ಬಾಲಿ ದ್ವೀಪದಲ್ಲಿ ಭೂಕಂಪ ಸಂತ್ರಸ್ತರಿಗೆ ರಾಜ್ಯದ ಯುವಕ ನೆರವು

ಧಾರವಾಡ, ಶನಿವಾರ, 11 ಆಗಸ್ಟ್ 2018 (14:23 IST)

 

ಇಂಡ್ಯೋನೇಷ್ಯಾದ ಬಾಲಿ ಸಮೀಪದ ಗಿಲಿ ದ್ವೀಪದ ಲೊಂಬ್ಯಾಕ್ ನಲ್ಲಿ ಬೆಳಗಿನ ಜಾವ ಭಾರಿ ಸಂಭವಿಸಿದೆ. ಪದೇ ಪದೇ ಭೂಕಂಪ ಆಗುತ್ತಿದ್ದ ಅಪಾರ ಸಾವು-ನೋವು ಸಂಭವಿಸಿದೆ. ಭೂಕಂಪದಿಂದ ಗಾಯಗೊಂಡವರ ನೆರವಿಗೆ ನೆರವು ನೀಡುತ್ತಿದ್ದಾರೆ.

ಭೂಕಂಪನಕ್ಕೆ ನೂರಾರು ಜನರು ಸಾವನ್ನಪ್ಪಿದ್ದು, ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. 6.9 ಮ್ಯಾಗ್ನಿಟುಡ್ ಕಂಪನಕ್ಕೆ ಭೂ ತತ್ತರಿಸಿದ್ದು, ಈ ಹಿಂದೆ ಕೂಡ ಇಲ್ಲಿ ನಿರಂತರವಾಗಿ ಭೂಕಂಪನವಾಗುತ್ತಲೇ ಇದೆ. ಈವರೆಗೆ 259 ಜನ ಸಾವನ್ನಪ್ಪಿದ್ದಾರೆ. 1053 ಜನ ಗಾಯಗೊಂಡಿದ್ದಾರೆ. 2 ಲಕ್ಷ 70 ಸಾವಿರಕ್ಕೂ ಅಧೀಕ ಜನ ಮನೆ ಕಳೆದುಕೊಂಡಿದ್ದಾರೆ. ಕಳೆದ ಆಗಸ್ಟ್ 5ರಂದು ಸಂಭವಿಸಿದ್ದ ಭೂಕಂಪನದಲ್ಲಿ 350 ಜನ ಸಾವನ್ನಪ್ಪಿದ್ದರು. ನಾಲ್ಕು ದಿನಗಳ ಅಂತರದಲ್ಲೇ ಭಾರೀ ಭೂಕಂಪನವಾಗಿದ್ದಕ್ಕೆ ನೂರಾರು ಜನ ಸಾವನ್ನಪ್ಪಿದ್ದು, ಇದರಿಂದಾಗಿ ಇಡೀ ಇಂಡ್ಯೋನೇಷ್ಯಾ ದೇಶವನ್ನೇ ಸ್ಥಬ್ಧಗೊಳಿಸುವಂತೆ ಮಾಡಿದೆ.

ಗಾಯಾಳುಗಳ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಧಾರವಾಡದ ಮಾಳಮಡ್ಡಿ ನಿವಾಸಿಯಾಗಿರುವ ಕನ್ನಡಿಗ ರೋಶನ್ ಸಿಂಗ್ ನವಲೂರು ಅವರು ಕೈ ಜೋಡಿಸಿದ್ದಾರೆ. ಅಲ್ಲಿನ ಪರಿಸ್ಥೀತಿಯನ್ನು ಕಣ್ಣಾರೆ ಕಂಡು ಮಮ್ಮಲ ಮರುಗಿರುವ ಅವರು, ಸದ್ಯ ಇಂಡ್ಯೋನೇಷ್ಯಾದ  ವಾಣಿಜ್ಯ ನಗರಿ ಸುರಬಾಯ ನಗರದಲ್ಲಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ಸಹಾಯ ಮಾಡುತ್ತಿದ್ದು, ವಿವಿಧ ಆಸ್ಪತ್ರೆಗಳ ತುರ್ತು ನಿಗಾ ಘಟಕದ ವಾರ್ಡ್ ಗಳಲ್ಲಿ ರೋಗಿಗಳ ಹಸ್ತಾಂತರಕ್ಕೆ ನೆರವು ನೀಡುತ್ತಿದ್ದಾರೆ.
 

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾನವೀಯತೆ ಮರೆತ ಅಧಿಕಾರಿಗಳು

ತನ್ನ ಮಗುವಿನ ಅಂಗವಿಕಲ ವೇತನಕ್ಕಾಗಿ ತಾಯಿಯೋರ್ವಳು ವಿಕಲಚೇತನ ಮಗುವನ್ನು ಕಚೇರಿ ಕೌಂಟರ್ ಕೆಳಗಡೆ ಮಲಗಿಸಿ ...

news

ಹಾಲು ಕೊಡುತ್ತಿರುವ ಮರಿ ಯಾವುದು ಗೊತ್ತಾ?

ಕೇವಲ ಎರಡು ತಿಂಗಳ ಮರಿ ಹಾಲು ಕೊಡುತ್ತಿರುವ ವಿಚಿತ್ರ ಘಟನೆ ನಡೆದಿದೆ. ಪುಟ್ಟ ಮರಿ ಎಲ್ಲರ ಗಮನ ...

news

ದೇವಾಲಯ ಬೀಗ ಮುರಿದು ಹುಂಡಿ ಕಳ್ಳತನ

ದೇವಾಲಯದ ಬೀಗ ಮುರಿದು ಕಾಣಿಕೆ ಹುಂಡಿ ಕಳವು ಮಾಡಿದ ಘಟನೆ ನಡೆದಿದೆ.

news

ಕಬಿನಿಗೆ ಹೆಚ್ಚು ನೀರು: ಮುನ್ನೆಚ್ಚರಿಕೆ ವಹಿಸಲು ಸೂಚನೆ

ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು ಜಲಾಶಯವು ಗರಿಷ್ಠ ಮಟ್ಟ ತಲುಪುತ್ತಿರುವುದರಿಂದ ಯಾವುದೇ ...

Widgets Magazine