ಪ್ರಧಾನಿ ಮೋದಿ ಹತ್ಯೆಗೆ ಸಂಚು! ಸಾರ್ವಜನಿಕವಾಗಿಯೇ ಮೋದಿ ಕೊಲೆಯಾಗುತ್ತಾರೆಂದ ಉಗ್ರ!

ನವದೆಹಲಿ, ಶುಕ್ರವಾರ, 8 ಜೂನ್ 2018 (12:31 IST)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದಾವಾ ಸಂಘಟನೆಯ ಉಗ್ರ ಸಾರ್ವಜನಿಕವಾಗಿಯೇ ಕರೆ ನೀಡಿದ್ದಾನೆ.
 
2008 ರ ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ನೇತೃತ್ವದ ಜಮಾತ್ ಸಂಘಟನೆಯ ಪ್ರಮುಖ ಉಗ್ರ ಮೌಲಾನಾ ಬಶೀರ್ ಅಹಮ್ಮದ್ ಪ್ರಧಾನಿ ಮೋದಿ ಕೊಲೆಯಾಗುತ್ತಾರೆ ಮತ್ತು ಭಾರತ ಛಿದ್ರವಾಗಲಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾನೆ.
 
ಅಷ್ಟೇ ಅಲ್ಲದೆ, ಭಾರತ ಮತ್ತು ಅಮೆರಿಕಾದಲ್ಲಿ ಇಸ್ಲಾಂ ಧ್ವಜ ಹಾರಲಿದೆ. ಭಾರತ ಮತ್ತು ಇಸ್ರೇಲ್ ಮತ್ತಷ್ಟು ಛಿದ್ರವಾಗಲಿದೆ ಮತ್ತು ಮತ್ತಷ್ಟು ಹುತಾತ್ಮರ ಸೃಷ್ಟಿಯಾಗಲಿದೆ ಎಂದು ಈ ಉಗ್ರ ಬೆದರಿಕೆ ಹಾಕಿದ್ದಾನೆ.

ಇನ್ನೊಂದೆಡೆ ಪಶ್ಚಿಮ ಬಂಗಾಲ ಮೂಲದ ಮಾವೋವಾದಿ ಕಿಶನ್ ಎಂಬಾತ ಪ್ರಧಾನಿ ಮೋದಿಯವರನ್ನು ರೋಡ್ ಶೋ ವೇಳೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂಬ ಮಾಹಿತಿಯನ್ನು ಪುಣೆ ಪೊಲೀಸರು ಬಹಿರಂಗಪಡಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಪ್ರಧಾನಿ ಮೋದಿ ಭದ್ರತೆ ಬಿಗಿಗೊಳಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ರೆ ಹುಷಾರ್!! ಅತೃಪ್ತರಿಗೆ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತರ ...

news

ಸ್ವಾಮೀಜಿಗೆ ಸ್ಪೀಕರ್ ಪೂಜೆ, ಸಿಎಂ ಕುಮಾರಸ್ವಾಮಿಯಿಂದ ಮನೆಯಲ್ಲೇ ಚಂಡಿಕಾ ಪಾರಾಯಣ!

ಬೆಂಗಳೂರು: ಸಮ್ಮಿಶ್ರ ಸರ್ಕಾರ ಬಂದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪೂಜೆ, ಪುನಸ್ಕಾರಗಳಲ್ಲಿ ...

news

ಅಪಘಾತಕ್ಕೀಡಾದ ನಟ ಪುನೀತ್ ರಾಜ್ ಕುಮಾರ್ ಕಾರು

ಬೆಂಗಳೂರು: ಸ್ಯಾಂಡಲ್ ವುಡ್ ದೊಡ್ಮನೆ ಹುಡುಗ ನಟ, ಪುನೀತ್ ರಾಜ್ ಕುಮಾರ್ ಚಲಿಸುತ್ತಿದ್ದ ಕಾರು ...

news

ಅಧಿಕಾರ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಬೇಡವಾದ್ರು!

ಬೆಂಗಳೂರು: ಅಧಿಕಾರವಿದ್ದರೇನೇ ಮನುಷ್ಯನಿಗೆ ಬೆಲೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ...

Widgets Magazine