Widgets Magazine
Widgets Magazine

ತ್ರಿವಳಿ ತಲಾಖ್ ವಿರುದ್ಧ ಕಾನೂನು ಹೋರಾಟ ನಡೆಸಿದ್ದು ಈ ಐವರು ಮಹಿಳೆಯರು

ನವದೆಹಲಿ, ಮಂಗಳವಾರ, 22 ಆಗಸ್ಟ್ 2017 (15:48 IST)

Widgets Magazine

ತ್ರಿವಳಿ ತಲಾಖ್ ಸಾಂವಿಧಾನಿಕವಲ್ಲ ಎಂದು ಸುಪ್ರೀಂಕೋರ್ಟ್ ಪಂಚಪೀಠ ಮಹತ್ವದ ತೀರ್ಪು ನೀಡಿದೆ. ಮೂರು ಬಾರಿ ತಲಾಖ್ ಎಂದು ಹೇಳಿ ತಲಾಖ್ ನೀಡುವ ಪದ್ಧತಿ ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಂದಹಾಗೆ, ತಲಾಖ್ ವಿರುದ್ಧ ಸುಪ್ರೀಂಕೋರ್ಟ್`ನಲ್ಲಿ ಹೋರಾಟ ನಡೆಸಿದ್ದು, ಐವರು ಮುಸ್ಲಿಂ ಮಹಿಳೆಯರು. ಫೋನ್, ಪೋಸ್ಟ್ ಕಾರ್ಡ್, ಕಾಗದದ ತುಣುಕುಗಳಿಂದ ತಲಾಖ್ ಪಡೆದು ಸಂಕಷ್ಟಕ್ಕೀಡಾದ ಈ ಐವರು ಮಹಿಳೆಯರು ತಲಾಖ್ ಮಾನ್ಯತೆಯನ್ನ ಕೋರ್ಟ್`ನಲ್ಲಿ ಪ್ರಶ್ನಿಸಿದ್ದರು.


1. ಶಯರಾ ಬನೋ: ಉತ್ತರಾಖಂಡ್`ನ ಉಧಮ್ ಸಿಂಗ್ ನಗರ್`ನ ರು ಮಕ್ಕಳಿದ್ದು, 15 ವರ್ಷದ ದಾಂಪತ್ಯದ ಬಳಿಕ ಪತಿ ಅಕ್ಟೋಬರ್ 2015ರಂದು ತಲಾಖ್ ನೀಡಿದ್ದ. ಇದನ್ನ ಪ್ರಶ್ನಿಸಿ ಶಯರಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

2. ಆಫ್ರೀನ್ ರೆಹಮಾನ್: 25 ವರ್ಷದ ರಾಜಸ್ಥಾನ ರಾಜ್ಯದ ಜೈಪುರದ 26 ವರ್ಷದ ಈ ಮಹಿಳೆ ಮ್ಯಾರೇಜ್ ಬ್ಯೂರೋ ಮೂಲಕ ವರನನ್ನ ಮದುವೆಯಾಗಿದ್ದರು 2-3 ತಿಂಗಳ ಬಳಿಕ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದ್ದರು. ನೊಂದ ಮಹಿಳೆ ಆಫ್ರೀನ್ ತವರಿಗೆ ತೆರಳಿದ್ದರು. ಕೆಲ ದಿನಗಳ ಬಳಿಕ ಪತಿ ಪೋಸ್ಟ್ ಮೂಲಕ ತಲಾಖ್ ನೀಡಿದ್ದ.

3. ಗುಲ್ಶಾನ್ ಪರ್ವಿನ್: ಉತ್ತರ ಪ್ರದೇಶದ ರಾಂಪುರ ನಿವಾಸಿಯಾದ 31 ವರ್ಷದ ಗುಲ್ಶನ್ ಪರ್ವಿನ್`ಗೆ ಒಂದು ಮಗುವಿದೆ. 2013ರಲ್ಲಿ ಮದುವೆಯಾಗಿದ್ದ ಗುಲ್ಶಾನ್, ಗಂಡನ ಮನೆಯವರ ಕೌಟುಂಬಿಕ ದೌರ್ಜನ್ಯಕ್ಕೆ ಬೇಸತ್ತು ತವರಿಗೆ ತೆರಳಿದ್ದಾಗ ಪತಿಯಿಂದ 10 ರೂ. ಸ್ಟ್ಯಾಂಪ್`ನ ತಲಾಖ್`ನಾಮ ಬಂದಿತ್ತು.

