ಪ್ಯಾನ್ ಕಾರ್ಡ್`ಗೆ ಆಧಾರ್ ಕಡ್ಡಾಯವೇಕೆ..?: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ತರಾಟೆ

ನವದೆಹಲಿ, ಶುಕ್ರವಾರ, 21 ಏಪ್ರಿಲ್ 2017 (21:33 IST)

Widgets Magazine

ಪ್ಯಾನ್ ಕಾರ್ಡ್ ಪಡೆಯಲು, ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಫೈಲಿಂಗ್ ವೇಳೆ ಆಧಾರ್ ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರವನ್ನ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.


ಆಧಾರ್ ಕಡ್ಡಾಯ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಕಿ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್, ಆಧಾರ್ ಕೇವಲ ಅರ್ಜಿದಾರರ ಆಯ್ಕೆಯಾಗಿರಬೇಕೆಂದು ಹಿಂದಿನ ಆದೇಶದಲ್ಲಿ ತಿಳಿಸಿದ್ದರೂ ಪ್ಯಾನ್ ಕಾರ್ಡ್`ಗೆ ಆಧಾರ್ ಕಡ್ಡಾಯಗೊಳಿಸಿದ್ದೇಕೆ ಎಂದು ಸುಪ್ರೀಂಕೋರ್ಟ್ ಕಟುವಾಗಿ ಪ್ರಶ್ನಿಸಿದೆ.
 
ಈ ಕುರಿತು, ಕೇಂದ್ರದ ಪರವಾಗಿ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್, ಹಣದ ವರ್ಗಾವಣೆಯಲ್ಲಿ  ಪ್ಯಾನ್ ಕಾರ್ಡ್ ದುರ್ಬಳಕೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು.  ಅದನ್ನ ತಡೆಯಲು ಆಧಾರ್ ಕಡ್ಡಾಯಹೊಳಿಸುವುದೊಂದೇ ಮಾರ್ಗವಾಗಿತ್ತು ಎಂದಿದ್ದಾರೆ. ಕಳೆದ ತಿಂಗಳಷ್ಟೇ ಪ್ಯಾನ್ ಕಾರ್ಡ್ ಪಡೆಯಲು ಆಧಾರ್ ಲಿಂಕ್ ಕಡ್ಡಾಯ ಎಂದು ಕೇಂದ್ರ ಆದೇಶಿಸಿತ್ತು.

ಕಳೆದ ತಿಂಗಳಷ್ಟೇ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಕಡ್ಡಾಯಗೊಳಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿತ್ತು. ಬ್ಯಾಂಕ್ ಖಾತೆ, ಪಾಸ್ ಪೋರ್ಟ್, ಮೊಬೈಲ್ ಸಂಪರ್ಕಕ್ಕೆ ಆಧಾರ್ ಕಡ್ಡಾಯವನ್ನ ಎತ್ತಿಹಿಡಿದಿತ್ತು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ: 13 ಮಂದಿ ದುರ್ಮರಣ

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ...

news

ಜಯಲಲಿತಾ ಸಾವಿಗೆ ಹೊಸ ಟ್ವಿಸ್ಟ್ ನೀಡಿದ ಶಶಿಕಲಾ ಸಂಬಂಧಿ!

ಚೆನ್ನೈ: ತಮಿಳುನಾಡಿನಲ್ಲಿ ಈಗ ಶಶಿಕಲಾ ನಟರಾಜನ್ ವಿರೋಧಿ ಅಲೆ ಹೆಚ್ಚಾಗುತ್ತಿರುವಂತೆ ಶಶಿಕಲಾ ...

news

ಸೋನು ನಿಗಂ ಬೆಂಬಲಿಸಿ ಮಾತನಾಡಿದ್ದಕ್ಕೆ ಕೊಲೆ!

ಮುಂಬೈ: ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಇಟ್ಟು ಪ್ರಾರ್ಥನೆ ಮಾಡಿ ತೊಂದರೆ ಕೊಡಬಾರದು ಎಂದು ಟ್ವೀಟ್ ಮಾಡಿದ್ದ ...

news

ಮಂಜು ಗಡ್ಡೆ ನೋಡಲು ಮುಗಿಬಿದ್ದ ಜನ! ಅಂತಹದ್ದೇನಿತ್ತು ಅಲ್ಲಿ?!

ನವದೆಹಲಿ: ಸಾಮಾನ್ಯವಾಗಿ ನಾವೆಲ್ಲರೂ ಐಸ್ ತುಂಡನ್ನು ನೋಡಿದ್ದೇವೆ. ಆದರೆ ಇಲ್ಲಿ ಮಾತ್ರ ಐಸ್ ಗಟ್ಟಿಯನ್ನು ...