ಸುನಂದಾ ಪುಷ್ಕರ್ ಸಾವಿನ ರಹಸ್ಯ ಶೀಘ್ರ ಬಹಿರಂಗ..?

ನವದೆಹಲಿ, ಶುಕ್ರವಾರ, 21 ಜುಲೈ 2017 (17:45 IST)

ಮಾಜಿ ಕೇಂದ್ರ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢವಾಗಿ ನವದೆಹಲಿ ಹೋಟೆಲ್`ನಲ್ಲಿ ಹತ್ಯೆಗೀಡಾಗಿ 3 ವರ್ಷಗಳೇ ಕಳೆದಿವೆ. ಆದರೆ, ಆಕೆಯ ಸಾವೊಇನ ರಹಸ್ಯ ಭೇದಿಸಲು ಇದುವರೆಗೂ ವೈದ್ಯರಿಗೆ ಸಾಧ್ಯವಾಗಿಲ್ಲ.
 
ಮರಣೋತ್ತರ ಪರೀಕ್ಷೆ ನಡೆಸಿದ್ದ ಏಮ್ಸ್ ವೈದ್ಯರು  ಎಫ್`ಬಿಐ ಲ್ಯಾಬ್`ಗೂ ದತ್ತಾಂಶ ಕಳುಹಿಸಿದ್ದರು. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ವಿಸ್ತ್ಋತ ವೈದ್ಯಕೀಯ ಸಮಿತಿ ರಚಿಸಿದ್ದರೂ ಸಾವಿನ ರಹಸ್ಯ ಬಯಲಿಗೆ ಬಂದಿಲ್ಲ. ಕೊನೆಗೂ ಈ ರಹಸ್ಯ ಭೇದಿಸಲು ಮುಂದಾಗಿರುವ ವಿಸ್ತೃತ ವೈದ್ಯಕೀಯ ಸಮಿತಿ ಮಹತ್ವದ ಸಭೆ ನಡೆಸಲು ನಿರ್ಧರಿಸಿದೆ.

ಸುನಂದಾ ಸಾವಿನ ಬಗ್ಗೆ ಏಮ್ಸ್ ವೈದ್ಯರು ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪುತ್ರ ಶಿವ್ ಮೆನನ್, ದೆಹಲಿಯ ಪೊಲೀಸ್ ಆಯುಕ್ತ ಬಿಎಸ್. ಬಸ್ರಾಗೆ ಪತ್ರ ಬರೆದು, ಏಮ್ಸ್ ವೈದ್ಯರು ಸಾವಿನ ಬಗ್ಗೆ ಖಚಿತತೆ ನೀಡದಿದ್ದಾಗ ಬೇರೆ ವೈದ್ಯರನ್ನ ಸಂಪರ್ಕಿಸಲಿಲ್ಲವೇಕೆ..? ವಿಸ್ತೃತ ವೈದ್ಯಕೀಯ ಸಮಿತಿ ರಚಿಸಿದ್ದರೂ ಸುಮ್ಮನಾಗಿದ್ದೇಕೆ ಎಂದು ಪ್ರಶ್ನಿಸಿದ್ದರು.

ಅಲ್ಫ್ರಾಜೋಲಮ್ ಓವರ್ ಡೋಸ್`ನಿಂದ ಸುನಂದಾ ಸಾವು ಸಂಭವಿಸಿರಬಹುದು ಎಂದು ಏಮ್ಸ್ ವೈದ್ಯರ ಸಂಶಯ, ಎಫ್`ಬಿಐ ಲ್ಯಾಬ್ ವರದಿ ಎಲ್ಲವನ್ನೂ ಪಡೆಯುತ್ತಿರುವ ವಿಸ್ತೃತ ವೈದ್ಯಕೀಯ ಸಮಿತಿ ಅಂತಿಮ ನಿರ್ಧಾರಕ್ಕೆ ಬರುವ ಪ್ರಯತ್ನ ನಡೆಸುತ್ತಿದೆ.ವೈದ್ಯರು ಸಾವಿನ ಬಗ್ಗೆ ಸ್ಪಷ್ಟ ವರದಿ ನೀಡಿದ ಬಳಿಕ ತನಿಖೆಯ ಹಾದಿ ಸುಗಮವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸುನಂದಾ ಪುಷ್ಕರ್ ಶಶಿತರೂರ್ ಕಾಂಗ್ರೆಸ್ Congress Shashi Tharoor Sunanda Pushkar

ಸುದ್ದಿಗಳು

news

`ಕೈ’ ಬಿಟ್ಟ ವಾಘೇಲಾ: ಗುಜರಾತ್ ಕಾಂಗ್ರೆಸ್ ಭಿನ್ನಮತ ಸ್ಫೋಟ

ಚುನಾವಣಾ ವರ್ಷದಲ್ಲಿ ಗುಜರಾತ್ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿದೆ. ವಿಪಕ್ಷ ನಾಯಕ ಶಂಕರ್ ...

news

ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ 7 ಗಂಟೆಗಳ ಕಾಲ ಗಿಟಾರ್‍ ನುಡಿಸುತ್ತಲೇ ಇದ್ದ ವ್ಯಕ್ತಿ...

ವೈದ್ಯರು ಅತ್ತ ತನ್ನ ಮಿದುಳು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರೆ, ಇತ್ತ ಈ ರೋಗಿ ಗಿಟಾರ್‌ ನುಡಿಸುತ್ತಲೇ ...

news

ಈ ಶಾಲೆಯಲ್ಲಿ ಶಿಕ್ಷಕರು ಹೆಲ್ಮೆಟ್ ಧರಿಸಿ ಪಾಠ ಮಾಡುತ್ತಾರೆ...!

ತೆಲಂಗಾಣದ ಸರ್ಕಾರಿ ಶಾಲೆಯ ಶಿಕ್ಷಕರು ತಲೆಗೆ ಹೆಲ್ಮೆಟ್ ಧರಿಸಿ ಪಾಠ ಮಾಡುವ ಮೂಲಕ ವಿಭಿನ್ನ ರೀತಿಯ ...

news

ಜೈಲು ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ ಎಡಿಜಿಪಿ ಮೇಘರಿಕ್

ಜೈಲಿನಲ್ಲಿರುವ ಎಲ್ಲ ಕೈದಿಗಳೂ ಸಮಾನ, ಯಾರಿಗೂ ವಿಶೇಷ ಸೌಲಭ್ಯ ಒದಗಿಸುವಂತಿಲ್ಲ ಎಂದು ಕಾರಾಗೃಹದ ಎಡಿಜಿಪಿ ...

Widgets Magazine