ತಮಿಳುನಾಡು ರಾಜಕೀಯ ಬಿಕ್ಕಟ್ಟು: ರಾಷ್ಟ್ರಪತಿ ಭೇಟಿಯಾದ ಡಿಎಂಕೆ ನಾಯಕರು

ನವದೆಹಲಿ, ಗುರುವಾರ, 31 ಆಗಸ್ಟ್ 2017 (21:03 IST)

ಬಿಕ್ಕಟ್ಟು ಮುಂದುವರಿದಿದ್ದು, ಡಿಎಂಕೆ ನಾಯಕರು ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿ ಸರಕಾರಕ್ಕೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣಗಳು ಒಂದಾಗುತ್ತಿದ್ದಂತೆ ಟಿಟಿವಿ ದಿನಕರನ್ ಬಣದಲ್ಲಿ 21 ಶಾಸಕರು ಗುರುತಿಸಿಕೊಂಡಿದ್ದರಿಂದ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಆದ್ದರಿಂದ, ಸರಕಾರಕ್ಕೆ ವಿಶ್ವಾಸಮತ ಯಾಚಿಸುವಂತೆ ಆದೇಶ ನೀಡಿ ಎಂದು ಡಿಎಂಕೆ ಹಿರಿಯ ನಾಯಕ ಎಂ.ಕೆ.ಸ್ಟಾಲಿನ್ ರಾಷ್ಟ್ರಪತಿಯವರಿಗೆ ಕೋರಿದ್ದಾರೆ.
 
ಡಿಎಂಕೆ ಹಿರಿಯ ನಾಯಕ ಸ್ಟಾಲಿನ್ ಮನವಿಯನ್ನು ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಡಿಎಂಕೆ ನಾಯಕರು ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.
 
ಒಂದು ವೇಳೆ, ರಾಷ್ಟ್ರಪತಿ ಕೋವಿಂದ್ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ನ್ಯಾಯಾಲಯದ ಮೊರೆಹೋಗುವುದಾಗಿ ಡಿಎಂಕೆ ಮುಖಂಡ ಸ್ಟಾಲಿನ್ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೆಸಾರ್ಟ್‌ನಲ್ಲಿ ಸಚಿವರ ಕಾರ್ಯವೈಖರಿ ಮೌಲ್ಯಮಾಪನ ಸಭೆ

ಬೆಂಗಳೂರು: ದೇವನಹಳ್ಳಿಯ ಖಾಸಗಿ ರೆಸಾರ್ಟ್‌ನಲ್ಲಿ ಸಚಿವರ ಕಾರ್ಯವೈಖರಿ ಮೌಲ್ಯಮಾಪನ ಸಭೆ ನಡೆಯುತ್ತಿದ್ದು ...

news

ಗುಜರಾತ್‌ನಲ್ಲಿ ಮತ್ತೆ ಬಿಜೆಪಿ ಸರಕಾರದ ಅಡಳಿತ

ಗಾಂಧಿನಗರ: ಗುಜರಾತ್‌ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಎಬಿಪಿ ನ್ಯೂಸ್ ...

news

ಗುದ್ದಲಿ ಹಿಡಿದಿದ್ದ ಸಿಇಓ ಅಶ್ವತಿ ಕಾರ್ಯಕ್ಕೆ ಸಿಎಂ ಶ್ಲಾಘನೆ

ಬೆಂಗಳೂರು: ಗ್ರಾಮೀಣ ಪ್ರದೇಶಗಳಿಗೆ ತೆರಳಿ ಶೌಚಾಲಯ ನಿರ್ಮಾಣಕ್ಕಾಗಿ ಗುದ್ದಲಿ ಹಿಡಿದು ಶೌಚಗುಂಡಿ ...

news

ಆಘಾತಕಾರಿ! ನಾಯಿಮರಿಯ ಮೇಲೆ ಅತ್ಯಾಚಾರವೆಸಗಿ ಕೊಂದ ಚಾಲಕ

ನವದೆಹಲಿ: ವಿಲಕ್ಷಣ ಪ್ರಕರಣವೊಂದರಲ್ಲಿ, ಟ್ಯಾಕ್ಸಿ ಚಾಲಕನೊಬ್ಬ ನಾಯಿಮರಿ ಸಾಯಿುವವರೆಗೂ ಅತ್ಯಾಚಾರವೆಸಗಿದ ...

Widgets Magazine