ಮೀಟೂ ಅಭಿಯಾನಕ್ಕೆ ಕಾನೂನು ಬೆಂಬಲ ನೀಡಲು ಮುಂದಾದ ಕೇಂದ್ರ ಸರಕಾರ

ನವದೆಹಲಿ, ಶನಿವಾರ, 13 ಅಕ್ಟೋಬರ್ 2018 (14:29 IST)

ನವದೆಹಲಿ : ಮಹಿಳೆಯರು ತಮ್ಮ ಜೀವನದಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಗಳನ್ನು ಬಹಿರಂಗಪಡಿಸುವ  ಸಲುವಾಗಿ ಇರುವ ಮೀಟೂ(#MeToo) ಅಭಿಯಾನಕ್ಕೆ ಕಾನೂನು ಬೆಂಬಲ ನೀಡಲು ಕೇಂದ್ರ ಸಚಿವೆ ಮನೇಕಾ ಗಾಂಧಿ ನಿರ್ಧರಿಸಿದ್ದಾರೆ.


ದೂರುಗಳ ವಿಚಾರಣೆಗೆ ಸಮಿತಿಯೊಂದನ್ನು ರಚಿಸಲು ಮುಂದಾಗಿದ್ದು, ಆ ಮೂಲಕ  ಹಿರಿಯ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರನ್ನೊಳಗೊಂಡ ಸಮಿತಿ ರಚನೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


ಈ ಕುರಿತು ಮಾತನಾಡಿದ ಸಚಿವೆ ಮನೇಕಾ ಗಾಂಧಿ, ‘ಅವರ ಮಾತುಗಳನ್ನ ನಂಬುತ್ತೇನೆ. ಪ್ರತಿಯೊಂದು ದೂರಿನ ಹಿಂದಿರುವ ನೋವು ಮತ್ತು  ಯಾತನೆಯನ್ನು ನಾನು ಅರಿಯಬಲ್ಲೆ. #MeToo ಅಭಿಯಾನದಲ್ಲಿ ಹೊರಬರುವ ಎಲ್ಲಾ ದೂರುಗಳನ್ನ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲು ನಾನು ಪ್ರಸ್ತಾವನೆ ಮುಂದಿಡುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.


ಮೀಟೂ ಹ್ಯಾಷ್ ಟ್ಯಾಗ್ ಮೂಲಕ ಈಗಾಗಲೇ ನಟರು, ನಿರ್ದೇಶಕರು, ಗಾಯಕರು ಹೀಗೆ ಅನೇಕ ಪುರುಷ ಸೆಲಬ್ರಿಟಿಗಳ ಕರಾಳ ಮುಖವನ್ನು ಮಹಿಳೆಯರು  ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜನಕ ರಾಜನ ಪಾತ್ರದಲ್ಲಿ ನಟಿಸಿದ ಕೇಂದ್ರ ಸಚಿವರ ಕಾಲೆಳೆದ ನೆಟ್ಟಿಗರು

ನವದೆಹಲಿ : ಕೇಂದ್ರ ಸಚಿವ ಡಾ.ಹರ್ಷವರ್ಧನ್ ಅವರು ನಾಟಕವೊಂದರಲ್ಲಿ ಜನಕ ರಾಜನ ಪಾತ್ರದಲ್ಲಿ ನಟಿಸಿದ ವಿಡಿಯೋ ...

news

ಆರೋಗ್ಯ ಕರ್ನಾಟಕ ಯೋಜನೆ ಜಾರಿ

ಮಾರ್ಚ್ ತಿಂಗಳಿನಿಂದ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ಬಂದಿದ್ದು, 1524 ಸೇವೆಗಳು ಆರೋಗ್ಯ ಕರ್ನಾಟಕ ...

news

ಮೀಟೂ ಅಭಿಯಾನಕ್ಕೆ ಬೆಂಬಲ ಸೂಚಿಸಿದ ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು : ಮಹಿಳೆಯರು ತಮ್ಮ ಜೀವನದಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಗಳನ್ನು ಬಹಿರಂಗಪಡಿಸುವ ಸಲುವಾಗಿ ...

news

ಯುವ ದಸರಾ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಕಣ್ಣೀರು ಹಾಕಿದ ಸಿಎಂ ಕುಮಾರಸ್ವಾಮಿ

ಮೈಸೂರು : ಮೈಸೂರು ದಸರಾ ಅಂಗವಾಗಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ...

Widgets Magazine