ಇದು ದೆವ್ವಗಳ ಹಳ್ಳಿ ನಿಮಗೆ ಗೊತ್ತಾ?

ಗುರುಮೂರ್ತಿ 

ಬೆಂಗಳೂರು, ಗುರುವಾರ, 25 ಜನವರಿ 2018 (13:34 IST)

ಸಾಮಾನ್ಯವಾಗಿ ಹಳ್ಳಿ ಎಂದ ಕೂಡಲೇ ನಮಗೆ ನೆನಪಾಗುವುದು ಶುದ್ಧವಾದ ಪರಿಸರ, ಪರಸ್ಪರ ಪ್ರೀತಿ ವಿಶ್ವಾಸದಿಂದ ಮಾತನಾಡುವ ಜನರು ಹಳೆಯದಾದ ದೇವಸ್ಥಾನ, ಕೆರೆ ಕುಂಟೆಗಳು ಹೀಗೆ, ಆದ್ರೆ ನಾವು ಹೇಳ ಹೊರಟಿರುವ ಈ ಹಳ್ಳಿಯೇ ವಿಭಿನ್ನ ಇಲ್ಲಿ ಎಲ್ಲವೂ ನಿಗೂಢ ವಿಸ್ಮಯ ಇಲ್ಲಿ ಯಾವುದೇ ಮನುಷ್ಯರು ವಾಸ ಮಾಡುವುದಿಲ್ಲ. ಅಷ್ಟೇ ಅಲ್ಲ ಇಲ್ಲಿ ಕತ್ತಲು ಆವರಿಸಿದಂತೆ ಈ ಹಳ್ಳಿ ಭಯನಕತೆಯನ್ನು ಉಂಟು ಮಾಡುತ್ತದೆ.

ಇಂದಿನ ದಿನಗಳಲ್ಲಿ ಇದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ದೆವ್ವ ಎಂಬುದೇ ಇಲ್ಲ ಇವೆಲ್ಲ ಸತ್ಯಕ್ಕೆ ದೂರವಾದ ಮಾತು ಎಂದೆಲ್ಲಾ ಹೇಳುತ್ತಾರೆ. ಆದ್ರೆ ಕೆಲವರು ನಾವು ದೆವ್ವವನ್ನು ನೋಡಿದ್ದೇವೆ ಎಂದು ಹೇಳುವುದುಂಟು. ಇದರ ಹೊರತಾಗಿ ಕೆಲವು ಪ್ರದೇಶಗಳಲ್ಲಿ ನೆಡೆದಿರುವ ಘಟನೆಗಳು, ದೆವ್ವದ ಕಥೆಗಳು ನಮ್ಮ ನಿಮ್ಮ ನಡುವೆ ಹರಿದಾಡುತ್ತಾ ಇಂದಿಗೂ ದೆವ್ವದ ಸ್ವರೂಪ ನಮ್ಮಲ್ಲಿ ಕೂತೂಹಲವಾಗಿಯೇ ಉಳಿದಿದೆ ಎನ್ನಬಹುದು ಆದರೆ ದೆವ್ವ ಇದೆ ಎನ್ನುವುದಕ್ಕೆ ಹಲವಾರು ಆಧಾರಗಳು ಸಿಗುತ್ತದೆ. ಕೆಲವು ಪ್ರದೇಶಗಳಲ್ಲಿ ಅಷ್ಟೇ ನೀವು ದೆವ್ವದಿಂದ ಆದ ತೊಂದರೆಗಳ ಕುರಿತು ಕೇಳಿರುತ್ತೀರಿ ಆದ್ರೆ ಇಲ್ಲಿ ಇಡೀ ಗ್ರಾಮವೇ ದೆವ್ವದ ವಾಸಸ್ಥಾನ ಎಂದರೆ ನಂಬುತ್ತೀರಾ...! ಈ ಗ್ರಾಮ ಇರುವುದಾದರೂ ಎಲ್ಲಿ, ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತಿವೆಯೇ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಈ ವರದಿಯನ್ನು ಓದಿ.
 
