15 ದಿನದೊಳಗೆ ಬಹುಮತ ಸಾಬೀತುಪಡಿಸಲು ಪಳನಿಸ್ವಾಮಿಗೆ ರಾಜ್ಯಪಾಲರ ಗಡುವು

ಚೆನ್ನೈ, ಗುರುವಾರ, 16 ಫೆಬ್ರವರಿ 2017 (12:12 IST)

ತಮಿಳುನಾಡು ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಬಂಟ ಎಡಪ್ಪಾಡಿ ಪಳನಿಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ. 15  ದಿನದೊಳಗೆ ಬಹುಮತ ಸಾಬೀತುಪಡಿಸಲು ಪಳನಿಸ್ವಾಮಿಗೆ ರಾಜ್ಯಪಾಲರ ಗಡುವು ನೀಡಿದ್ದಾರೆ.
 
ಗವರ್ನರ್ ಸಿ.ವಿದ್ಯಾಸಾಗರ್ ರಾವ್ ಇಂದು ಪಳನಿಸ್ವಾಮಿಗೆ ಸರಕಾರ ರಚಿಸುವ ಆಹ್ವಾನ ನೀಡಿದ್ದಾರೆ.ಇಂದು ಸಂಜೆ 4.30 ಕ್ಕೆ ಪಳನಿಸ್ವಾಮಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಭಾವಿ ಸಿಎಂ ಪಳನಿಸ್ವಾಮಿ ತಮ್ಮೊಂದಿಗೆ 124 ಶಾಸಕರ ಬಲವಿದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದ್ದರಿಂದ, ಸರಕಾರ ರಚನೆಗೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.
 
ತಮಿಳುನಾಡು ರಾಜಕೀಯ ಬಿಕ್ಕಟ್ಟಿನಲ್ಲಿ ಶಶಿಕಲಾ ಬಣದ ಕೈ ಮೇಲಾಗಿದ್ದು, ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಬಣದ ಬಲ ಕುಸಿದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ವಿ.ಕೆ.ಶಶಿಕಲಾ ಎಡಪ್ಪಾಡಿ ಪಳನಿಸ್ವಾಮಿ ಪನ್ನೀರ್ ಸೆಲ್ವಂ ಸಿ.ವಿದ್ಯಾಸಾಗರ್ ರಾವ್ Shashikala Panneerselvam Yedappadi Palani Swami C.vidyasagar Rao

ಸುದ್ದಿಗಳು

news

ಕಿವುಡಿ, ಮೂಕಿ ಮಗಳ ಮೇಲೆ ತಂದೆಯಿಂದ ಅತ್ಯಾಚಾರ

ತನ್ನ 15 ವರ್ಷದ ಮಗಳ ಮೇಲೆ ಅತ್ಯಾಚಾರಗೈದಿದ್ದ ಪಾಪಿ ತಂದೆಗೆ ವಿಜಯವಾಡದ ಸ್ಥಳೀಯ ನ್ಯಾಯಾಲಯ 10 ವರ್ಷಗಳ ...

news

ನಿನ್ನೆ ಊಟವನ್ನೇ ಮಾಡದ ಶಶಿಕಲಾ ನಟರಾಜನ್ ಗೆ ಇಂದು ತಿಂಡಿಗೆ ಪೊಂಗಲ್ ಬೇಕಂತೆ!

ಪರಪ್ಪನ ಅಗ್ರಹಾರ ಜೈಲು ಸೇರಿರುವ ಶಶಿಕಲಾ ನಟರಾಜನ್ ನಿನ್ನೆ ರಾತ್ರಿ ಊಟವನ್ನೇ ಮಾಡದೆ ಮೌನ ವ್ರತದಲ್ಲಿದ್ದ ...

news

ಪಳನಿ ಸ್ವಾಮಿಗೆ ಆಹ್ವಾನ, ಪನೀರ್ ಸೆಲ್ವಂ ಬಣದ ಬಂಡಾಯ ಠುಸ್!

ರಾಜ್ಯಪಾಲರ ಆಹ್ವಾನದ ಮೇರೆಗೆ ಸರ್ಕಾರ ರಚಿಸಲು ಹೊರಟಿರುವ ಎಐಎಡಿಎಂಕೆ ಪಕ್ಷದ ಶಾಸಕಾಂಗ ಪಕ್ಷದ ನಾಯಕ ...

news

ತಮಿಳುನಾಡು ರಾಜಕೀಯ ಹೈಡ್ರಾಮಾಕ್ಕೆ ತೆರೆ! ಎಡಪ್ಪಾಡಿ ಪಳನಿ ಸ್ವಾಮಿ ಸಿಎಂ

ಶಶಿಕಲಾ ಬಣದ ಎಡಪ್ಪಾಡಿ ಪಳನಿಸ್ವಾಮಿಗೆ ಸರ್ಕಾರ ರಚಿಸಲು ರಾಜ್ಯಪಾಲ ಸಿ ವಿದ್ಯಾಸಾಗರ್ ರಾವ್ ಆಹ್ವಾನ ...

Widgets Magazine