ಕಿರಿಕ್ ಮಾಡುತ್ತಿದ್ದ ಫಾಲೋವರ್ ನ ಟ್ವಿಟರ್ ಖಾತೆ ಬ್ಲಾಕ್ ಮಾಡಿದ ಸಚಿವೆ ಸುಷ್ಮಾ ಸ್ವರಾಜ್

ನವದೆಹಲಿ, ಮಂಗಳವಾರ, 3 ಜುಲೈ 2018 (13:48 IST)


ನವದೆಹಲಿ: ಇತ್ತೀಚೆಗೆ ಅಂತರ್ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ಕೊಡಿಸಲು ನೆರವಾದ ವಿಚಾರದಲ್ಲಿ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇದೀಗ ತಮ್ಮ ಟ್ವಿಟರ್ ಖಾತೆಯಿಂದ ಒಬ್ಬ ಫಾಲೋವರ್ ನನ್ನು ಬ್ಲಾಕ್ ಮಾಡಿದ್ದಾರೆ.
 
ತನಗೆ ಟ್ವಿಟರ್ ಮೂಲಕ ಕಿರಿ ಕಿರಿ ಮಾಡುತ್ತಿದ್ದ ಸೋನಂ ಮಹಾಜನ್ ಎಂಬವರ ಟ್ವಿಟರ್ ಖಾತೆಯನ್ನು ಸುಷ್ಮಾ ಬ್ಲಾಕ್ ಮಾಡಿದ್ದಾರೆ. ಈ ವ್ಯಕ್ತಿ ಆಸ್ ಯು ನಾಟ್ ವಿಶ್ ಎಂಬ ಹೆಸರಿನ ಖಾತೆಯಿಂದ ಟ್ವೀಟ್ ಮಾಡುತ್ತಿದ್ದರು.
 
‘ತಡವೇಕೆ? ತೆಗೆದುಕೊಳ್ಳಿ, ನಿಮ್ಮನ್ನು ಬ್ಲಾಕ್ ಮಾಡಲಾಗಿದೆ’ ಎಂದು ಮಹಾಜನ್ ಗೆ ಟ್ವೀಟ್ ಮಾಡಿ ಸುಷ್ಮಾ ಸ್ವರಾಜ್ ಬ್ಲಾಕ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಹಾಜನ್ ಕೂಡಾ ಟ್ವೀಟ್ ಮಾಡಿದ್ದು, ಒಂದು ಕಾಲದಲ್ಲಿ ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೆ. ನಿಮ್ಮ ಪರವಾಗಿ ವಾದ ಮಾಡುತ್ತಿದ್ದೆ. ಅದಕ್ಕೆ ತಕ್ಕ ಬಹುಮಾನ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಿಕ್ಷಣ ಸಚಿವರ ಬಗ್ಗೆ ಸದನದಲ್ಲಿ ಗೊಂದಲ

ಬೆಂಗಳೂರು: ವಿಧಾನಸಭೆ ಕಲಾಪ ನಡೆಯುವಾಗ ಹಲವು ಸ್ವಾರಸ್ಯಕರ ಘಟನೆಗಳು ನಡೆಯುತ್ತವೆ. ಅಂತಹದ್ದೊಂದು ಘಟನೆಗೆ ...

news

ಸುನಂದಾ ಪುಷ್ಕರ್ ಸಾವು ಪ್ರಕರಣ: ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್

ನವದೆಹಲಿ: ಪತ್ನಿ ಸುನಂದಾ ಪುಷ್ಕರ್ ಅಸಹಜ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ನಿರೀಕ್ಷಣಾ ...

news

ಮುಂಬೈನಲ್ಲಿ ರೈಲ್ವೇ ಹಳಿ ಮೇಲೆ ಮೇಲ್ಸೇತುವೆ ಕುಸಿತ

ಮುಂಬೈ: ಭಾರೀ ಮಳೆಗೆ ಮುಂಬೈನ ಅಂಧೇರಿ ಸ್ಟೇಷನ್ ಬಳಿ ರೈಲ್ವೇ ಹಳಿಗಳ ಮೇಲ್ಸೇತುವೆ ಕುಸಿದು ಬಿದ್ದಿದ್ದು, 2 ...

news

ಕರಾವಳಿಯಲ್ಲಿ ಈ ವಾರ ಮತ್ತೆ ಭಾರೀ ಮಳೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಬಿಡುವು ಪಡೆದಿರುವ ಮಳೆರಾಯ ಮತ್ತೆ ಈ ವಾರ ...

Widgets Magazine