ಕದ್ದ ಚಿನ್ನದ ಜತೆಗೆ ಕ್ಷಮಾಪಣೆ ಪತ್ರ ಬರೆದಿಟ್ಟು ಮರಳಿಸಿದ ಕಳ್ಳ!

ತಿರುವನಂತಪುರಂ, ಶುಕ್ರವಾರ, 13 ಜುಲೈ 2018 (12:12 IST)

ತಿರುವನಂತಪುರಂ: ಕಳ್ಳನ ಕೈಗೆ ಚಿನ್ನ ಸಿಕ್ಕರೆ ಮರಳಿ ಸಿಗುವುದುಂಟೆ? ಪೊಲೀಸರು ಹುಡುಕಿಕೊಟ್ಟರೆ ಕೆಲವೊಮ್ಮೆ ಸಿಗುವ ಸಾಧ್ಯತೆಯಿದೆಯೇನೋ. ಆದರೆ ಇಲ್ಲೊಬ್ಬ ಕದ್ದ ಮಾಲನ್ನು ಹಿಂದಿರುಗಿಸಿ ಕ್ಷಮಾಪಣೆ ಕೋರಿದ್ದಾನೆ.
 
ಇದು ನಡೆದಿರುವುದು ಕೇರಳದ ಅಂಬಲಪ್ಪುಳ ಎಂಬಲ್ಲಿ. ಬಿಜು ವಿ ನಾಯರ್ ಎಂಬವರು ಸಂಬಂಧಿಕರ ಮದುವೆಗೆಂದು ಮಂಗಳವಾರ ಮನೆಯಿಂದ ಹೊರಗೆ ಹೋಗಿದ್ದಾಗ ನಡೆದಿದೆ.
 
ಮದುವೆ ಮುಗಿಸಿ ಮನೆಗೆ ಬಂದಾಗ ಘಟನೆ ತಿಳಿದುಬಂದಿದೆ. ತಕ್ಷಣ ಪೊಲೀಸರಿಗೆ ಬಿಜು ವಿ ನಾಯರ್ ದೂರು ನೀಡಿದ್ದಾರೆ. ಆದರೆ ವಿಚಿತ್ರವೆಂದರೆ ಗುರುವಾರ ಬೆಳಿಗ್ಗೆ ಅವರ ಮನೆ ಎದುರು ಪೇಪರ್ ಕವರ್ ಒಂದರಲ್ಲಿ ಕದ್ದ ಮಾಲು ಪತ್ತೆಯಾಗಿದೆ. ಜತೆಗೆ ಕಳ್ಳ ಒಂದು ಪತ್ರವನ್ನೂ ಇಟ್ಟಿದ್ದ!
 
ಅದರಲ್ಲಿ ತನಗೆ ಹಣದ ತೀರಾ ಅಗತ್ಯವಿತ್ತು. ಅದಕ್ಕಾಗಿ ಕದ್ದೆ. ಆದರೆ ಈಗ ಮರಳಿಸುತ್ತಿದ್ದೇನೆ. ದಯವಿಟ್ಟು ನನ್ನನ್ನು ಪೊಲೀಸರಿಗೆ ಹಿಡಿದುಕೊಡಬೇಡಿ. ನಾನು ಮಾಡಿದ ತಪ್ಪಿಗೆ ಕ್ಷಮೆ ಕೋರುತ್ತೇನೆ ಎಂದು ಬರೆದಿಟ್ಟಿದ್ದ. ಇದನ್ನು ನೋಡಿ ಬಿಜು ನಾಯರ್ ಪೊಲೀಸರಿಗೆ ನೀಡಿದ್ದ ದೂರು ವಾಪಸ್ ಪಡೆದುಕೊಂಡಿದ್ದು, ಪ್ರಕರಣ ಮುಂದುವರಿಸಿದಂತೆ ಕೋರಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಾಸ್ ಪೋರ್ಟ್ ಪರೀಕ್ಷೆ ಸಂದರ್ಭ ಮಹಿಳೆಯನ್ನು ತಬ್ಬಿಕೊಂಡ ಪೊಲೀಸ್ !

ನವದೆಹಲಿ: ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರೆ ಆಯಾ ಪ್ರದೇಶದ ಪೊಲೀಸ್ ಠಾಣೆಯಿಂದ ಪೊಲೀಸ್ ಪೇದೆಯೊಬ್ಬರು ...

news

ಅಮೆರಿಕದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯ ಮಹಿಳೆಯರು

ನ್ಯೂಯಾರ್ಕ್ : ಪೋರ್ಬ್ಸ್‌ ನಿಯತಕಾಲಿಕೆ ಬಿಡುಗಡೆಗೊಳಿಸಿದ ಸ್ವಂತ ಪರಿಶ್ರಮದಿಂದ ಉದ್ದಿಮೆ ಸ್ಥಾಪಿಸಿದ ...

news

ವಿಪತ್ತು ನಿರ್ವಹಣೆ ತರಬೇತಿ ನೀಡಲು ವಿದ್ಯಾರ್ಥಿಯನ್ನು ಕಟ್ಟಡದಿಂದ ತಳ್ಳಿದ ತರಬೇತುದಾರ. ಆಮೇಲೆ ಆಗಿದ್ದೇನು?

ಕೊಯಮತ್ತೂರು : ವಿಪತ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಜಾಗೃತಿ ಕ್ರಮಗಳನ್ನು ತಿಳಿಸಲು ಹೋಗಿ ತರಬೇತುದಾರ ...

news

ಸಿದ್ದರಾಮಯ್ಯನವರ ಬಂಗಲೆ ಇದೀಗ ಕೆಜೆ ಜಾರ್ಜ್ ಗೆ

ಬೆಂಗಳೂರು: ಸಿಎಂ ಆಗಿದ್ದಾಗ ತಮಗೆ ನೀಡಲಾಗಿದ್ದ ಸರ್ಕಾರಿ ಬಂಗಲೆ ‘ಕಾವೇರಿ’ಯನ್ನು ಇದೀಗ ಸಿದ್ದರಾಮಯ್ಯ ತಮ್ಮ ...

Widgets Magazine
Widgets Magazine