ಪತಿಯ ಕಿರುಕುಳಕ್ಕೆ ಬೇಸತ್ತು ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಹೈದರಾಬಾದ್, ಶುಕ್ರವಾರ, 4 ಜನವರಿ 2019 (12:01 IST)

ಹೈದರಾಬಾದ್ : ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ಸಂಬಂಧಿಕರ ಮನೆಗೆ ಬಂದು ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ಶಾಸ್ತ್ರಿ ನಗರದಲ್ಲಿ ನಡೆದಿದೆ.


ಸೋನಿಕಾ ರೆಡ್ಡಿ (31) ಆತ್ಮಹತ್ಯೆಗೆ ಶರಣಾದ ಮಹಿಳೆ. ಮೂರು ವರ್ಷಗಳ ಹಿಂದೆ ಸೋನಿಕಾ ರೆಡ್ಡಿ ತಿಮ್ಮಪುರ್ ಗ್ರಾಮದ ನಿವಾಸಿ ಉಯ್ಮ ಕಿರಣ್ ರೆಡ್ಡಿ ಅವರನ್ನು ಮದುವೆಯಾಗಿದ್ದಳು. ಆದರೆ ಇತ್ತೀಚೆಗೆ ಪತಿ ಆಕೆಗೆ ಮಾನಸಿಕವಾಗಿ ಕಿರುಕುಳ ಕೊಡಲು ಪ್ರಾರಂಭಿಸಿದ ಹಿನ್ನಲೆಯಲ್ಲಿ ಗಂಡನ ಮನೆ ಬಿಟ್ಟು ತಂದೆಯ ಮನೆಗೆ ಬಂದಿದ್ದಾಳೆ. ನಂತರ ಹತ್ತಿರದಲ್ಲಿರುವ ಸಂಬಂಧಿಕರ ಮನೆಗೆ ಹೋದ ಸೋನಿಕಾ ರೆಡ್ಡಿ ಅಲ್ಲಿ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ಈ ಘಟನೆಯಲ್ಲಿ ಆಕೆಯ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದ ಪರಿಣಾಮ ಆಕೆ ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಸದ್ಯಕ್ಕೆ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸನ್ಯಾಸಿ ವೇಷದಲ್ಲಿ ಬಂದು ಮಹಿಳೆಯ ಮುಖಕ್ಕೆ ನೀರು ಚಿಮುಕಿಸಿ ಚಿನ್ನ ಕದ್ದ ಕಳ್ಳರು

ದಾವಣಗೆರೆ : ಸನ್ಯಾಸಿಗಳ ವೇಷದಲ್ಲಿ ಬಂದ ಕಳ್ಳರು ಮಹಿಳೆಯ ಮುಖಕ್ಕೆ ನೀರು ಚಿಮುಕಿಸಿ ಚಿನ್ನಾಭರಣವನ್ನು ...

news

ಮೀನುಗಾರರು ನಾಪತ್ತೆಯಾದ ಹಿನ್ನಲೆ; ನಾಳೆ ಉಡುಪಿಗೆ ಆಗಮಿಸಲಿರುವ ಗೃಹ ಸಚಿವರು

ಉಡುಪಿ : ಮಲ್ಪೆಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ನಾಪತ್ತೆಯಾಗಿದ ಹಿನ್ನಲೆಯಲ್ಲಿ ...

news

ರೈತರ ಬೆಳೆ ಸಾಲ ಮನ್ನಾ ಒಂದೇ ಕಂತಿನಲ್ಲಿ ಭರಿಸುವುದಾಗಿ ಘೋಷಣೆ ಮಾಡಿದ ಸಿಎಂ

ಬೆಂಗಳೂರು : ರೈತರ ಬೆಳೆ ಸಾಲ ಮನ್ನಾ 46 ಸಾವಿರ ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಭರಿಸುವುದಾಗಿ ಘೋಷಣೆ ...

news

ಐಟಿ ದಾಳಿ ಬೆನ್ನಲೇ ನಟ ಪುನೀತ್ ಮನೆ ಮುಂದೆ ಸಚಿವ ಡಿ.ಕೆ ಶಿವಕುಮಾರ್ ಪ್ರತ್ಯಕ್ಷರಾಗಿದ್ಯಾಕೆ?

ಬೆಂಗಳೂರು : ಗುರುವಾರ ರಾಜಕೀಯ ನಾಯಕರ ಮನೆಗೆ ಹಾಗೂ ಸ್ಯಾಂಡಲ್ ವುಡ್ ಹೀರೋಗಳ ಮನೆಗೆ ದಾಳಿ ನಡೆಸಿ ಐಟಿ ...

Widgets Magazine