ನಮ್ಮ ಭಾರತ ದೇಶದಲ್ಲಿ ಕೆಲವು ನಿಗೂಢ ಸ್ಥಳಗಳಿವೆ ಕೆಲವು ಗೋಚರವಾಗಿದೆ ಇನ್ನು ಕೆಲವು ಹಾಗೇ ಉಳಿದಿರಬಹುದು, ಇಂತಹ ಪ್ರದೇಶದ ಸುತ್ತಮುತ್ತ ರಾತ್ರಿಯಾಗುತ್ತಿದ್ದಂತೆ ಜನಸಂಚಾರ ವಿರಳವಾಗುತ್ತದೆ ಅಷ್ಟೇ ಅಲ್ಲ ಅಲ್ಲಿ ನೆಡೆಯುವ ಭಯಾನಕತೆಯನ್ನು ನೋಡಿದವರು ಸತ್ತಿರುವ ಉದಾಹರಣೆಗಳು ನಮ್ಮಲ್ಲಿವೆ, ಅದರಲ್ಲೂ ನಾವು ಹೇಳಹೊರಟಿರುವ ಈ ಗ್ರಾಮವನ್ನು ಭಾರತದ ಪುರಾತತ್ವ ಇಲಾಖೆಯೇ ಸೂರ್ಯಾಸ್ತ ಸಮಯದ ನಂತರ ಅಲ್ಲಿಗೆ ಭೇಟಿ ನೀಡಬಾರದೆಂಬ ಬಗ್ಗೆ ಎಚ್ಚರಿಕೆಯ ಫಲಕಗಳನ್ನು ಹಾಕಿದ್ದಾರೆ ಎಂದರೆ ಅದು ಎಷ್ಟು ಅಪಾಯಕಾರಿ ಎಂಬುದನ್ನು ನೀವು ಊಹಿಸಬಹುದು. ಈ ಗ್ರಾಮದಲ್ಲಿ ಹಲವಾರು ನಿಗೂಢತೆಗಳಿವೆ ಅದನ್ನು ಭೇದಿಸಲು ಇದುವರೆಗೂ ಸಾಧ್ಯವಾಗಿಲ್ಲ ನಿಮಗೂ ಈ ಗ್ರಾಮಕ್ಕೆ ಭೇಟಿ ನೀಡಬೇಕು ಎಂದೆನಿಸಿದರೆ ನೀವು ಒಮ್ಮೆ ಭೇಟಿ ಕೊಡಬಹುದು.
 
