ಗಡಿಪ್ರದೇಶದಲ್ಲಿ ನಡೆಯುತ್ತಿರುವ ಈ ಚಟುವಟಿಕೆ ಭಾರತಕ್ಕೆ ಒಳ್ಳೆಯದಂತೂ ಅಲ್ಲ!

Newdelhi, ಬುಧವಾರ, 3 ಮೇ 2017 (11:19 IST)

Widgets Magazine

ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ನಡೆದ ಮೇಲೆ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರರ ಕ್ಯಾಂಪ್ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಮೊನ್ನೆಯಷ್ಟೇ ಭಾರತೀಯ ಯೋಧರಿಬ್ಬರ ಶಿರಚ್ಛೇದ ಮಾಡಿದ ಪಾಕ್ ಯೋಧರು ಉಗ್ರರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆಂದು ವರದಿಯಾಗಿದೆ.


 
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 20 ಉಗ್ರರ ಕ್ಯಾಂಪ್ ಹೊಸದಾಗಿ ಹುಟ್ಟಿಕೊಂಡಿದೆ ಎನ್ನಲಾಗಿದೆ. ಕಳೆದ ವರ್ಷ ಸರ್ಜಿಕಲ್ ದಾಳಿ ನಡೆದ ನಂತರ 35 ರಷ್ಟಿದ್ದ ಉಗ್ರರ ಕ್ಯಾಂಪ್ ಇದೀಗ 55 ಕ್ಕೇರಿದೆ ಎನ್ನಲಾಗಿದೆ.
 
ಈ ಉಗ್ರರು ಗಡಿ ಪ್ರದೇಶಕ್ಕೆ ಮತ್ತಷ್ಟು ಹತ್ತಿರ ಬಂದಿದ್ದಾರೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಗುಪ್ತಚರ ವರದಿ ಪ್ರಕಾರ, 160 ಉಗ್ರರು ಕ್ರಿಯಾಶೀಲರಾಗಿದ್ದು, ಇವರಿಗೆ ಪಾಕ್ ಸೇನೆಯ ಅಭಯ ಹಸ್ತವಿದೆ.
 
ಪಾಕ್ ಸೇನೆಯ ನಿರ್ದೇಶನದಂತೆ ಇವರು ಭಾರತೀಯ ಸೇನೆ ಮೇಲೆ ದಾಳಿ ನಡೆಸುತ್ತಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಮೊನ್ನೆ ನಡೆದ ಯೋಧರ ಶಿರಚ್ಛೇದ ಪ್ರಕರಣದಲ್ಲೂ ಪಾಕ್ ಸೇನೆ ಜತೆ ಉಗ್ರರು ಕೈ ಜೋಡಿಸಿದ್ದರು ಎನ್ನಲಾಗಿತ್ತು. ಇದು ಭಾರತದ ಪಾಲಿಗೆ ಆತಂಕದ ಸುದ್ದಿಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬೀದಿಯಲ್ಲಿ ಹುಡುಗಿರು ಇನ್ಮುಂದೆ ಮೊಬೈಲ್ ಬಳಸುವಂತಿಲ್ಲ!

ಮಥುರಾ: ಮನೆಯಿಂದ ಹೊರಗೆ ಬೀದಿಯಲ್ಲಿ ನಿಂತುಕೊಂಡು ಹುಡುಗಿಯರು ಮೊಬೈಲ್ ಬಳಸುವಂತಿಲ್ಲ ಎಂದು ಮಥುರಾದ ...

news

ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಉತ್ತರಾಖಂಡ್ ಗೆ ಬಂದಿಳಿದಿದ್ದು, ಪ್ರಸಿದ್ಧ ...

news

ಮುಸ್ಲಿಂ ಮದುವೆ ಆಹ್ವಾನ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ!

ಮಧ್ಯಪ್ರದೇಶ: ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಕೋಮು ಸೌಹಾರ್ದತೆ ಮೆರೆಯಲು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ...

news

ಆಮ್ ಆದ್ಮಿ ಪಕ್ಷದಲ್ಲೀಗ ಆಂತರಿಕ ಕಲಹ

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸೋತ ಮೇಲೆ ಎಲ್ಲವೂ ಸರಿಯಿಲ್ಲ ...

Widgets Magazine