ಕೊಡಲಿಯಿಂದ ತಂದೆ ಕತ್ತು ಸೀಳಿ ಫೆವಿಕ್ವಿಕ್ ನಿಂದ ಜೋಡಿಸಲು ಯತ್ನಿಸಿದ ಮಗ!

ಲಕ್ನೋ, ಸೋಮವಾರ, 26 ಫೆಬ್ರವರಿ 2018 (06:57 IST)

ಲಕ್ನೋ: ಮಗನೊಬ್ಬ ತಂದೆಯ ಕುತ್ತಿಗೆಗೆ ಭಾಗಕ್ಕೆ ಕೊಡಲಿಯಿಂದ ಹಲ್ಲೆ ನಡೆಸಿ, ನಂತರ ಫೆವಿಕ್ವಿಕ್ ನಿಂದ ಸೀಳಿದ ಕತ್ತಿನ ಭಾಗವನ್ನು ಜೋಡಿಸಲು ಮುಂದಾದ ದಾರುಣ ಘಟನೆಯೊಂದು ಉತ್ತರ ಪ್ರದೇಶ ರಾಜ್ಯದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.


ಜಗದೀಶ್ ಮಿಶ್ರಾ ಎಂಬಾತ ತಂದೆ ರಾಮದೇವ್ ಮಿಶ್ರಾ  ಮೇಲೆ ಹಲ್ಲೆ ಮಾಡಿದ ಮಗ. ಮನೆಯಲ್ಲಿಯೇ ಇದ್ದ ಕೊಡಲಿಯಿಂದ ತಂದೆಯ ಕುತ್ತಿಗೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಮೊದಲಿಗೆ ಒಂದೇ ಏಟಿಗೆ ತಂದೆ ಸಾವನ್ನಪ್ಪಿದ್ದಾರೆ ಎಂದು ತಿಳಿದಿದ್ದಾನೆ. ಕೆಲವೇ ಕ್ಷಣದಲ್ಲಿ ತಂದೆ ಉಸಿರಾಟ ಮತ್ತು ಚೀರಾಟ ಕೇಳಿದ ಜಗದೀಶ್ ‘ಫೆವಿಕ್ವಿಕ್’ ಸಹಾಯದಿಂದ ಸೀಳಿರುವ ಭಾಗವನ್ನು ಜೋಡಿಸಲು ಮುಂದಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ರೈಲ್ವೆ ಇಲಾಖೆಯ ನಿವೃತ್ತ ನೌಕರರಾಗಿರುವ ರಾಮ್‍ದೇವ್ ಮಗನೊಂದಿಗೆ ಸೋನಹಾ ಇಲಾಖೆಯ ದರಿಯಾಪುರ ಅರಣ್ಯ ಪ್ರದೇಶದ ಗ್ರಾಮದಲ್ಲಿ ವಾಸವಾಗಿದ್ದರು. ರಾಮ್‍ದೇವ್ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಮಂಚದ ಕೆಳಗೆಯೇ ಮಲ ವಿಸರ್ಜನೆ ಮಾಡಿದ್ದಾರೆ. ಇದರಿಂದ ಕೋಪಗೊಂಡ ಜಗದೀಶ್ ತಂದೆಯ ವಿರುದ್ಧ ಕೂಗಾಡಿದ್ದಾನೆ. ಇದೇ ವೇಳೆ ಕೊಡಲಿಯಿಂದ ತಂದೆಯ ಕತ್ತಿನ ಭಾಗಕ್ಕೆ ಹೊಡೆದಿದ್ದಾನೆ.


ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಪತ್ನಿಯೊಂದಿಗೆ ನಾಪತ್ತೆಯಾಗಿರುವ ಮಗ ಜಗದೀಶ್ ನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.. ಆಸ್ಪತ್ರೆಗೆ ದಾಖಲಾಗಿರುವ ರಾಮ್‍ದೇವ್ ಸ್ಥಿತಿ ಚಿಂತಾಜನಕವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೈಸೂರಿನ ಯುವರಾಜನಿಗೆ ನಾಮಕರಣ! ಹೆಸರೇನು ಗೊತ್ತಾ?

ಬೆಂಗಳೂರು: ಮೈಸೂರು ರಾಜವಂಶಸ್ಥರ ಹೊಸ ಕುಡಿಗೆ ನಾಮಕರಣ ಸಮಾರಂಭ ಇಂದು ನಡೆದಿದೆ. ರಾಜ ಯದುವೀರ ಮತ್ತು ...

news

ನಟಿ ಶ್ರೀದೇವಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ : ಬಹುಭಾಷಾ ನಟಿ ಮೋಹಕತಾರೆ ಶ್ರಿದೇವಿ ಅವರು ಶನಿವಾರ ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ...

news

ನಾನು ಯಾವುದೇ ಪಕ್ಷದವನಲ್ಲ ನಾನೊಬ್ಬ ಕಲಾವಿದನಷ್ಟೇ-ನಟ ಪ್ರಕಾಶ್ ರೈ

ಬೆಂಗಳೂರು : ನಾನು ಯಾವ ವೇದಿಕೆಗೆ ಹೋದರೂ ನನಗೆ ರಾಜಕೀಯ ಬಣ್ಣ ಬಳೆಯುತ್ತಿದ್ದಾರೆ. ಆದರೆ ನಾನು ಯಾವುದೇ ...

news

ಮುಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿಯೇ- ಭವಿಷ್ಯ ನುಡಿದ ದೇವೇಗೌಡ

ಬೆಂಗಳೂರು : ಕರ್ನಾಟಕದ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡರು ...

Widgets Magazine
Widgets Magazine