ಶಂಕಿತ ಐಸಿಸ್ ಉಗ್ರನ ಹತ್ಯೆ: ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಲಖನೌ, ಬುಧವಾರ, 8 ಮಾರ್ಚ್ 2017 (12:02 IST)

ಜಗತ್ತಿನ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆ ಐಸಿಸ್ ಉಗ್ರನನ್ನು ಬರೊಬ್ಬರಿ 12 ಗಂಟೆಗಳ ಕಾರ್ಯಾಚರಣೆ ಮೂಲಕ ಉತ್ತರ ಪ್ರದೇಶದಲ್ಲಿ ಹೊಡೆದುರುಳಿಸಲಾಗಿದೆ.
ಲಖನೌನ ಠಾಕೂರ್‌ಗಂಜ್ ಪ್ರದೇಶದಲ್ಲಿ  ನಿನ್ನೆ ರಾತ್ರಿಯಿಂದ ಕಾರ್ಯಾಚರಣೆಗಿಳಿದಿದ್ದ ಎಟಿಎಸ್ ಅಧಿಕಾರಿಗಳು ಕೊನೆಗೂ ತಮ್ಮ ಕಾರ್ಯದಲ್ಲಿ ಸಫಲರಾಗಿದ್ದಾರೆ. 
 
ಉಗ್ರ ಸೈಪುಲ್ಲಾ ಹತ್ಯೆ ಬಳಿಕ ಆತ ಅಡಗಿದ್ದ ಮನೆಯ ಕದವನ್ನು ತೆರೆಯಲಾಗಿ ಆತನ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳಿರುವುದು ಪತ್ತೆಯಾಗಿದೆ, ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಲಾ ಆ್ಯಂಡ್ ಆರ್ಡರ್) ದಲ್ಜಿತ್ ಚೌಧರಿ ತಿಳಿಸಿದ್ದಾರೆ.
 
ಮೊದಲು ಮನೆಯೊಳಗೆ ಒಂದಕ್ಕಿಂತ ಹೆಚ್ಚು ಜನರಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಒಳಗೆ ಒಂದೇ ಮೃತ ದೇಹ ಸಿಕ್ಕ ಬಳಿಕ ಅಲ್ಲಿ ಒಬ್ಬನೇ ಇದ್ದುದು ಪತ್ತೆಯಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ. 
 
ಸ್ಥಳದಿಂದ ಎಂಟು ಪಿಸ್ತೂಲ್, ಅಪಾರ ಸುತ್ತು ಗುಂಡು, ಸ್ಫೋಟಕ ವಸ್ತುಗಳು, ಚಿನ್ನ, ನಗದು, ಪಾಸ್ಪೋರ್ಟ್, ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
 
ಆತ ಎಂಬುದನ್ನು ಎಟಿಎಸ್ ಐಜಿ ಅಸೀಮ್ ಅರುಣ್ ದೃಢಪಡಿಸಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಮ್ಮ ತಂದೆ ಹೆಬ್ಬೆಟ್ಟು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನೋಡೀಪ್ಪಾ ದೇಶಪಾಂಡೆ, ನಿಮಗೆ ತಲೆತಲಾಂತರದಿಂದ ಶಿಕ್ಷಣ ಸಿಕ್ಕಿದೆ. ಆದರೆ ನಮ್ಮ ಕುಟುಂಬದಲ್ಲಿ ...

news

ಬೆಂಗಳೂರು ಜನಸಂದಣಿ ತಪ್ಪಿಸಲು ಕೆಜಿಎಫ್`ನಲ್ಲಿ ತಲೆ ಎತ್ತಲಿದೆ ನವನಗರ

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆಂಗಳೂರು ನಗರದ ಜನಸಂದಣಿ ತಪ್ಪಿಸಲು ಕೆಜಿಎಫ್ ಬಳಿ ನವನಗರ ...

news

ಅಂತರ್ಜಾಲದಲ್ಲಿ ನಗೆಪಾಟಲಿಗೀಡಾದ ರಾಹುಲ್ ಗಾಂಧಿ ಹೇಳಿಕೆ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡುವ ಗಂಭೀರ ಹೇಳಿಕೆಗಳು ಕೆಲವೊಮ್ಮೆ ...

news

ಫೇಸ್ ಬುಕ್ ನಲ್ಲಿ ಪ್ರಧಾನಿ ಮೋದಿ ಮಾಡಿದ ಮೋಡಿ ಏನು ಗೊತ್ತಾ?

ನವದೆಹಲಿ: ಪ್ರಧಾನಿ ಮೋದಿ ಹಿಂದಿನ ಪ್ರಧಾನಿಗಳಂತಲ್ಲ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಜರನ್ನು ...

Widgets Magazine
Widgets Magazine