ಹಣದ ಹೊಳೆ ನೋಡಿ ಚುನಾವಣೆಯನ್ನೇ ರದ್ದುಗೊಳಿಸಿದ ಚುನಾವಣಾ ಆಯೋಗ!

Chennai, ಸೋಮವಾರ, 10 ಏಪ್ರಿಲ್ 2017 (09:27 IST)

Widgets Magazine

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾರಿಂದ ತೆರವಾದ ಆರ್ ಕೆ ನಗರ ಉಪಚುನಾವಣೆಯಲ್ಲಿ ಹಣದ ಹೊಳೆ ನಡೆಯುತ್ತಿರುವುದು ನೋಡಿ ಚುನಾವಣೆಯನ್ನೇ ರದ್ದುಗೊಳಿಸಿದೆ.


 
 
ಏಪ್ರಿಲ್ 12 ಕ್ಕೆ ಇಲ್ಲಿ ಮತದಾನ ನಡೆಯಬೇಕಿತ್ತು. ಆದರೆ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಇಲ್ಲಿ ಹಣ ಹಂಚುವಿಕೆ ಜೋರಾಗಿದ್ದು, ಆದಾಯ ತೆರಿಗೆ ಇಲಾಖೆಯೂ ಆಯೋಗಕ್ಕೆ ವರದಿ ನೀಡಿತ್ತು. ಈ ಎಲ್ಲಾ ಹಿನ್ನಲೆಯಲ್ಲಿ ಇಲ್ಲಿ ನಡೆಯಬೇಕಿದ್ದ ಚುನಾವಣೆಯನ್ನೇ ಆಯೋಗ ರದ್ದುಪಡಿಸಿದೆ.
 
 
ಪ್ರಮುಖ ರಾಜಕೀಯ ಪಕ್ಷಗಳು ಪಕ್ಷ ಬೇಧವಿಲ್ಲದೆ ಮತದಾರರಿಗೆ ಬೇಕಾ ಬಿಟ್ಟಿ ಹಣ ಹಂಚುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ಕೆಲವು ಸುದ್ದಿ ಮಾಧ್ಯಮಗಳು ಬಿತ್ತರಿಸಿದ್ದವು. ಅದರ ವರದಿ ಪ್ರಕಾರ, ಜನ ತಮ್ಮ ಕೆಲಸ ಹೋದರೂ, ಪರವಾಗಿಲ್ಲ ಎಂದು ರಾಜಕೀಯ ಪಕ್ಷಗಳು ನೀಡುವ ದುಡ್ಡಿಗಾಗಿ ಕಾದುಕುಳಿತಿರುತ್ತಿದ್ದರಂತೆ! ಒಂದು ವೋಟಿಗೆ 4 ಸಾವಿರ ರೂ.ಗಳವರೆಗೂ ಬೆಲೆ ಕಟ್ಟಲಾಗುತ್ತಿತ್ತು ಎನ್ನಲಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರ್.ಕೆ. ನಗರ ಉಸಪಚುನಾವಣೆ ರದ್ದುಮಾಡಿದ ಚುನಾವಣಾ ಆಯೋಗ

ಭಾರೀ ಚುನಾವಣಾ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಏಪ್ರಿಲ್ 12ರಂದು ನಡೆಯಬೇಕಿದ್ದ ಚೆನ್ನೈನ ಆರ್.ಕೆ. ನಗರ ...

news

ಪೊಲೀಸ್ ಬೈಕ್`ಗೆ ಕಾರು ಡಿಕ್ಕಿ: ಎಎಸ್ಐಗೆ ಗಂಭೀರ ಗಾಯ

ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಬೈಕ್`ಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಕಬ್ಬನ್ ...

news

‘ನನ್ನ ಮಕ್ಕಳು ಬಡತನದಿಂದ ಸಾಯುವುದನ್ನು ನೋಡಲಾರೆ’

ಪಾಟ್ನಾ: ನನ್ನ ಮಕ್ಕಳು ಬಡತನದಿಂದ ಸಾಯುವುದನ್ನು ನೋಡಲಾರೆ. ಹೀಗಾಗಿ ಅವರಿಗೆ ಬೇಕಾದ ವ್ಯವಹಾರ ...

news

ಬದುಕಿರುವ ಬಾಲಿವುಡ್ ನಟನಿಗೆ ಶ್ರದ್ದಾಂಜಲಿ ಸಲ್ಲಿಸಿದ ಶಾಸಕರು!

ಮೇಘಾಲಯ: ಸಾಮಾನ್ಯವಾಗಿ ಮೃತಪಟ್ಟ ವ್ಯಕ್ತಿಯ ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಸುವುದು ಸಾಮಾನ್ಯ. ಆದರೆ ...

Widgets Magazine Widgets Magazine