ಕುಲಧಾರ 
 
ಈ ಗ್ರಾಮ ರಾಜಸ್ಥಾನ ರಾಜ್ಯದ ಜೈಸಲ್ಮೇರ್ ಜಿಲ್ಲೆಯಲ್ಲಿದೆ, ಈ ಗ್ರಾಮವನ್ನು ಕುಲಧಾರ ಎಂಬ ಹೆಸರಿನಿಂದ ಕರೆಯುತ್ತಾರೆ. ಇದನ್ನು ದೆವ್ವಗಳ ಗ್ರಾಮ ಎಂದೇ ಕರೆಯಲಾಗುತ್ತದೆ. ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ಪಾಳು ಬಿದ್ದ ಮನೆಗಳು, ಬಿದ್ದು ಹೋಗಿರುವ ಗೋಡೆಗಳು, ಹಳೆ ಕಾಲದ ಕಟ್ಟಡಗಳು ಅಸ್ತವ್ಯಸ್ತ ವಾತಾವಾರಣಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ. ಈ ಗ್ರಾಮದಲ್ಲಿ ಒಂದು ಜೀವಿಯಾಗಲೀ ಮನುಷ್ಯರಾಗಲೀ ವಾಸಿಸುತ್ತಿರುವುದನ್ನು ನಿಮಗೆ ಕಾಣಲಾಗುವುದಿಲ್ಲ. ಇದು ಸುಮಾರು 600 ವರ್ಷಗಳಿಂದ ಖಾಲಿ ಬಿದಿದ್ದು ಇಂದಿಗೂ ಈ ಸ್ಥಳ ಭಯಾನಕತೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಈ ಪ್ರದೇಶವನ್ನು ಸರಕಾರ ಇದೀಗ ಪ್ರವಾಸಿ ತಾಣವನ್ನಾಗಿ ಮಾಡಿದ್ದು ಸುರ್ಯಾಸ್ಥವಾಗುತ್ತಿದ್ದಂತೆ ಇಲ್ಲಿ ಯಾರು ಕೂಡಾ ಊಳಿಯಬಾರದು ಎಂದು ಭಾರತದ ಪುರಾತತ್ವ ಇಲಾಖೆ ಬೋರ್ಡ್ ಅನ್ನು ಕೂಡಾ ಹಾಕಿದೆ.
 13 ನೇ ಶತಮಾನದಿಂದ ಅತ್ಯಂತ ಸುಂದರವಾಗಿ ಪ್ರಜೆಗಳಿಂದ ಕೂಡಿದ್ದ ಈ ಗ್ರಾಮ ಈಗ ಆತ್ಮಗಳ ವಾಸಸ್ಥಾನವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಒಂದೇ ರಾತ್ರಿಯಲ್ಲಿ ಇಲ್ಲಿ ವಾಸಮಾಡುತ್ತಿದ್ದ ಜನರು ಇಡೀ ಗ್ರಾಮವನ್ನೇ ತೊರೆದು ಹೋದರೆಂದು ಸುತ್ತಮುತ್ತಲಿನ ಪ್ರದೇಶದ ಜನರು ಮಾತನಾಡಿಕೊಳ್ಳುತ್ತಾರೆ. ಈ ಪುಟ್ಟ ಗ್ರಾಮದಲ್ಲಿ ಆ ಕಾಲಕ್ಕೆ 1500 ಕ್ಕೂ ಹೆಚ್ಚಿನ ಜನರು ವಾಸಿಸುತ್ತಿದ್ದರೆಂದು ಹೇಳಲಾಗುತ್ತಿದೆ. ಆದರೆ ಇಂದು ಅವರು ಬಿಟ್ಟು ಹೋದ ಹಳೆಯ ಮನೆ ಕಟ್ಟಡದ ಅವಶೇಷಗಳು ಮಾತ್ರ ನಮ್ಮ ಕಣ್ಣಿಗೆ ಕಾಣಸಿಗುತ್ತದೆ. ಅಷ್ಟೇ ಅಲ್ಲ ಇದೂವರೆಗೂ ಈ ಗ್ರಾಮದಲ್ಲಿ ಯಾರು ಕೂಡಾ ವಾಸಿಸಲು ಧೈರ್ಯ ಮಾಡದೇ ಇರುವುದು ಇಲ್ಲಿನ ಭಯಾನಕತೆಗೆ ಹಿಡಿದ ಕೈಗನ್ನಡಿಯಾಗಿದೆ.
 
