ಹಜ್ ಯಾತ್ರೆಗೆ ಸಬ್ಸಿಡಿ ರದ್ದು-ಮುಕ್ತಾರ್ ಅಬ್ಬಾಸ್ ನಖ್ವಿ

ನವದೆಹಲಿ, ಬುಧವಾರ, 17 ಜನವರಿ 2018 (07:45 IST)

ನವದೆಹಲಿ : ಹಜ್ ಯಾತ್ರೆಗೆ ನೀಡುವ ಸಹಾಯಧನವನ್ನು ಈ ವರ್ಷದಿಂದ ನಿಷೇಧಿಸಲಾಗಿದೆ. ಯಾತ್ರಿಗಳು ಸ್ವಂತ ಖರ್ಚಿನಿಂದಲೇ ಯಾತ್ರೆ ಕೈಗೊಳ್ಳಬೇಕು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ತಿಳಿಸಿದ್ದಾರೆ.


ವಿಶೇಷವೆಂದರೆ ‘ನೀಡದಿದ್ದರೂ ಭಾರತದಿಂದ ಈ ವರ್ಷ 1.75 ಲಕ್ಷ ಮುಸ್ಲಿಮರು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಅಲ್ಪಸಂಖ್ಯಾಕರು ಘನತೆಯಿಂದ ಬದುಕಬೇಕು ಮತ್ತು ಯಾವುದೇ ಓಲೈಕೆಗೆ ಒಳಗಾಗಬಾರದು ಎಂಬ ಉದ್ದೇಶವೂ ಇದರಲ್ಲಿ ಸೇರಿದೆ ಎಂದಿದ್ದಾರೆ.


ಅಲ್ಲದೇ ಹಜ್ ಯಾತ್ರೆ ಕೈಗೊಳ್ಳಲು ಭಾರತದಿಂದ ಹಡಗುಗಳ ಮೂಲಕ ಬರುವ ಯಾತ್ರಿಗಳಿಗೂ ಪ್ರವೇಶಕ್ಕೆ ಅವಕಾಶ ನೀಡಲು ಸೌದಿ ಅರೇಬಿಯಾ ಸರ್ಕಾರ ಒಪ್ಪಿಕೊಂಡಿದೆ ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. 2012ರಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಹಜ್ ಯಾತ್ರೆಗೆ ಸಹಾಯಧನ ನೀಡುವುದನ್ನು ನಿಷೇಧಿಸಬೇಕು ಎಂದು ನಿರ್ದೇಶಿಸಿತ್ತು. ಹೊಸ ಸಮಿತಿಯ ಶಿಫಾರಸಿನಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೊರಟಗೆರೆಯಲ್ಲಿ ಜಿ.ಪರಮೇಶ್ವರ್‌ ವಿರುದ್ಧ ಅಸಮಾಧಾನ

ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ...

news

ಕಾಂಗ್ರೆಸ್‌, ಬರ ಅವಳಿ ಸಹೋದರರು– ನರೇಂದ್ರಮೋದಿ

ಕಾಂಗ್ರೆಸ್ ಪಕ್ಷ ಹಾಗೂ ಬರ ಅವಳಿ ಸಹೋದರರಿದ್ದಂತೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್‌ನ್ನು ...

news

ಜಾಮೀನಿನಿಂದ ಹೊರಬಂದಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಹಲ್ಲೆ

ಹಲ್ಲೆ ಪ್ರಕರಣದಲ್ಲಿ ಜಾಮೀನಿನಿಂದ ಹೊರಬಂದಿದ್ದ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಹಲ್ಲೆ ನಡೆಸಿರುವ ಘಟನೆ ...

news

ಆಗ್ರಾದ ಸರ್ಕ್ಯೂಟ್ ಹೌಸ್‌ನಲ್ಲಿ ರಾತ್ರಿ ಕಳೆಯುವ ಮೂಲಕ ಸಂಪ್ರದಾಯ ಮುರಿದ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಗ್ರಾದ ಸರ್ಕ್ಯೂಟ್ ಹೌಸ್‌ನಲ್ಲಿ ರಾತ್ರಿ ಕಳೆಯುವ ...

Widgets Magazine
Widgets Magazine