ತನ್ನ ರಕ್ಷಣೆಗೆ ಭಾರತ ಶಸ್ತ್ರ ಸಜ್ಜಿತವಾಗಿದೆ: ಚೀನಾಗೆ ಸುಷ್ಮಾ ಎಚ್ಚರಿಕೆ

ನವದೆಹಲಿ, ಗುರುವಾರ, 20 ಜುಲೈ 2017 (16:10 IST)

ನವದೆಹಲಿ:ಡೊಕ್ಲಾಮ್ ಗಡಿಯಲ್ಲಿನ ಬೆದರಿಕೆಗಳಿಗೆ ಭಾರತ ಹಿಂಜರಿಯುವುದಿಲ್ಲ. ಇದು ಭಾರತದ ಭದ್ರತೆಗೆ ಸವಾಲಾಗಿದ್ದು, ತನ್ನನ್ನು ರಕ್ಷಿಸಿಕೊಳ್ಳಲು ಭಾರತ ಶಸ್ತ್ರ ಸಜ್ಜಿತವಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
 
ಡೊಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಉತ್ತರಿಸಿದ ಸುಷ್ಮಾ ಸ್ವರಾಜ್, ಟಿಬೆಟ್, ಸಿಕ್ಕಿಂ, ಚೀನಾ ಗಡಿ ರೇಖೆಗಳಲ್ಲಿ ರಸ್ತೆ ನಿರ್ಮಾಣ, ರಿಪೇರಿ ಎಂಬ ಕಾರಣಗಳನ್ನು ನೀಡಿ ಚೀನಾ ಗಡಿ ದಾಟಿ ಮುಂದೆ ಬರುತ್ತಿದೆ. ಗಡಿಯಲ್ಲಿ ನಿಯೋಜಿಸಿರುವ ಸೈನಿಕರನ್ನು ಭಾರತ ಹಿಂಪಡೆಯಬೇಕು ಎಂದು ಚೀನಾ ಬಯಸಿದರೆ, ಅದೇ ಸ್ಥಳದಲ್ಲಿ ಚೀನಾ ನಿಯೋಜಿಸಿರುವ ಸೈನಿಕರನ್ನೂ ಹಿಂಪಡೆಯಲಿ ಎಂಬುದು ಭಾರತದ ಆಗ್ರಹ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
 
ಉಭಯ ರಾಷ್ಟ್ರಗಳ ಸೇನೆ ಹಿಂದಕ್ಕೆ ಸರಿದ ಬಳಿಕವಷ್ಟೇ ಗಡಿ ಬಿಕ್ಕಟ್ಟು ಕುರಿತ ಯಾವುದೇ ವಿಚಾರ ಕುರಿತಂತೆ ಮಾತುಕತೆ ನಡೆಸಲು ಭಾರತ ಸಿದ್ಧವಾಗಿರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿಯೂ ತನ್ನನ್ನು ಸಮರ್ಥಿಸಿಕೊಳ್ಳಲು ಭಾರತ ಸಿದ್ಧವಿದೆ. ವಿವಾದ ಸಂಬಂಧ ಕಾನೂನು ಮತ್ತು ಹಕ್ಕುಗಳು ನಮ್ಮ ಕಡಿಗಿದೆ. ಇತರೆ ದೇಶದ ಜನತೆ ಹಾಗೂ ಇತರೆ ರಾಷ್ಟ್ರಗಳು ಭಾರತದ ನಿಲುವನ್ನು ಬೆಂಬಲಿಸಿವೆ. ಚೀನಾದ ನಡೆಯನ್ನು ನಾವು ಒಗ್ಗಟ್ಟಿನಿಂದ ಖಂಡಿಸುವುದಾಗಿ ತಿಳಿಸಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  
ಡೊಕ್ಲಾಮ್ ಸುಷ್ಮಾ ಸ್ವರಾಜ್ ಎಚ್ಚರಿಕೆ ಭಾರತ-ಚೀನಾ ಗಡಿ ಬಿಕ್ಕಟ್ಟು Sushma Swaraj Strong Stance On India-china Stand-off We're Equipped To Defend Ourself

ಸುದ್ದಿಗಳು

news

ಅನಾರೋಗ್ಯ: ಮಾಜಿ ಸಚಿವ ಅಂಬರೀಷ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಹಿರಿಯ ನಟ, ಮಾಜಿ ಸಚಿವ ಅಂಬರೀಷ್ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

news

ವೈದ್ಯರನ್ನ ಕಿಡ್ನ್ಯಾಪ್ ಮಾಡಿ 5 ಕೋಟಿ ಬೇಡಿಕೆ ಇಟ್ಟಿದ್ದ ಓಲಾ ಡ್ರೈವರ್..!

ಓಲಾ ಕ್ಯಾಬ್ ಡ್ರೈವರೊಬ್ಬ ವೈದ್ಯನನ್ನ ಕಿಡ್ನ್ಯಾಪ್ ಮಾಡಿ 14 ದಿನಗಳ ಕಾಲ ಒತ್ತೆಯಾಳಾಗಿರಿಸಿಕೊಂಡು 5 ಕೋಟಿ ...

news

ತುಮಕೂರು ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಮಾಜಿ ಶಾಸಕರ ವಾಗ್ವಾದ

ತುಮಕೂರು: ಜಿಲ್ಲಾ ಬಿಜೆಪಿ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು ಬಿಜೆಪಿ ಮಾಜಿ ಶಾಸಕರಾದ ...

news

ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಕೋವಿಂದ್`ಗೆ ಭಾರೀ ಮುನ್ನಡೆ

ದೇಶದ 14ನೇ ರಾಷ್ಟ್ರಪತಿ ಆಯ್ಕೆಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನವದೆಹಲಿಯ ಸಂಸತ್ ಭವನದಲ್ಲಿ ...

Widgets Magazine