ಶಬರಿಮಲೆ ದೇವಾಲಯಕ್ಕೆ ತೆರಳುವ ಮಹಿಳೆಯರಿಗೆ ವಯಸ್ಸಿನ ದಾಖಲೆ ಕಡ್ಡಾಯ

ಬೆಂಗಳೂರು, ಶುಕ್ರವಾರ, 5 ಜನವರಿ 2018 (15:45 IST)

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರಿಗೆ ಇನ್ನು ಮುಂದೆ ವಯಸ್ಸಿನ ಅಧಿಕೃತ ದಾಖಲೆ ಸಲ್ಲಿಸುವುದನ್ನು ಮಾಡಲಾಗಿದೆ.
ಈ ದೇವಾಲಯದಲ್ಲಿ 10 ರಿಂದ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ನಿರ್ಬಂಧಗಳನ್ನು ಉಲ್ಲಂಘಿಸಿ ಕೆಲವು ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡಲು ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ವಯಸ್ಸಿನ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ. ಜೊತೆಗೆ ಮಹಿಳೆಯರ ವಯಸ್ಸನ್ನು ಹೊರ ನೋಟದಿಂದ ನಿರ್ಣಯಿಸುವುದು ಕಷ್ಟ, ಅದಕ್ಕಾಗಿ ನಾವು ವಯಸ್ಸಿನ ಪ್ರಮಾಣಪತ್ರಗಳನ್ನು ಪರಿಶೀಲಿಸು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
 
ಆಧಾರ್‌ ಕಾರ್ಡ್‌ ಸೇರಿದಂತೆ ಯಾವುದೇ ಅಧಿಕೃತ ದಾಖಲೆಗಳನ್ನು ಪರಿಶೀಲನೆ ಸಂದರ್ಭದಲ್ಲಿ ಮಹಿಳೆಯರು ನೀಡಬೇಕು. ಅಧಿಕೃತ ದಾಖಲೆಗಳನ್ನು ತೋರಿಸಿದರೆ ಭಕ್ತಾದಿಗಳು, ಪೊಲೀಸರು ಮತ್ತು ದೇವಸ್ಥಾನದ ಅಧಿಕಾರಿಗಳ ನಡುವಣ ವಾಗ್ವಾದವನ್ನು ತಪ್ಪಿಸಬಹುದು ಎಂದು ಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್‌ ತಿಳಿಸಿದ್ದಾರೆ.
 
ಪಂಪಾದಲ್ಲೇ ಮಹಿಳಾ ಪೊಲೀಸರು ಮತ್ತು ಟಿಡಿಬಿ ಮಹಿಳಾ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸುತ್ತಾರೆ. ತಪಾಸಣೆಯ ಬಳಿಕವೇ ಬೆಟ್ಟ ಏರಲು ಅನುಮತಿ ನೀಡಲಾಗುವುದು. ಈ ಬಾರಿ, ನವೆಂಬರ್‌ 15 ರಿಂದ ಇಲ್ಲಿಯವರೆಗೆ ಕನಿಷ್ಠ 260 ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಯಿತು. ಇವರೆಲ್ಲರೂ 10 ರಿಂದ 50 ವರ್ಷ ಒಳಗಿನವರಾಗಿದ್ದರು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಿಎಫ್‌ಐ ನಿಷೇಧದ ಪ್ರಸ್ತಾಪ ಸರ್ಕಾರದ ಮುಂದಿಲ್ಲ– ರಾಮಲಿಂಗಾರೆಡ್ಡಿ

ಪಿಎಫ್‍ಐ ಸಂಘಟನೆ ಸೇರಿದಂತೆ ಯಾವುದೇ ಸಂಘಟನೆಗಳನ್ನು ನಿಷೇಧ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ...

news

ದೀಪಕ್‌ ಕೊಲೆಗಾರರ ಮಟ್ಟ ಹಾಕಲಾಗುತ್ತೆ– ಖಾದರ್‌

ಹಿಂದೂ ಕಾರ್ಯಕರ್ತ ದೀಪಕ್‍ ರಾವ್ ಕೊಲೆ ಮಾಡಿರುವ ಕೊಲೆಗಾರರನ್ನು ಮಟ್ಟ ಹಾಕುತ್ತೇವೆ. ಎಷ್ಟೇ ...

news

ದೀಪಕ್ ಕೊಲೆಯ ಆರೋಪಿಗಳ ಬಂಧಿಸಿರುವ ಪೊಲೀಸರ ಕಾರ್ಯ ಶ್ಲಾಘನೀಯ– ಸಚಿವ

ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ...

news

ಸೋನಿಯಾರಂತೆ ರಾಹುಲ್ ಗಾಂಧಿಯೂ ಕೈ ಕೊಡಬಹುದು– ಬಿಎಸ್‌ವೈ

ಬಳ್ಳಾರಿಯಲ್ಲಿ ಸೋನಿಯಾಗಾಂಧಿ ಅವರು ಸ್ಪರ್ಧೆಮಾಡಿ ಕೈಕೊಟ್ಟು ಹೋಗಿದ್ದು, ಈಗ ಬಳ್ಳಾರಿಗೆ ಎಐಸಿಸಿ ಅಧ್ಯಕ್ಷ ...

Widgets Magazine