Widgets Magazine

ಪುಟ್ಟ ಬಾಲಕನ ಕೈಯಿಂದ ಈ ಕೆಲಸ ಮಾಡಿಸಿ ಜನರ ಟೀಕೆಗೆ ಗುರಿಯಾದ ತಮಿಳುನಾಡು ಅರಣ್ಯ ಸಚಿವ

ಚೆನ್ನೈ| pavithra| Last Modified ಶುಕ್ರವಾರ, 7 ಫೆಬ್ರವರಿ 2020 (07:00 IST)
ಚೆನ್ನೈ : ಬುಡಕಟ್ಟು ಜನಾಂಗದ ಪುಟ್ಟ ಬಾಲಕನ ಕೈಯಿಂದ ಈ ಕೆಲಸವನ್ನು ಮಾಡಿಸಿಕೊಂಡ ತಮಿಳುನಾಡು ಅರಣ್ಯ ಸಚಿವ ದಿಂಡುಗಲ್ ಸಿ.ಶ್ರೀನಿವಾಸ್ ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರುಯಾಗಿದ್ದಾರೆ.

ತೆಪ್ಪಕಾಡು ಮುದುಮಲೈ ಹುಲಿ ಮೀಸಲು ಪ್ರದೇಶದಲ್ಲಿ ಶಿಬಿರದ ಉದ್ಘಾಟನಾ ಕಾರ್ಯಕ್ರಮಕ್ಕೆ  ಆಗಮಿಸಿದ ಸಚಿವ ಸಿ.ಶ್ರೀನಿವಾಸ್ ಅಲ್ಲಿ ಶಿಬಿರಕ್ಕೆ ತೆರಳುವ ಮುನ್ನ ಬುಡಕಟ್ಟು ಜನಾಂಗದ ಪುಟ್ಟ ಬಾಲಕನೊಬ್ಬನನ್ನು ಕರೆದು  ತಮ್ಮ ಪಾದರಕ್ಷೆಯ ಬೆಲ್ಟ್ ನ್ನು ತೆಗೆಯುವಂತೆ ಹೇಳಿದ್ದಾರೆ. ಆಗ ಬಾಲಕ ಅವರ ಪಾದರಕ್ಷೆಯ ಬೆಲ್ಟ್ ನ್ನು ತೆಗೆದಿದ್ದಾನೆ.

 

ಪುಟ್ಟ ಬಾಲಕನ ಕೈಯಿಂದ ಈ ಕೆಲಸ ಮಾಡಿಕೊಂಡ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರು ಸಚಿವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :