ಫೇಸ್‌ಬುಕ್‌ ಚಾಟ್‌ನಲ್ಲಿ ಪ್ರಧಾನಿ ಮೋದಿ ವಿರುದ್ಧ ಅಶ್ಲೀಲ ಪದ ಬಳಕೆ: ಯುವಕ ಅರೆಸ್ಟ್

ಚೆನ್ನೈ, ಗುರುವಾರ, 2 ನವೆಂಬರ್ 2017 (11:25 IST)

ಫೇಸ್‌ಬುಕ್‌ನಲ್ಲಿ ಪ್ರಧಾನಿ ಮೋದಿಯವರನ್ನು ಅಸಭ್ಯ ಪದಗಳಿಂದ ನಿಂದಿಸಿದ ಆರೋಪದ ಮೇಲೆ ವಿರುಧನಗರ್ ಜಿಲ್ಲೆಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಕೆ.ಮಾರಿಮುತ್ತು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಎಸ್.ತಿರುಮುರುಗನ್ ಎನ್ನುವ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. 
 
ತಿರುಮುರುಗನ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಖ್ಯಾತ ನಟ ವಿಜಯ್ ಅಭಿಮಾನಿಯಾಗಿದ್ದಾನೆ. ನ್ಯಾಯಾಲಯ ತಿರುಮುರುಗನ್‌ಗೆ 15 ದಿನಗಳ ನ್ಯಾಯಾಂಗ ಆದೇಶ ಹೊರಡಿಸಿದೆ. 
 
ನಟ ವಿಜಯ್ ನಟಿಸಿದ ಮೆರ್ಸಲ್ ಚಿತ್ರದಲ್ಲಿನ ವಿವಾದದ ಬಗ್ಗೆ ತಿರುಮುರುಗನ್ ನಡೆಸಿದ ಚಾಟ್‌ನ್ನು ಬಿಜೆಪಿ ಕಾರ್ಯದರ್ಶಿ ಮಾರಿಮುತ್ತು ಶೇರ್ ಮಾಡಿದ್ದಾರೆ.  ನಾನು ನಟ ವಿಜಯ್‌ರನ್ನು ಟೀಕಿಸಿಲ್ಲ. ಜಿಎಸ್‌ಟಿ ಬಗ್ಗೆ ಸತ್ಯಸಂಗತಿಗಳನ್ನು ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದ್ದಾರೆ. 
 
ಫೇಸ್‌ಬುಕ್‌ನಲ್ಲಿ ತಿರುಮುರುಗನ್ ಬಳಸಿದ ಶಬ್ದಗಳು ಸಾರ್ವಜನಿಕವಾಗಿ ಲಭ್ಯವಿವೆ. ಅದರಲ್ಲಿರುವ ಕೆಟ್ಟ ಪದ ಬಳಕೆ ಪ್ರಧಾನಿ ಮೋದಿಯವರ ಘನತೆ, ಗೌರವಕ್ಕೆ ಧಕ್ಕೆ ತರಲಿದೆ. ಫೇಸ್‌ಬುಕ್‌ನಲ್ಲಿ ಬಳಸಿದ ಕೆಟ್ಟ ಪದಗಳು ನನಗೆ ಹೇಳಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಮೋದಿಯವರನ್ನು ಹೀಗೆ ಟೀಕಿಸುತ್ತಾರಾ? ಎಂದು ನಾನು ಕೇಳಿದಕ್ಕೆ ತಿರುಮುರುಗನ್, ನಾನು ಹಾಗೇ ಟೀಕಿಸುವುದು ಎಂದು ಹೇಳಿದ್ದಾಗಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಾರಿಮುತ್ತು ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪರಿವರ್ತನಾ ಯಾತ್ರೆಗೆ ಕ್ಷಣಗಣನೆ: ಬಿಐಇಸಿ ಮೈದಾನದಲ್ಲಿ ಸಕಲ ಸಿದ್ಧತೆ

ಬೆಂಗಳೂರು: ಬಿಜೆಪಿಯ ಮಹಾತ್ವಾಕಾಂಕ್ಷಿ ಪರಿವರ್ತನಾ ಯಾತ್ರೆ ಆರಂಭಕ್ಕೆ ನೆಲಮಂಗಲ ಮಾದವಾರ ಬಿಐಇಸಿ ...

news

ಭೂತಾನ್ ನ ಪುಟಾಣಿ ಯುವರಾಜನಿಗೆ ಪ್ರಧಾನಿ ಮೋದಿ ಕೊಟ್ಟ ಗಿಫ್ಟ್ ಏನು ಗೊತ್ತಾ?

ನವದೆಹಲಿ: ನಾಲ್ಕು ದಿನಗಳ ಭಾರತ ಭೇಟಿಗೆ ಬಂದ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ ಗೇಯ್ಲ್ ವಾಂಗ್ ಚುಕ್ ...

news

ಭಯೋತ್ಪಾದಕರು ಹಿಂದೂ ಶಿಬಿರಗಳಲ್ಲೂ ಹರಡಿದ್ದಾರೆ: ಕಮಲ್ ಹಾಸನ್

ಚೆನ್ನೈ: ಇತ್ತೀಚೆಗೆ ಕಮಲ್ ಹಾಸನ್ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ.

news

ಅಮ್ಮನ ಕ್ಷೇತ್ರದ ಸಂತ್ರಸ್ತರ ಭೇಟಿಗೆ ತೆರಳಿದ ರಾಹುಲ್ ಗಾಂಧಿ

ರಾಯ್ ಬರೇಲಿ: ಸೋನಿಯಾ ಗಾಂಧಿ ಪ್ರತಿನಿಧಿಸುವ ಸಂಸದೀಯ ಕ್ಷೇತ್ರ ರಾಯ್ ಬರೇಲಿಯಲ್ಲಿ ಉಷ್ಣವಿದ್ಯುತ್ ನಿಗಮ ...

Widgets Magazine
Widgets Magazine