27 ವರ್ಷದ ಮಾನಸಿಕ ಅಸ್ವಸ್ಥನನ್ನು ಥಳಿಸಿ ಕೊಂದ ಸ್ಥಳೀಯರು

ಅತಿಥಾ 

ಬೆಂಗಳೂರು, ಶುಕ್ರವಾರ, 23 ಫೆಬ್ರವರಿ 2018 (19:18 IST)

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಕಳ್ಳತನದ ಆರೋಪದಲ್ಲಿ ಯುವಕನೊಬ್ಬನಿಗೆ ಸ್ಥಳೀಯರು ಕಟ್ಟಿಹಾಕಿ, ಹಿಗ್ಗಾಮುಗ್ಗಾ ಥಳಿಸಿದ ವಿಲಕ್ಷಣ ಘಟನೆ ಗುರುವಾರ ಸಂಜೆ ನಡೆದಿದೆ. 
ಸ್ಥಳೀಯರಿಂದ ತೀವ್ರ ಹಲ್ಲೆಗೊಳಗಾದ ಯುವಕ ಪೊಲೀಸ್ ಠಾಣೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 
ಪೊಲೀಸರ ಪ್ರಕಾರ ಗ್ರಾಮದ ಸಮೀಪದಲ್ಲಿರುವ ಕಾಡಿನಲ್ಲಿ ವಾಸವಾಗಿದ್ದ ಈ ವ್ಯಕ್ತಿಯು ಮಾನಸಿಕವಾಗಿ ಅಸ್ವಸ್ಥವಾಗಿದ್ದ ಮತ್ತು ಕೆಲವು ದಿನಗಳಿಂದ ಈತ ಊರಿನಲ್ಲಿ ಆಹಾರ ಸಾಮಾಗ್ರಿಗಳನ್ನು (ಅಕ್ಕಿ) ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.
 
ಅಟ್ಟಪ್ಪಾಡಿ ಕಡುಕ್ ಮಣ್ಣ ಎಂಬಲ್ಲಿನ 27 ವರ್ಷದ ಆದಿವಾಸಿ ಮಧು ಎಂಬ ಯುವಕ ಕಳ್ಳತನ ಮಾಡುತ್ತಿದ್ದ ಎಂದು ಆರೋಪವಿತ್ತು. ಆನಂತರ ನಾಪತ್ತೆಯಾಗಿದ್ದ ಮಧು ಎಂಬ ಈ ಯುವಕನ್ನು ಕಾಡಿನ ಹತ್ತಿರವಿದ್ದ ಒಂದು ಪ್ರದೇಶದಲ್ಲಿ ಅಲ್ಲಿನ ಗ್ರಾಮಸ್ಥರು ಸೆರೆ ಹಿಡಿದಿದ್ದರು. ಕಳ್ಳತನ ಮಾಡಿದ್ದಕ್ಕಾಗಿ ಕೆಲವು ಯುವಕರು ಮಧುವನ್ನು ಕಟ್ಟಿಹಾಕಿ ಅವನ ಮೇಲೆ ಹಲ್ಲೆ ನಡೆಸಿ ಆಮೇಲೆ ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಪೊಲೀಸರು ಮಧುವನ್ನು ವಶಕ್ಕೆ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಯುವಕ ರಕ್ತಕಾರಿ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆತನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
 
ಅಷ್ಟೇ ಅಲ್ಲದೆ ಈತನೊಂದಿಗೆ ಕ್ಲಿಕ್ಕಿಸಿಕೊಂಡು ಸೆಲ್ಫಿ ಮತ್ತು ಈತನಿಗೆ ಥಳಿಸುವಾಗ ಮಾಡಿದ ವೀಡಿಯೋವನ್ನು ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಕಳ್ಳತನ ಮಾಡಿದ್ದಾನೆ ಎಂಬ ಆರೋಪದಲ್ಲಿ ಮಾನಸಿಕ ಅಸ್ವಸ್ಥನಾದ ಯುವಕನ್ನು ಥಳಿಸಿ ಹತ್ಯೆ ಮಾಡಿದ್ದು ಮಾತ್ರವಲ್ಲದೆ ಆತನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಹಂಕಾರ ಮೆರೆದ ಯುವಕರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
 
"ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಾಗಿದೆ. ಏಳು ಆರೋಪಿಗಳನ್ನು ನಾವು ಗುರುತಿಸಿದ್ದೇವೆ, ಆದರೆ ಅವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಮಧುವಿನ ಸಾವಿನ ಕುರಿತು ಮರಣೋತ್ತರ ವರದಿ ಬಂದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ" ಎಂದು ಪಾಲಕ್ಕಾಡ್ ಪೊಲೀಸ್ ಪ್ರತೇಶ್ ಕುಮಾರ್ ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುಪಿ ಮುಖ್ಯಮಂತ್ರಿ ಯೋಗಿಯ ಸ್ವಾಗತಕ್ಕೆ ಕೇಸರಿಮಯವಾದ ಮಥುರಾ

ಮಥುರಾ: ಲಾಥ್ಮರ್ ಹೋಳಿ ಉತ್ಸವದಲ್ಲಿ ಭಾಗವಹಿಸಲು ಇಲ್ಲಿನ ಬರ್ಸಾನಾಕ್ಕೆ ಭೇಟಿ ನೀಡಲಿರುವ ಉತ್ತರ ಪ್ರದೇಶದ ...

news

ವಿದ್ವತ್ ಹಲ್ಲೆ ಕೇಸ್: ಮೊಹಮ್ಮದ್ ನಲಪಾಡ್ ಗಿಲ್ಲ ಇಂದು ಬಿಡುಗಡೆ ಭಾಗ್ಯ

ಬೆಂಗಳೂರು: ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ...

news

ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರನ ಪ್ರಕರಣದ ಬೆಳವಣಿಗೆಗಳು

ಬೆಂಗಳೂರು : ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿರುವ ಶಾಸಕ ಹ್ಯಾರಿಸ್ ಪುತ್ರ ರೌಡಿ ನಲಪಾಡ್ ಅವರ ...

news

ವಿದ್ವತ್ ಭೇಟಿಯಾಗದೇ ಆಸ್ಪತ್ರೆಗೆ ಹೋಗಿ ಬಂದ ಬಿಜೆಪಿ ನಾಯಕರ ದಂಡು

ಬೆಂಗಳೂರು: ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಹ್ಯಾರಿಸ್ ನಲಪಾಡ್ ನಿಂದ ಹಲ್ಲೆಗೊಳಗಾದ ವಿದ್ವತ್ ...

Widgets Magazine
Widgets Magazine