ತಮಿಳುನಾಡು: ಪಳನಿಸ್ವಾಮಿ-ಪನ್ನೀರ್ ಸೆಲ್ವಂ ಬಣ ವಿಲೀನ?

ಚೆನ್ನೈ, ಗುರುವಾರ, 10 ಆಗಸ್ಟ್ 2017 (12:45 IST)

Widgets Magazine

ಎಐಎಡಿಎಂಕೆಯ ಪಳನಿಸ್ವಾಮಿ ಬಣ ಮತ್ತು ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣ ವಿಲೀನವಾಗುವ ನಿರ್ಧಾರ ತೆಗೆದುಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.
ಟಿಟಿವಿ ದಿನಕರನ್ ಮತ್ತು ಕೆ. ಶಶಿಕಲಾ ಅವರನ್ನು ಪಕ್ಷದ ಚಟುವಟಿಕೆಗಳಿಂದ ದೂರವಿಡಲು ವಿಲೀನದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
 
ಟಿಟಿವಿ ದಿನಕರನ್ ಮತ್ತು ಶಶಿಕಲಾರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎನ್ನುವುದೇ ಮಾಜಿ ಪನ್ನೀರ್ ಸೆಲ್ವಂ ಬಣದ ಪ್ರಮುಖ ಬೇಡಿಕೆಯಾಗಿದೆ ಎನ್ನಲಾಗಿದೆ.
 
ಎಡಪ್ಪಾಡಿ ಪಳನಿಸ್ವಾಮಿ ಮುಖ್ಯಮಂತ್ರಿ ಸ್ಥಾನದಲ್ಲಿಯೇ ಮುಂದುವರಿಯಲಿದ್ದಾರೆ. ಮಾಜಿ ಸಿಎಂ ಪನ್ನೀರ್ ಸೆಲ್ವಂ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಬಗ್ಗೆ ಸಂಧಾನ ಸೂತ್ರ ರೂಪಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ತಮಿಳುನಾಡು ಪಳನಿಸ್ವಾಮಿ ಪನ್ನೀರ್ ಸೆಲ್ವಂ ವಿಲೀನ ಶಶಿಕಲಾ ಟಿಟಿವಿ.ದಿನಕರನ್ Palaniswamy Merger Sasikala Tamil Nadu Pannir Selvam Ttv Dinakaran

Widgets Magazine

ಸುದ್ದಿಗಳು

news

ಐಟಿಯಿಂದ ನನಗೆ ಸಮನ್ಸ್ ಬಂದಿಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: ಐಟಿ ಇಲಾಖೆಯಿಂದ ಸಮನ್ಸ್ ಬಂದ ಹಿನ್ನಲೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಅಧಿಕಾರಿಗಳ ಎದುರು ...

news

ಚೀನಾ ಡೇ ಆಚರಣೆ ರದ್ದುಗೊಳಿಸಿದ ಶಾಲೆ

ಬೆಂಗಳೂರು: ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಚೀನಾ ಡೇ ...

news

ಭಾರತ-ಚೀನಾ ನಡುವೆ ಯುದ್ಧ ಭೀತಿ? ಸನ್ನದ್ಧವಾಗಿದೆಯಾ ಭಾರತೀಯ ಸೇನೆ?

ನವದೆಹಲಿ: ಡೋಕ್ಲಾಂ ಗಡಿ ವಿವಾದದ ವಿಚಾರದಲ್ಲಿ ಭಾರತ ಮತ್ತು ಚೀನಾ ನಡುವೆ ಯುದ್ಧ ಭೀತಿ ನಿರ್ಮಾಣವಾಗಿರುವ ...

news

ಸೋನಿಯಾ ಗಾಂಧಿಗೆ ಸಚಿವೆ ಸ್ಮೃತಿ ಇರಾನಿ ಲೇವಡಿ

ನವದೆಹಲಿ: ಕ್ವಿಟ್ ಇಂಡಿಯಾ ಚಳವಳಿಯ 70 ನೇ ವರ್ಷಾಚರಣೆ ಸಂದರ್ಭ ಸಂಸತ್ತಿನಲ್ಲಿ ವಿಪಕ್ಷ ಕಾಂಗ್ರೆಸ್ ಧುರೀಣೆ ...

Widgets Magazine