ಸೆಕ್ಸ್ ಸುಖ ಕೊಡಲು ನಿರಾಕರಿಸಿದ ಅತ್ತಿಗೆಯ ಮೂಗು ಕೊಯ್ದ ಮೈದುನ

ಉತ್ತರಾಖಂಡ್, ಮಂಗಳವಾರ, 20 ಸೆಪ್ಟಂಬರ್ 2016 (16:08 IST)

Widgets Magazine

ಮೈದುನನೊಬ್ಬ ಕೊಡಲು ನಿರಾಕರಿಸಿದ ಅತ್ತಿಗೆಯ ಮೂಗು ಕೊಯ್ದ ಹೇಯ ಘಟನೆ ವರದಿಯಾಗಿದೆ.
 
ಪ್ರತಿನಿತ್ಯ ಸೆಕ್ಸ್ ಸುಖ ನೀಡುವಂತೆ ಆರೋಪಿ ಮೈದುನ, ಅತ್ತಿಗೆಯನ್ನು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದರೆ, ಆತನ ಕೋರಿಕೆಗೆ ಕ್ಯಾರೆ ಎನ್ನಲಿಲ್ಲ. ಇದರಿಂದ ಆಕ್ರೋಶಗೊಂಡು ನೀನು ನನ್ನವಳಾಗದಿದ್ದರೆ, ಬೇರೆಯವರಿಗೂ ದೊರೆಯಲು ಬಿಡುವುದಿಲ್ಲ ಎಂದು ಕತ್ತಿಯಿಂದ ಆಕೆಯ ಮೂಗು ಕೊಯ್ದು ಹಾಕಿದ್ದಾನೆ. 
 
ಆರೋಪಿ ಯುವಕನ ಸಹೋದರನನ್ನು ಮಹಿಳೆ ವಿವಾಹವಾಗಿದ್ದಳು. ಆದರೆ, ಎರಡು ವರ್ಷಗಳ ನಂತರ ಪತಿ ಮರಣ ಹೊಂದಿದ್ದರಿಂದ, ಆಕೆಯೊಂದಿಗೆ ಹಾಸಿಗೆ ಸುಖ ಹಂಚಿಕೊಳ್ಳಲು ಆತ್ಮಿಯನಾಗುವಂತೆ ನಾಟಕವಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಕೆಲವು ಬಾರಿ ಒತ್ತಾಯಪೂರ್ವಕವಾಗಿ ಆಸೆಯನ್ನು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದರಿಂದ ಕೊಪಗೊಂಡ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದರೆ, ಇದೊಂದು ಕೌಟಂಬಿಕ ಸಮಸ್ಯೆ ಎಂದು ಪೊಲೀಸರು ಮೌನವಹಿಸಿದ್ದಾರೆ.
 
ಇದರಿಂದ ಬೇಸರಗೊಂಡ ಮಹಿಳೆ ನೇಪಾಳದಲ್ಲಿ ಉದ್ಯೋಗದಲ್ಲಿರುವ ಪುತ್ರನೊಂದಿಗೆ ವಾಸಿಸಲು ತೆರಳಿದ್ದಾಳೆ. ಕಳೆದ ನಾಲ್ಕು ದಿನಗಳ ಹಿಂದೆ ಪತಿಯ ಮನೆಗೆ ಮಹಿಳೆ ಮರಳಿದ್ದಾಗ, ಆರೋಪಿ ಮನೆಗೆ ನುಗ್ಗಿ ಪತ್ನಿಯಾಗಿ ಸ್ವೀಕರಿಸುವುದಾಗಿ ಹೇಳಿದ್ದಾನೆ. 
 
ಅತ್ತಿಗೆ ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡ ಆರೋಪಿ, ಹರಿತವಾದ ಕತ್ತಿಯಿಂದ ಆಕೆಯ ಮೂಗು ಕೊಯ್ದು ಹಾಕಿದ್ದಾನೆ. ಗ್ರಾಮದ ಮುಖ್ಯಸ್ಥ ನೀಡಿದ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗಣಪತಿ ಪ್ರಕರಣ ಸಿಬಿಐಗೆ: ರಿಟ್ ಅರ್ಜಿ ವಜಾಗೊಳಿಸಿದ ಕೋರ್ಟ್

ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ...

news

ಭಾರತದೊಂದಿಗೆ ಆತ್ಮಿಯವಾದರೆ ಜಾಗೃತೆ: ನೇಪಾಳಕ್ಕೆ ಚೀನಾ ಎಚ್ಚರಿಕೆ

ಕಾಠ್ಮಂಡು: ನೇಪಾಳ ಪ್ರಧಾನಿ ಪ್ರಚಂಡಾ ಭಾರತಕ್ಕೆ ಭೇಟಿ ನೀಡಿದ ಕೆಲವೇ ದಿನಗಳ ನಂತರ ಭಾರತೊಂದಿಗೆ ಆತ್ಮಿಯ ...

news

ವಿವಾಹವಾಗಲು ನಿರಾಕರಿಸಿದ ವೇಶ್ಯೆಯನ್ನು ಬರ್ಬರವಾಗಿ ಕೊಂದ ಆರೋಪಿ

ರಾಜ್‌ಕೋಟ್: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯೊಬ್ಬಳು ವಿವಾಹವಾಗಲು ನಿರಾಕರಿಸಿದ್ದಕ್ಕಾಗಿ ...

news

ರಾಜ್ಯದ ರೈತರಿಗೆ 'ಮಣ್ಣು ತಿನ್ನುವ ಭಾಗ್ಯ' ನೀಡಿದ ಸರಕಾರ: ಬಿಜೆಪಿ ಆಕ್ರೋಶ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ಮೇಲುಸ್ತುವರಿ ಸಮಿತಿ ಆದೇಶ ಹೊರ ಬಿದ್ದ ...

Widgets Magazine