ಒಂದು ಇಲಿ ಹೈಕೋರ್ಟ್ ನ್ಯಾಯಾಧೀಶರನ್ನೇ ರೈಲಿನಿಂದ ಕೆಳಗಿಳಿಸಿತು..!

ಒಡಿಶಾ, ಶನಿವಾರ, 4 ನವೆಂಬರ್ 2017 (12:36 IST)

Widgets Magazine

ಒಡಿಶಾ: ರೈಲಿನ ಎಸಿ ಬೋಗಿಯಲ್ಲಿ ಸತ್ತ ಇಲಿ ವಾಸನೆಯಿಂದ ಹೈಕೋರ್ಟ್‌ ನ್ಯಾಯಾಧೀಶರೊಬ್ಬರು ತಮ್ಮ ಪ್ರಯಾಣ ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ನಡೆದಿದೆ.


ಒಡಿಶಾ ಹೈಕೋರ್ಟ್‌ ನ್ಯಾಯಾಧೀಶ ಬಿಸ್ವನಾಥ್‌ ರಾಥ್‌ ಶುಕ್ರವಾರ ಭುವನೇಶ್ವರ್‌‌ ನಿಂದ ಆಂಧ್ರದ ವಿಶಾಖಪಟ್ಟಣಂಗೆ ಭುವನೇಶ್ವರ್‌‌-ಮುಂಬೈ ಕೊನಾರ್ಕ್‌ ಎಕ್ಸ್‌ ಪ್ರೆಸ್‌ ಎಸಿ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ, ಖರ್ದಾ ರೋಡ್‌ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ರೈಲಿನಲ್ಲಿ ಸತ್ತ ಇಲಿಯ ವಾಸನೆ ಬಂದಿದೆ. ಇದರಿಂದ ನ್ಯಾ. ಬಿಸ್ವಾನಾಥ್‌ ತಮ್ಮ ಪ್ರಯಾಣ ಅರ್ಧಕ್ಕೆ ಮೊಟಕುಗೊಳಿಸಿ ಬೆರ್ಹಾಮ್‌ ಪುರ್‌ ‌ನಲ್ಲಿ ಇಳಿದಿದ್ದಾರೆ.


ನ್ಯಾ. ಬಿಸ್ವಾನಾಥ್‌ ರಾಥ್‌ ಮತ್ತು ನಾನು ಎ1 ಎಸಿ ಬೋಗಿ 13 ಹಾಗೂ 15ನೇ ಸೀಟ್‌ ‌ನಲ್ಲಿ ಪ್ರಯಾಣಿಸುತ್ತಿದ್ದೆವು. ಖರ್ದಾ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಏನೋ ಕೆಟ್ಟ ವಾಸನೆ ಬರುತ್ತಿದೆ ಕಂಡು ಹಿಡಿಯಿರಿ ಎಂದು ನನಗೆ ಕೇಳಿದರು. ಆಗ ನಾನು ಕಿಟಕಿಯತ್ತ ನೋಡಿದಾಗ ಗ್ಲಾಸಿನ ಮಧ್ಯೆ ಒಂದು ಸತ್ತ ಇಲಿ ಹಾಗೂ ಮೂರು ಜೀವಂತ ಇಲಿಗಳು ಕಂಡು ಬಂದವು ಎಂದು ನ್ಯಾ. ಬಿಸ್ವಾನಾಥ್‌ ಜತೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಸತ್ತ ಇಲಿ ಪತ್ತೆಯಾಗಿರುವುದನ್ನು ಒಪ್ಪಿಕೊಂಡಿರುವ ರೈಲ್ವೆ ಇಲಾಖೆ ಅಧಿಕಾರಿಗಳು, ಬೆರ್ಹಾಮ್‌ ಪುರ್‌‌ ನಿಲ್ದಾಣದಲ್ಲೇ ಕೆಮಿಕಲ್‌ ನಿಂದ ಶುಚಿಗೊಳಿಸಿರುವುದಾಗಿ ಹೇಳಿದ್ದಾರೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿ ಯಾತ್ರೆಯಲ್ಲಿ ಜನರಿಗೆ ಹಣ ಹಂಚುತ್ತಿರುವ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆ?

ತುರವೇಕೆರೆ: ಬಿಜೆಪಿ ಪರಿವರ್ತನಾ ಯಾತ್ರೆಗೆ ಆಗಮಿಸಿದ ಜನರಿಗೆ ಬಿಜೆಪಿ ಮುಖಂಡರು ಹಣ ಹಂಚುತ್ತಿರುವ ದೃಶ್ಯ ...

news

ಬಿಜೆಪಿ ನಾಯಕರಿಂದ ಆರ್.ಅಶೋಕ್ ವಿರುದ್ಧವೇ ಹೈಕಮಾಂಡ್‌ಗೆ ದೂರು

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯ ಅವ್ಯವಸ್ಥೆಗೆ ಮಾಜಿ ಸಚಿವ ಆರ್.ಅಶೋಕ್ ಕಾರಣವೆಂದು ಬಿಜೆಪಿ ...

news

40ರ ಮಹಿಳೆ ಜತೆ 20 ವರ್ಷದ ಹುಡುಗನ ಲವ್ವಿಡವ್ವಿ..!

ಬೆಂಗಳೂರು: ನಲವತ್ತರ ಆಂಟಿಗಾಗಿ 20 ವರ್ಷದ ಹುಡುಗ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

news

ಸರ್ಕಾರದ ವಿರುದ್ಧ ಬಿಎಸ್ ವೈ ವಾಗ್ದಾಳಿ

ಬೆಂಗಳೂರು: ಖಾಸಗಿ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸರ್ಕಾರದ ...

Widgets Magazine