18 ವರ್ಷಗಳ ಕಾಲ ಹುಡುಗಿಯನ್ನು ಬಂಧಿಸಿಟ್ಟುಕೊಂಡ ನಿರಂತರವಾಗಿ ಅತ್ಯಾಚಾರ ಎಸಗಿದ ಈ ವೈದ್ಯ

ಇಂಡೋನೆಷಿಯಾ, ಶನಿವಾರ, 11 ಆಗಸ್ಟ್ 2018 (10:56 IST)

ಇಂಡೋನೇಷ್ಯಾ : ಜೀವ ಉಳಿಸುವ ದೇವರ ಸ್ವರೂಪವೆಂದು ಹೇಳುತ್ತಾರೆ. ಆದರೆ ಈ ದೇವರ ರೂಪದ ವೈದ್ಯನೇ ರಾಕ್ಷಸನಾಗಿ ಚಿಕಿತ್ಸೆಯ ನೆಪದಲ್ಲಿ ಯುವತಿಯೊಬ್ಬಳ ಮೇಲೆ ನಿರಂತರ ಎಸಗುತ್ತಿದ್ದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.


ಹೌದು. ಬಡ ಕುಟುಂಬವೊಂದು ಚಿಕಿತ್ಸೆಗಾಗಿ ತಮ್ಮ‌ 13 ವರ್ಷದ ಮಗಳನ್ನು ವೈದ್ಯರ ಬಳಿ ಕರೆ ತಂದಿದ್ದರು. ಆದರೆ ಆ ವೈದ್ಯನು ಚಿಕಿತ್ಸೆಗಾಗಿ ಆಕೆಯನ್ನು ಉಳಿಸಿಕೊಂಡು ಪೋಷಕರನ್ನು ಮನೆಗೆ ಕಳುಹಿಸಿದ್ದಾನೆ. ಬಳಿಕ ಆಕೆಯನ್ನು ತನ್ನ‌ ಮನೆ ಸಮೀಪದ ಗುಹೆಯಲ್ಲಿ ಬಂಧಿಸಿಟ್ಟು ಕಳೆದ 18 ವರ್ಷಗಳಿಂದ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಪೋಷಕರು ಮಗಳನ್ನು  ವಿಚಾರಿಸಲು ಬಂದಾಗ, ಆಕೆ ಜಕಾರ್ತಾಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿ ಕಳಿಸಿದ್ದನಂತೆ.


ಆದರೆ ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದಾಗ ಆತನ ಬಣ್ಣ  ಬಯಲಾಗಿದ್ದು, ಇದೀಗ ಆತ  ಪೊಲೀಸರ ಅತಿಥಿಯಾಗಿದ್ದಾನೆ. ಆತನು ಗೆಳೆಯನ ಆತ್ಮದ ಕತೆಯೊಂದನ್ನು ಕಟ್ಟಿ ಯುವತಿಯನ್ನು ನಂಬಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಎಂದು ತನಿಖಾಧಿಕಾರಿಗಳು ಅಲ್ಲಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಥಮ ಪ್ರಧಾನಿ ನೆಹರೂ ಬಗ್ಗೆ ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಜವಹರ ಲಾಲ್ ನೆಹರೂ ಬಗ್ಗೆ ರಾಜಸ್ಥಾನದ ಬಿಜೆಪಿ ಶಾಸಕ ಗ್ಯಾನ್ ದೇವ್ ...

news

ಇಂದು ಮಧ್ಯಾಹ್ನ ನಡೆಯಲಿದೆ ಸೂರ್ಯಗ್ರಹಣ! ಎಲ್ಲೆಲ್ಲಿ ಗೋಚರ?

ನವದೆಹಲಿ: ಇಂದು ಮಧ್ಯಾಹ್ನ ಸೂರ್ಯಗ್ರಹಣ ಸಂಭವಿಸಲಿದ್ದು, ವಿಶ್ವದ ಕೆಲವೆಡೆ ಮಾತ್ರ ಗೋಚರವಾಗಲಿದೆ.

news

ಕೇಂದ್ರ ಸಚಿವರ ವಿರುದ್ಧವೇ ಅತ್ಯಾಚಾರ ಪ್ರಕರಣ

ನವದೆಹಲಿ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಕೇಂದ್ರ ಸಚಿವರೊಬ್ಬರ ...

news

ನಾಟಿ ಮಾಡಲು ಬರುವ ಸಿಎಂ ಎಚ್ ಡಿಕೆಗೆ ಏನೆಲ್ಲಾ ಸ್ಪೆಷಲ್ ಐಟಂ ಮಾಡವ್ರೇ ಮಂಡ್ಯ ಮಂದಿ ಗೊತ್ತಾ?!

ಮಂಡ್ಯ: ಸಿಎಂ ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ಪೈರು ನಾಟಿ ಮಾಡುವ ಕಾರ್ಯದಲ್ಲಿ ...

Widgets Magazine