ರಾಹುಲ್ ಗಾಂಧಿ ವಿರುದ್ಧ ಸಿಟ್ಟಿಗೆದ್ದ ಸುಷ್ಮಾ ಸ್ವರಾಜ್

NewDelhi, ಶುಕ್ರವಾರ, 4 ಆಗಸ್ಟ್ 2017 (10:15 IST)

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ  ಸ್ವರಾಜ್ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವರ್ತನೆಗೆ ಸಿಟ್ಟಿಗೆದ್ದಿದ್ದಾರೆ.  ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷರ ಮೇಲೆ ಸಚಿವೆ ಸುಷ್ಮಾ ಹರಿಹಾಯ್ದಿದ್ದಾರೆ. 
ಭಾರತ ಮತ್ತು ಚೀನಾ ನಡುವೆ ಢೋಕ್ಲಾಂ ಗಡಿ ವಿವಾದದ ವಿಚಾರದಲ್ಲಿ ವೈಮನಸ್ಯವಿದೆ. ಈ ಸಂದರ್ಭದಲ್ಲಿ ನಮ್ಮ ದೇಶದ ಅತೀ ದೊಡ್ಡ ಪಕ್ಷವೊಂದರ ನಾಯಕರೊಬ್ಬರು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಿ ಗಡಿ ವಿವಾದದ ಸ್ಥಿತಿಗತಿಗಳ ಬಗ್ಗೆ ಚರ್ಚಿಸುವುದರ ಬದಲು ಚೀನಾದ ರಾಯಭಾರಿ ಭೇಟಿ ಮಾಡಿ ಪರಿಸ್ಥಿತಿ ಬಗ್ಗೆ ಚರ್ಚಿಸುವ ಅಗತ್ಯವಿತ್ತೇ ಎಂದು ಅವರು  ಖಾರವಾಗಿ ಪ್ರಶ್ನಿಸಿದ್ದಾರೆ.
 
ಹಿಂದೆ 1962 ರಲ್ಲಿ ಭಾರತ ಮತ್ತು ಚೀನಾ ನಡುವೆ ಮನಸ್ತಾಪ ಏರ್ಪಟ್ಟಾಗ ವಿಶೇಷ ಅಧಿವೇಶನ ಕರೆಯಲು ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ  ಅಂದು ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂಗೆ ಪತ್ರ ಬರೆದಿದ್ದರು. ಆದರೆ ಇಂದು ವಿರೋಧ ಪಕ್ಷದವರಿಂದ ಅಂತಹ ನಡೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದಾರೆ.
 
ಇದನ್ನೂ ಓದಿ.. ಕೋಚ್ ಹುದ್ದೆ ಬಿಟ್ಟ ಮೇಲೆ ಅನಿಲ್ ಕುಂಬ್ಳೆ ಏನು ಮಾಡ್ತಿದ್ದಾರೆ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಸುಷ್ಮಾ ಸ್ವರಾಜ್ ರಾಹುಲ್ ಗಾಂಧಿ ಕಾಂಗ್ರೆಸ್ ಅಂತಾರಾಷ್ಟ್ರೀಯ ಸುದ್ದಿಗಳು ಭಾರತ-ಚೀನಾ ಗಡಿ ವಿವಾದ Congress Rahul Gandhi Sushma Swaraj International News India-china Boarder Dispute

ಸುದ್ದಿಗಳು

news

ರಾಜ್ಯ ಕಾಂಗ್ರೆಸ್ ಗೆ ಇನ್ನೊಂದು ತಲೆನೋವು

ಬೆಂಗಳೂರು: ಗಜರಾತ್ ರಾಜ್ಯಸಭೆ ಚುನಾವಣೆಗೆ ಆಪರೇಷನ್ ಕಮಲ ಭೀತಿಗೆ ಸಿಲುಕಿ ಬೆಂಗಳೂರಿಗೆ ಬಂದು ಈಗಲ್ ಟನ್ ...

news

ಹಬ್ಬಕ್ಕೂ ಡಿಕೆಶಿಗೆ ಬಿಡುವಿಲ್ಲ

ಬೆಂಗಳೂರು: ಇಂದು ವರಮಹಾಲಕ್ಷ್ಮಿ ಹಬ್ಬ. ಆದರೆ ಐಟಿ ದಾಳಿಗೊಳಗಾಗಿರುವ ಸಚಿವ ಡಿಕೆ ಶಿವಕುಮಾರ್ ಮನೆಯಲ್ಲಿ ...

news

ಐಟಿ ದಾಳಿ ಬೆನ್ನಲ್ಲೇ ಡಿಕೆಶಿ ಬೆನ್ನತ್ತಿದ ಮತ್ತೊಂದು ಪ್ರಕರಣ..?

ವರ ಮಹಾಲಕ್ಷ್ಮೀ ಹಬ್ಬದ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಮುಂದುವರೆದಿರುವ ...

news

ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳ ವಿರುದ್ಧ ಡಿಕೆಶಿ ಗರಂ

ಸತತ 3ನೇ ದಿನವೂ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಐಟಿ ಅಧಿಕಾರಿಗಳ ಡ್ರಿಲ್ ಮುಂದುವರೆದಿದೆ. ...

Widgets Magazine