Widgets Magazine
Widgets Magazine

ತ್ರಿವಳಿ ತಲಾಖ್ ವಿಚಾರಣೆ ಅಂತ್ಯ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ನವದೆಹಲಿ, ಗುರುವಾರ, 18 ಮೇ 2017 (21:36 IST)

Widgets Magazine

ತಲಾಖ್ ಸಾಂವಿಧಾನಿಕ ಮಾನ್ಯತೆ ಕುರಿತ ಅರ್ಜಿಗಳ ವಿಚಾರಣೆಯನ್ನ ಸುಪ್ರೀಂಕೋರ್ಟ್ ಮುಕ್ತಾಯಗೊಳಿಸಿದ್ದು, ತೀರ್ಪನ್ನ ಕಾಯ್ದಿರಿಸಿದೆ.


ತಲಾಖ್, ನಿಖಾ ಹಲಾಲ್, ಬಹುಪತ್ನಿತ್ವ ಕುರಿತಾದ ಅರ್ಜಿಗಳು ಸುಪ್ರೀಂಕೋರ್ಟ್ ಮುಂದೆ ಬಂದಿದ್ದವು. ಬೇಸಿಗೆ ರಜಾ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತೀ ಖೇಹರ್ ನೇತೃತ್ವದಲ್ಲಿ ಐವರು ವಿವಿಧ ಧರ್ಮಗಳ ನ್ಯಾಯಾಧೀಶರನ್ನೊಳಗೊಂಡ ಪಂಚ ಪೀಠ ವಿಚಾರಣೆ ನಡೆಸಿದೆ.

ಅಂತಿಮ ವಾದ-ವಿವಾದದ ವೇಳೆ ಅಖಿಲ ಭಾರತ  ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ, ತ್ರಿವಳಿ ತಲಾಖ್ ಅನ್ನ ಸಮರ್ಥನೆ ಮಾಡಿಕೊಂಡಿದ್ದು, ತಲಾಖ್ ವೇಳೆ ಮಹಿಳೆಯರ ವಾದವನ್ನೂ ಪರಿಗಣಿಸುವಂತೆ  ಖಾಸಿಗಳಿಗೆ ಸಲಹೆ ಮತ್ತು
ಸೂಚನೆಗಳ ಜಾರಿಗೆ ಸಿದ್ಧವಿರುವುದಾಗಿ ಹೇಳಿದೆ. ಈ ಸಂದರ್ಭ ಸುಪ್ರೀಂಕೋರ್ಟ್, ತಲಾಖ್ ತಿರಸ್ಕರಿಸುವ ಅಧಿಕಾರ ಪತ್ನಿಗಿದೆಯೇ ಮತ್ತು ತ್ರಿವಳಿ ತಲಾಖ್ ಬಗ್ಗೆ ಖುರಾನಿನಲ್ಲಿ ಉಲ್ಲೇಖವಿದೆಯೇ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನ ಪ್ರಶ್ನಿಸಿದೆ.

ಬುಧವಾರ ಕೇಂದ್ರ ಸರ್ಕಾರ ಸಹ ತ್ರಿವಳಿ ತಲಾಖ್ ನಿಷೇಧಿಸುವಂತೆ ಸುಪ್ರೀಂಕೋರ್ಟ್`ಗೆ ಮನವಿ ಸಲ್ಲಿಸಿತ್ತು. 25 ರಾಷ್ಟ್ರಗಳಲ್ಲಿ ನಿಷೇಧಗೊಂಡಿರುವ ತಲಾಖ್ ಕಡ್ಡಾಯವೆಂದು ಹೇಳಲಾಗದು ಎಂದು ಅಟಾರ್ನಿ ಜನರಲ್ ವಾದಿಸಿದ್ದರು. ಜುಲೈನಲ್ಲಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಲಿದೆ ಎಂದು ಹೇಳಲಾಗುತ್ತಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ಡೇವ್ ನಿಧನ

ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ಡೇವ್(60) ಬೆಳಗಿನ ಜಾವ ...

news

ಯಾರೇ ಕೂಗಾಡಲಿ ಯಾರೇ ಹೋರಾಡಲಿ ನಾವೇ ಅಧಿಕಾರಕ್ಕೆ ಬರುವುದು ನಿಶ್ಚಿತ: ಸಿಎಂ

ವಿಜಯಪುರ: ಯಾರೇ ಕೂಗಾಡಲಿ ಯಾರೇ ಹೋರಾಡಲಿ ನಾವೇ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಿಎಂ ಸಿದ್ದರಾಮಯ್ಯ ...

news

ದೇಶದ ಹಿತದೃಷ್ಟಿಯಿಂದ ಐಸಿಜೆ ತೀರ್ಪು ಒಪ್ಪಲು ಸಾಧ್ಯವಿಲ್ಲ: ಪಾಕಿಸ್ತಾನ

ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪ್ರಕರಣ ಐಸಿಜೆ ವ್ಯಾಪ್ತಿಗೆ ಬರುವದಿಲ್ಲವಾದ್ದರಿಂದ ಐಸಿಜೆ ತೀರ್ಪು ...

news

ಜಾಮೀನಿಗಾಗಿ ಅರ್ಜಿ ಸಲ್ಲಿಸಿದ ರೌಡಿಶೀಟರ್ ನಾಗ

ಬೆಂಗಳೂರು: ಪೊಲೀಸರ ವಶದಲ್ಲಿರುವ ರೌಡಿಶೀಟರ್ ನಾಗ ಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ.

Widgets Magazine Widgets Magazine Widgets Magazine