ಕಾಂಗ್ರೆಸ್ ಸಂಸದ ಶಶಿ ತರೂರ್ ಗೆ ತೃತೀಯ ಲಿಂಗಿಯ ಪ್ರೇಮ ನಿವೇದನೆ!

ನವದೆಹಲಿ, ಶುಕ್ರವಾರ, 17 ನವೆಂಬರ್ 2017 (09:13 IST)

ನವದೆಹಲಿ: ತಿರುವನಂತಪುರಂನ ಸಂಸದ, ಕಾಂಗ್ರೆಸ್ ನಾಯಕ ಶಶಿ ತರೂರ್ ಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬರು ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಮದುವೆ ಆಗಿ ಎಂದು ಕೇಳಿಕೊಂಡಿದ್ದಾರೆ.
 

ದೆಹಲಿಯಲ್ಲಿ ನಡೆದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸ್ವಾಭಿಮಾನ ಯಾತ್ರೆಯಲ್ಲಿ ಸೂರ್ಯ ಎಂಬವರು ‘ನನ್ನ ಮದುವೆ ಆಗಿ ಶಶಿ ತರೂರ್’ ಎಂಬ ಬಿತ್ತಿ ಫಲಕವನ್ನು ಹಿಡಿದು ಸಾಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೂಪರ್ ಹಿಟ್ ಆಗಿದೆ.
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಇವರು ತಿರುವನಂತಪುರಂನಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದರೆ ಒಳ್ಳೆಯದಿತ್ತು ಎಂದಿದ್ದಾರೆ. ಎಲ್ಲಾ ಬಿಟ್ಟು ಶಶಿ ತರೂರ್ ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದೇಕೆ ಎಂದು ಸೂರ್ಯ ಅವರನ್ನು ಪ್ರಶ್ನಿಸಿದಾಗ ‘ನಕಲಿ ದೇಶಪ್ರೇಮ, ಜಾತ್ಯಾತೀತ ನಾಯಕರೇ ತುಂಬಿರುವ ದೇಶದಲ್ಲಿ ತರೂರ್ ಒಬ್ಬರೇ ನಿಜವಾದ ದೇಶಪ್ರೇಮಿ. ಅವರೊಬ್ಬರೇ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಸಂಸತ್ತಿನಲ್ಲಿ ಧ್ವನಿಯೆತ್ತಿದವರು’ ಎಂದು ಹೇಳಿಕೊಂಡಿದ್ದಾರಂತೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪಿಓಕೆ ಹಿಂಪಡೆಯಬೇಕು ಎಂದು ಭಾರತ ಬಯಸಿದ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ರಾಜ್ಯ ಗೃಹ ಸಚಿವ

ನವದೆಹಲಿ: ಪಾಕಿಸ್ತಾನದಿಂದ ಪಾಕ್ ಆಕ್ರಮಿತ ಕಾಶ್ಮಿರವನ್ನು ವಶಪಡಿಸಿಕೊಳ್ಳಲು ಬಯಸಿದರೆ ಭಾರತವನ್ನು ಯಾರೂ ...

news

ಸಿಬಿಎಫ್‌ಸಿ ಅನುಮತಿ ನೀಡಿದ್ರೆ ಪದ್ಮಾವತಿ ಚಿತ್ರ ಪ್ರದರ್ಶನಕ್ಕೆ ಅಸ್ತು: ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ ಪದ್ಮಾವತಿ ಚಿತ್ರವನ್ನು ...

news

ಸದನದಲ್ಲಿ ಸ್ವಾರಸ್ಯಕರ ಚರ್ಚೆ: ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪಿಶಾಚಿ ಅಂತೆ...!

ಬೆಂಗಳೂರು: ವಿಧಾನಸಭೆಯಲ್ಲಿ ನಡೆದ ಮೌಢ್ಯ ಪ್ರತಿಬಂಧಕ ಮಸೂದೆ ಜಾರಿ ಚರ್ಚೆಯಲ್ಲಿ ಹಲವು ಸ್ವಾರಸ್ಯಕರ ...

news

ಸರಕಾರದ ವಿರುದ್ಧ ವೈದ್ಯರನ್ನು ಎತ್ತಿಕಟ್ಟಿದ್ದೇ ಬಿಜೆಪಿಯವರು: ಸಿಎಂ ಕಿಡಿ

ಬೆಂಗಳೂರು: ಸರಕಾರದ ವಿರುದ್ಧ ವೈದ್ಯರನ್ನು ಎತ್ತಿಕಟ್ಟಿದ್ದೇ ಬಿಜೆಪಿಯವರು. ಇಲ್ಲವಾದಲ್ಲಿ ವೈದ್ಯರು ...

Widgets Magazine
Widgets Magazine