ಪಠಾಣ್ ಕೋಟ್`ನಲ್ಲಿ ಮತ್ತೆ ಭೀತಿಯ ವಾತಾವರಣ

ಪಠಾಣ್ ಕೋಟ್, ಗುರುವಾರ, 4 ಮೇ 2017 (11:29 IST)

Widgets Magazine

ಉಗ್ರರ ದಾಳಿಗೆ ತುತ್ತಾಗಿದ್ದ ಪಂಜಾಬ್`ನ ಪಠಾಣ್ ಕೋಟ್`ನಲ್ಲಿ ಮತ್ತೆ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಮಿಲಿಟರಿ ನೆಲೆಯ ಕೂಗಳತೆಯ ದೂರಿನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ.


ಅನುಮಾನಾಸ್ಪದ ಬ್ಯಾಗ್`ನಲ್ಲಿ ಮೊಬೈಲ್ ಟವರ್ ಬ್ಯಾಟರಿಗಳು ಪತ್ತೆಯಾಗಿವೆ. ಬ್ಯಾಗ್`ಗಳ ಮಾಲೀಕರಾಗಿ ಪೊಲೀಸ್ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಮತ್ತೊಂದೆಡೆ ಗುರುದಾಸ್ಪುರದ ಬಳಿ ಎಸ್`ಯುವಿ ಪತ್ತೆಯಾಗಿದ್ದು, ಪೊಲೀಸರ ನಿದ್ದೆಗೆಡಿಸಿದೆ. ಕಾರಿನ ಮಾಲೀಕರ ಪತ್ತೆಗೆ ತೀವ್ರ ಶೋಧ ನಡೆಯುತ್ತಿದೆ.

ಬೆಹ್ರಾಂಪುರ್ ಚೆಕ್ ಪೋಸ್ಟ್ ಬಳಿ ಎಸ್`ಯುವಿ ಕಾರು ತಪಾಸಣೆ ಪೊಲೀಸರು ಯತ್ನಿಸಿದ್ದು, ಕಾರು ನಿಲ್ಲಿಸದೇ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಕಾರ್ ಚೇಸ್ ಮಾಡಿದಾಗ ಮಖಾನ್ ಪುರ್ ಹಳ್ಳಿಯ ಬಳಿ ಕಾರು ಬಿಟ್ಟು ಪರಾರಿಯಾಗಿದ್ದಾರೆ. ಕಾರಿನಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದಿದ್ದರೂ ನಕಲಿ ನೇಮ್ ಪ್ಲೇಟ್ ಹೊಂದಿದ ಕದ್ದ ಕಾರು ಇದಾಗಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಪಠಾಣ್ ಕೋಟ್ ದಾಳಿಗೂ ಮುನ್ನಾ ಸಹ ಈ ರೀತಿಯ ಅನುಮಾನಾಸ್ಪದ ವಾಹನ ಪತ್ತೆಯಾಗಿತ್ತು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬೆಂಗಳೂರಲ್ಲಿ ಹುಡುಗರೂ ಸೇಫ್ ಅಲ್ಲ..?

ಬೆಂಗಳೂರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಕ್ಯಾಬ್ ಡ್ರೈವರ್ ಒಬ್ಬ ...

news

ಠಕ್ಕ ಪಾಕ್ ಗೆ ತಕ್ಕ ಪಾಠ ಕಲಿಸಲು ಭಾರತ ಸಜ್ಜು

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೆ ಯುದ್ಧವಾಗುತ್ತಾ? ಈ ಪ್ರಶ್ನೆಗೆ ರಕ್ಷಣಾ ಸಚಿವ ಅರುಣ್ ...

news

ಶೀಘ್ರದಲ್ಲೇ ಬೆಂಗಳೂರಿಗೆ ಬಂದಿಳಿಯಲಿರುವ ನಯಾಗರ ಫಾಲ್ಸ್!

ಬೆಂಗಳೂರು: ಅಮೆರಿಕಾದ ವಿಶ್ವ ಪ್ರಸಿದ್ಧ ನಯಾಗರ ಫಾಲ್ಸ್ ನೋಡುವ ಮೋಹ ಎಲ್ಲರಿಗೂ ಇರುತ್ತದೆ. ಅದೀಗ ...

news

ಪಿಎಂ ಮೋದಿಗೆ ಸ್ವಾಗತ ಎಂದ ಕಾಂಗ್ರೆಸ್!

ನವದೆಹಲಿ: ಸದಾ ಪ್ರಧಾನಿ ಮೋದಿಯೆಂದರೆ ಕಿಡಿಕಾರುವ ಕಾಂಗ್ರೆಸ್ ಇದೀಗ ಈ ವಿಷಯಕ್ಕೆ ಪ್ರಧಾನಿ ಜತೆ ರಾಜಿಗೆ ...

Widgets Magazine