ತಾಯಿ ಪರವಾಗಿ ಮಾನತನಾಡಿದ್ದಕ್ಕೆ ತಂದೆಯಿಂದ ಮಗಳ ಕೊಲೆ

ಮಲಪ್ಪುರಂ, ಶುಕ್ರವಾರ, 8 ಡಿಸೆಂಬರ್ 2017 (16:54 IST)

ತಾಯಿಯ ಪರವಾಗಿ ಮಾತನಾಡುತ್ತಾಳೆ ಎಂದು ಸಿಟ್ಟುಗೊಂಡ ಪಾಪಿ ತಂದೆಯೊಬ್ಬ 18 ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಲೆಗೈದ ಆಘಾತಕಾರಿ ಘಟನೆ ಪೆರುವಲ್ಲುರ್ ಸಮೀಪದ ತೆನ್ಹಿಪ್ಪಲಮ್ ಜಿಲ್ಲೆಯಲ್ಲಿ ನಡೆದಿದೆ. 46 ವರ್ಷದ ಆರೋಪಿ ಶಶಿ ಪೊಲೀಸ್ ಠಾಣೆಗೆ ಶಾರಣಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
 
ಅಕ್ರಮ ಸಂಬಂಧದ ಬಗ್ಗೆ ತಂದೆ–ತಾಯಿ ನಡುವೆ ಮಾತಿಗೆ ಮಾತು ಬೆಳೆಯುತ್ತಿದ್ದ ಸಂದರ್ಭದಲ್ಲಿ ಮಗಳು ಶಾಲು ಮಧ್ಯೆ ಬಂದು ತಾಯಿ ಪರವಾಗಿ ಮಾತನಾಡಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಬುಧವಾರ ಮಧ್ಯರಾತ್ರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಇಡೀ ರಾತ್ರಿ ಶವದ ಜೊತೆ ಕಳೆದಿದ್ದಾನೆ. ಬೆಳಿಗ್ಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
 
ಘಟನೆ ನಡೆದಾಗ ಶಾಲು ತಾಯಿ ಸಂಬಂಧಿಕರ ಮನೆಗೆ ಹೋಗಿದ್ದರು. ಆರೋಪಿಗೆ ಆತನ ಪತ್ನಿಗೆ ಅಕ್ರಮ ಸಂಬಂಧವಿರೋ ಶಂಕೆ ವ್ಯಕ್ತವಾಗಿದ್ದು, ಪ್ರತೀ ಬಾರಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕೊಲೆ ಮಗಳು ಅಕ್ರಮ ಸಂಬಂಧ Murder Daughter Illegal Relationship

ಸುದ್ದಿಗಳು

news

ಸಿಸಿಬಿ ಎದುರು ರವಿ ಬೆಳಗೆರೆಯ ಹೈಡ್ರಾಮಾ!

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಸಿಸಿಬಿ ಅವರಿಂದ ರವಿ ...

news

ವಿಧಾನಸೌಧದ ಗೇಟ ಬಳಿ ನಿಂತಿದ್ದ ಕಾರಲ್ಲಿ ಕೋಟಿ ಹಣ ಪತ್ತೆ

ಬೆಂಗಳೂರು: ವಿಧಾನಸೌಧದ ಗೇಟಿನ ಬಳಿ ನಿಂತಿದ್ದ ಕಾರಲ್ಲಿ ಹಣ ಪತ್ತೆಯಾದ ಘಟನೆ ನಡೆದಿದೆ.

news

ಪ್ರಧಾನಿ ಮೋದಿ ಜನವಿರೋಧಿ ನೀತಿಗೆ ಬೇಸತ್ತು ಬಿಜೆಪಿ ಸಂಸದ ರಾಜೀನಾಮೆ

ನವದೆಹಲಿ: ಮಹಾರಾಷ್ಟ್ರದ ಗೊಂಡಿಯಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ನಾನಾ ಪಾಟೋಳೆ ರಾಜೀನಾಮೆ ...

news

ಸುನಿಲ್ ಹೆಗ್ಗರವಳ್ಳಿ ಬೆಳಗೆರೆ ಬಗ್ಗೆ ಹೇಳಿದ್ದೇನು ಗೊತ್ತಾ…?

ಬೆಂಗಳೂರು: ಖ್ಯಾತ ಪತ್ರಕರ್ತ ರವಿಬೆಳಗೆರೆ ತನ್ನ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ...

Widgets Magazine