಂತರ ಸಾರ್ವಜನಿಕರಿಗೆ ತೆರೆದಿರಲಿದೆ. ವೆಚ್ಚವಾಗುವ 10 ಕೋಟಿ ರೂ. ಹಣ ದೇಣಿಗೆಗಳ ಮೂಲಕ ಬರುತ್ತದೆ ಎಂದು ನಿವೃತ್ತ ಇಂಜಿನಿಯರ್ ಜೆ.ಪಿ.ಸಿಂಗ್ ಮಾಹಿತಿ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗೆ ದಂಪತಿ ಬಲಿ

ಬೆಂಗಳೂರಿನ ರಸ್ತೆಗಳಲ್ಲಿ ಬಾಯ್ತೆರೆದಿರುವ ಗುಂಡಿಗೆ ಮತ್ತೊಂದು ದಂಪತಿ ಬಲಿಯಾಗಿದೆ. ಮೈಸೂರು ರಸ್ತೆಯ ...

news

ಹನಿಪ್ರೀತ್ ಪ್ರತ್ಯಕ್ಷ.. ಗುರ್ಮಿತ್ ಜೊತೆಗಿನ ಅಕ್ರಮ ಸಂಬಂಧದ ಬಗ್ಗೆ ಹೇಳಿದ್ದೇನು ಗೊತ್ತಾ..?

ಡೇರಾ ಸಚ್ಚಾ ಸೌಧದ ಗುರು, ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೊತೆ ...

news

‘ಇದೇನು ಗಾಂಧಿ ಜಯಂತಿಯೋ? ಸೋನಿಯಾ, ರಾಹುಲ್ ಜಯಂತಿಯೋ?’

ಬೆಂಗಳೂರು: ದೇಶಾದ್ಯಂತ ನಿನ್ನೆ ಗಾಂಧಿ ಜಯಂತಿ ಆಚರಿಸುತ್ತಿದ್ದರೆ, ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದು ...

news

ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಅನುಪಮಾ ಶೆಣೈ

ಮಾಜಿ ಡಿವೈಎಸ್`ಪಿ ಅನುಪಮಾ ಶೆಣೈ ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ಧವಾಗುತ್ತಿದೆ. ಹೊಸ ಪಕ್ಷ ಕಟ್ಟುವ ಮೂಲಕ ...

Widgets Magazine