4. ಇಶ್ರಾತ್ ಜಹಾನ್: ಪಶ್ಚಿಮ ಬಂಗಾಳ ರಾಜ್ಯದ ಹೌರಾದ 31 ವರ್ಷದ ಇಶ್ರಾತ್ ಜಹಾನ್`ಗೆ 4 ಮಕ್ಕಳಿದ್ದಾರೆ. 15 ವರ್ಷದ ದಾಂಪತ್ಯದಲ್ಲಿ 4 ಮಕ್ಕಳನ್ನ ನಿಡಿದ ಗಂಡ ಏಪ್ರಿಲ್ 2015ರಂದು ದುಬೈನಿಂದ ಫೋನ್ ಮೂಲಕವೇ ತಲಾಖ್ ನೀಡಿದ್ದ.
 
5. ಅತಿಯಾ ಸಬ್ರಿ: ಉತ್ತರ ಪ್ರದೇಶದ ಸಹರನ್ ಪುರದ ನಿವಾಸಿಯಾದ ಅತಿಯಾ ಸಬ್ರಿಗೆ ಇಬ್ಬರು ಮಕ್ಕಳಿದ್ದಾರೆ. 2012ರಂದು ಮದುವೆಯಾಗಿದ್ದ ಅತಿಯಾ, ಡಿಸೆಂಬರ್ 2015ರಂದು ಗಂಡನ ಮನೆಯವರ ವಿರುದ್ಧ 25 ಲಕ್ಷ ರೂ. ವರದಕ್ಷಿಣೆ ಬೇಡಿಕೆ ಕೇಸ್ ದಾಖಲಿಸುತ್ತಾರೆ. ಬಳಿಕ ವರದಕ್ಷಿಣೆ ನೀಡದಿದ್ದರಿಂದ ಪತಿ ಕಾಗದದ ತುಂಡಿನಲ್ಲಿ ತಲಾಖ್ ನೀಡಿರುತ್ತಾನೆ.

ಕೃಪೆ: ಟೈಮ್ಸ್ ಆಫ್ ಇಂಡಿಯಾWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ತ್ರಿವಳಿ ತಲಾಖ್ ಸುಪ್ರೀಂಕೋರ್ಟ್ ನರೇಂದ್ರ ಮೋದಿ Triple Talaq Muslim Womens Supreme Court

Widgets Magazine

ಸುದ್ದಿಗಳು

news

ಸಿಎಂ ಸಿದ್ದರಾಮಯ್ಯ ವಿರುದ್ಧ ಜಗದೀಶ್ ಶೆಟ್ಟರ್ ವಾಗ್ದಾಳಿ

ಯಾದಗಿರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಾದರೆ ಯಾವುದೇ ...

news

ಮುಂಬರುವ ಚುನಾವಣೆಯಲ್ಲಿ ಇವರಿಗೆ ಕಾಂಗ್ರೆಸ್ ಟಿಕೆಟ್ ನೀಡಲ್ಲ

ಮುಂಬರುವ ವಿಧಾನಸಭೆ ಚುನಾವಣೆ ಪೂರ್ವ ಸಿದ್ದತೆಯಲ್ಲಿ ಇತರ ಪಕ್ಷಗಳಿಗಿಂತ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ...

news

`ಕೈ’ ಚಳಕ ತೋರಿಸಿದ್ದ ಟಿ.ಪಿ. ರಮೇಶ್ ರಾಜೀನಾಮೆ

ಮಡಿಕೇರಿಯಲ್ಲಿ ಸ್ವಾತಂತ್ರ್ಯ ದಿನೋತ್ಸವದಲ್ಲಿ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ...

news

ತಮಿಳುನಾಡಿನ ಪಳನಿಸ್ವಾಮಿ ಸರ್ಕಾರಕ್ಕೆ ಮರ್ಮಾಘಾತ ನೀಡಿದ ದಿನಕರನ್

ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ತಮಿಳುನಾಡು ರಾಜಕೀಯದಲ್ಲಿ ಮತ್ತೆ ಬಿರುಗಾಳಿ ಬೀಸಿದೆ. ಪಕ್ಷದಲ್ಲಿ ...

Widgets Magazine Widgets Magazine Widgets Magazine