ಶಾಲೆಗಳಲ್ಲಿ ಯೋಗ ಕಡ್ಡಾಯ: ಬಿಜೆಪಿ ನಾಯಕರ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ನವದೆಹಲಿ, ಮಂಗಳವಾರ, 8 ಆಗಸ್ಟ್ 2017 (16:56 IST)

ದೇಶಾದ್ಯಂತ 1-8 ತರಗತಿಗಳ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಕಡ್ಡಾಯ ಮಾಡುವಂತೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ವಿದ್ಯಾರ್ಥಿಗಳಿಗೆ ಯಾವುದನ್ನು ಕಲಿಸಬೇಕು ಎನ್ನುವುದು ಕೋರ್ಟ್ ನಿರ್ಧರಿಸುವುದಿಲ್ಲ. ಸರಕಾರಗಳ ಮಾತ್ರ ಇಂತಹ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಕಡ್ಡಾಯಗೊಳಿಸಬೇಕು ಎನ್ನುವ ಅರ್ಜಿಯನ್ನು ತಿರಸ್ಕರಿಸಿದ, ನ್ಯಾಯಮೂರ್ತಿ ಎಂ. ಬಿ ಲೋಕೂರ್ ನೇತೃತ್ವದ ಪೀಠ, ಶಾಲೆಗಳಲ್ಲಿ ಏನು ಕಲಿಸಬೇಕು ಎನ್ನುವುದನ್ನು ಹೇಳಲು ನಾವು ಯಾರು? ಅದು ನಮ್ಮ ವ್ಯವಹಾರವಲ್ಲ, ಅದನ್ನು ನಾವು ಹೇಗೆ ನಿರ್ದೇಶಿಸಲು ಸಾಧ್ಯ ಎಂದು ಹೇಳಿದರು.
 
ಮುಂಚಿನ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೋರ್ಟ್‌ನಲ್ಲಿ ವಾದ ಮಂಡಿಸಿ, ಯೋಗ ಶಿಕ್ಷಣ ಕಡ್ಡಾಯಗೊಳಿಸಿ ಮಕ್ಕಳ ಹಕ್ಕು ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ. 
 
ಅರ್ಜಿದಾರ ಮತ್ತು ದೆಹಲಿ ಬಿಜೆಪಿ ವಕ್ತಾರ ಮತ್ತು ಜೆ.ಸಿ. ಸೇಥ್ ಮತ್ತು ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಅರ್ಜಿಗೆ ಸ್ಪಂದಿಸಲು ಸಾಧ್ಯವಿಲ್ಲ ಎಂದು ಹೇಳಿದೆ. "ಶಾಲೆಗಳಲ್ಲಿ ಏನು ಕಲಿಸಬೇಕು ಎನ್ನುವುದು ಮೂಲಭೂತ ಹಕ್ಕು ಅಲ್ಲ" ಎಂದು ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಶಾಲೆಗಳಲ್ಲಿ ಯೋಗ ಕಡ್ಡಾಯ ಸುಪ್ರೀಂಕೋರ್ಟ್ ಕೇಂದ್ರ ಸರಕಾರ Government Yoga Compulsory Supreme Court Yogayoga In School

ಸುದ್ದಿಗಳು

news

ನಾನು ಬಾಯ್ಬಿಟ್ಟರೆ ಎಲ್ಲೆಲ್ಲಿ, ಏನೇನೋ ಆಗಿಬಿಡುತ್ತದೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಬಿಜೆಪಿಗೆ ಆಹ್ವಾನ ನೀಡಿರುವ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಇಂಧನ ಖಾತೆ ಸಚಿವ ...

news

ಗಂಡನ ಮುಂದೆಯೇ ಬೆತ್ತಲೆಗೊಳಿಸಿ ಹೀನ ಕೃತ್ಯ ಎಸಗಿದರು..!

ಅಕ್ರಮ ಸಂಬಂಧಕ್ಕೆ ಸಹಕಾರ ನೀಡಿದಳೆಂದ ಕಾರಣಕ್ಕೆ ಮಹಿಳೆಯನ್ನ ಬೆತ್ತಲೆಗೊಳಿಸಿ ಗಂಡನ ಮುಂದೆಯೇ ಲೈಂಗಿಕ ...

news

ರಾಜ್ಯಸಭೆ ಚುನಾವಣೆ: ಗುಜರಾತ್‌ನಲ್ಲಿ ಮತದಾನ ಅಂತ್ಯ

ಗಾಂಧಿನಗರ: ಗುಜರಾತ್‌ನಲ್ಲಿ ಮೂರು ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಯ ಮತದಾನ ಅಂತ್ಯವಾಗಿದೆ.

news

ಕನ್ನಡ ಕಲಿಯದಿದ್ರೆ ವಜಾ: ಬ್ಯಾಂಕ್‌ ಸಿಬ್ಬಂದಿಗೆ ಕರ್ನಾಟಕ ಅಭಿವೃದ್ಧಿ ಪ್ರಾಧೀಕಾರ ಎಚ್ಚರಿಕೆ

ಬೆಂಗಳೂರು: ರಾಷ್ಟ್ರೀಕೃತ, ಖಾಸಗಿ ಮತ್ತು ಗ್ರಾಮೀಣ ಬ್ಯಾಂಕ್‌ಗಳ ಅನ್ಯಭಾಷಿಕರಿಗೆ ಎಚ್ಚರಿಕೆ ನೀಡಲು ಕನ್ನಡ ...

Widgets Magazine