ಉದ್ಯೋಗ ಅಭದ್ರತೆ: ಹೋಟೆಲ್ ಟೆರೇಸ್`ನಿಂದ ಜಿಗಿದು ಐಟಿ ಉದ್ಯೋಗಿ ಆತ್ಮಹತ್ಯೆ

ಪುಣೆ, ಶುಕ್ರವಾರ, 14 ಜುಲೈ 2017 (10:51 IST)

ಆಂಧ್ರಪ್ರದೇಶ ಮೂಲದ ಸಾಫ್ಟ್`ವೇರ್ ಇಂಜಿನಿಯರ್ ಹೋಟೆಲ್ ಟೆರೇಸ್`ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯ ವಿಮಾನ ನಗರದಲ್ಲಿ ನಡೆದಿದೆ. ಕೆಲಸದ ಅಭದ್ರತೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ..


25 ವರ್ಷದ ಗೋಪಿಕೃಷ್ಣ ದುರ್ಗಾದಾಸ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಈ ಹಿಂದೆ ನವದೆಹಲಿ ಮತ್ತು ಹೈದ್ರಾಬಾದ್`ನಲ್ಲೂ ಕೆಲಸ ಮಾಡಿದ್ದರು. 4 ದಿನಗಳ ಹಿಂದಷ್ಟೇ ಪುಣೆಯ ಐಟಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಉದ್ಯೋಗದಾತರು ಆತನನ್ನ ಹೋಟೆಲ್ ರೂಮಿನಲ್ಲಿ ಇಟ್ಟಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಸೂಸೈಡ್ ನೋಟ್ ಬರೆದಿಟ್ಟಿರುವ ಟೆಕ್ಕಿ, ಮಣಿಕಟ್ಟು ಕುಯ್ದುಕೊಂಡು, 4 ಅಂತಸ್ತಿನ ಹೋಟೆಲ್`ನ ಟೆರೇಸ್`ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸ್ವಿಮ್ಮಿಂಗ್ ಪೂಲ್ ಬಳಿ ರಕ್ತದ ಮಡುವಿನಲ್ಲಿದ್ದ ಮೃತದೇಹ ಕಂಡ ಹೊಟೆಲ್ ಸಿಬ್ಬಂದಿ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.

`ಐಟಿ ವಲಯದಲ್ಲಿ ಕೆಲಸದ ಭದ್ರತೆ ಇಲ್ಲ. ನನ್ನ ಕುಟುಂಬವನ್ನ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಎಂಬ ಭಯ ನನಗೆ ಕಾಎಡುತ್ತಿದೆ. ಭವಿಷ್ಯದ ಬಗ್ಗೆ ನನಗೆ ಚಿಂತೆಯಾಗಿದೆ. ನಾವು ಅಷ್ಟು ಬಲಿಷ್ಠವರ್ಗದವರಲ್ಲ ಎಂದು ಸೂಸೈಡ್ ನೋಟ್`ನಲ್ಲಿ ಟೆಕ್ಕಿ ಬರೆದಿದ್ದಾನೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಟೆಕ್ಕಿ ಆತ್ಮಹತ್ಯೆ. ಪುಣೆ ಉದ್ಯೋಗ ಅಭದ್ರತೆ Job It Insecurity

ಸುದ್ದಿಗಳು

news

‘ನಿಮ್ಮ ಬಾಡಿ ಕರೆಕ್ಟ್ ಶೇಪ್ ನಲ್ಲಿದೆ’

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ...

news

ಭಾರತ ಸುತ್ತುವರಿಯುತ್ತಿರುವ ಚೀನಾ ಪಡೆಗಳು

ನವದೆಹಲಿ: ಸಿಕ್ಕಿಂ ಗಡಿಯಲ್ಲಿ ಸೇನಾ ಪಡೆಗಳನ್ನು ಬಿಟ್ಟು ಗಡಿ ತಗಾದೆ ತೆಗೆಯುತ್ತಿರುವ ಚೀನಾ ಮತ್ತೊಂದೆಡೆ ...

news

ಪ್ರಧಾನಿ ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಪಾಕ್ ಪ್ರಧಾನಿ

ಪಾಕಿಸ್ತಾನ ಪ್ರಧಾನಿ ನವಾಜ್ ಷರೀಪ್ ಅವರಿಗೆ ಬ್ರಷ್ಟಾಚಾರ ಹಗರಣದ ಕುಣಿಕೆ ಬಿಗಿಗೊಂಡಿದ್ದು, ಅಧಿಕಾರಕ್ಕೆ ...

news

ಬಿಜೆಪಿಯವರಿಗೆ ಕರಾವಳಿಯಲ್ಲಿ ಶಾಂತಿ ನೆಲೆಸುವುದು ಬೇಡವಾಗಿದೆ: ಟಿ.ಬಿ.ಜಯಚಂದ್ರ

ಬೆಂಗಳೂರು: ಬಿಜೆಪಿಯವರಿಗೆ ಕರಾವಳಿಯಲ್ಲಿ ಶಾಂತಿ ನೆಲೆಸುವುದು ಬೇಡವಾಗಿದೆ ಎಂದು ಕಾನೂನು ಖಾತೆ ಸಚಿವ ...

Widgets Magazine