ಹಾಗಾದರೆ ಈ ಗ್ರಾಮದಲ್ಲಿ ವಾಸಿಸುತ್ತಿದ್ದ ಜನರೆಲ್ಲಾ ಎಲ್ಲಿ ಹೋದರೂ, ಏಕೆ ಈ ಗ್ರಾಮದಲ್ಲಿ ವಾಸಿಸಲು ಯಾರು ಮುಂದೆ ಬರುತ್ತಿಲ್ಲ ಎಂಬುದಕ್ಕೆ ಹಲವು ಉಹಾಪೋಹಗಳಿದ್ದು ಹಲವಾರು ಕಥೆಗಳು ಹುಟ್ಟಿಕೊಂಡಿವೆ. ಅವುಗಳೆಂದರೆ, ಜೈಸಲ್ಮಾರ್ ಪ್ರದೇಶವನ್ನು ಈ ಮೊದಲು ಸಲೀಂ ಸಿಂಗ್ ಎಂಬ ವ್ಯಕ್ತಿಯು ಆಳ್ವಿಕೆಯನ್ನು ನೆಡೆಸುತ್ತಿದ್ದ ಎಂದು ಹೇಳಲಾಗುತ್ತಿದೆ. ಅವನು ತುಂಬಾ ಕ್ರೂರಿಯಾಗಿದ್ದ ಎಂತಲೂ ಹೇಳುತ್ತಾರೆ ಅಲ್ಲದೇ ಈ ಗ್ರಾಮವು ಅವನ ಆಳ್ವಿಕೆಗೆ ಒಳಪಟ್ಟಿತ್ತು ಎನ್ನಲಾಗಿದೆ. ಒಮ್ಮೆ ಸಲೀಂ ಸಿಂಗ್ ಕುಲಧಾರ ಗ್ರಾಮದಲ್ಲಿನ ಒಂದು ಕನ್ಯೆಯನ್ನು ಕಂಡು ಮರುಳಾಗಿ ಏನಾದರೂ ಆಗಲೀ ಆ ಸುಂದರವಾದ ಕನ್ಯೆಯನ್ನು ವರಿಸಬೇಕು ಇಲ್ಲವಾದರೆ ಆ ಗ್ರಾಮವನ್ನೇ ಸ್ಮಶಾನ ಮಾಡುತ್ತೇನೆ ಎಂದು ಆ ಊರಿನ ಜನರಿಗೆ ಹೇಳಿದಾಗ ಇದರಿಂದ ಭಯಗೊಂಡ ಗ್ರಾಮಸ್ಥರು ನಾವೇ ಅವಳನ್ನು ನಿನ್ನ ಬಳಿಗೆ ತಂದು ಬಿಡುತ್ತೇವೆ ಎಂದು ನಂಬಿಸಿ ಅವನನ್ನು ಅಲ್ಲಿಂದ ಕಳುಹಿಸಿಕೊಡುತ್ತಾರೆ, ಅಷ್ಟೇ ಅಲ್ಲ ಅದೇ ರಾತ್ರಿ ಆ ಕನ್ಯೆಯನ್ನು ಕರೆದುಕೊಂಡು ಎಲ್ಲರೂ ಊರು ಖಾಲಿ ಮಾಡಿದರೆಂಬ ಮಾತುಗಳು ಕೇಳಿಬರುತ್ತವೆ.
ಅಷ್ಟೇ ಅಲ್ಲ ಬ್ರಿಟೀಷರ ಕಾಲದಲ್ಲಿ ಇಲ್ಲಿ ಬರಗಾಲ ಬಂದಿತ್ತು ಆದ ಕಾರಣ ವ್ಯವಸಾಯಕ್ಕೆ ನೀರು ಇಲ್ಲದೇ ಜನರು ಊರು ಬಿಟ್ಟು ಹೋಗಿರಬಹುದು ಎಂಬ ಮಾತುಗಳು ಇಲ್ಲಿನ ಸ್ಥಳೀಯ ವಲಯದಲ್ಲಿದೆ. ಆದರೆ ಈ ಗ್ರಾಮಕ್ಕೆ ಸಮೀಪದಲ್ಲಿರುವ ಕೊಳವು ಎಂದಿಗೂ ನೀರಿನಿಂದ ತುಂಬಿ ತುಳುಕುತ್ತಿರುತ್ತದೆ. ಊ ಗ್ರಾಮದಲ್ಲಿ ಪೂರ್ವದಲ್ಲಿ 600 ಮನೆಗಳಿದ್ದು ಈಗ ಆ ಮನೆಗಳ ಸ್ಥಿತಿಯು ದೀನಾವಸ್ಥೆಯನ್ನು ತಲುಪಿದೆ. ಈ ಮನೆಗಳ ಸುತ್ತಮುತ್ತ ದೆವ್ವಗಳು ಇವೆಯೇ ಎಂಬುದನ್ನು ಪರಿಶೀಲಿಸಲು ಬಂದ ಇಂಡಿಯನ್ ಪಾರಾನಾರ್ಮಲ್ ಸೊಸೈಟಿ ಸಂಸ್ಥೆ ಕೂಡಾ ಈ ಗ್ರಾಮದಲ್ಲಿ ದೆವ್ವಗಳು ಇವೆ ಎಂಬುದನ್ನು ಖಾತ್ರಿಪಡಿಸಿದೆ ಎಂದು ಹೇಳಲಾಗಿದೆ. ನಿಮಗೂ ಕೂಡ ಈ ಪ್ರದೇಶವನ್ನು ನೋಡಬೇಕು ಎಂದು ಬಯಸಿದರೆ ರಾಜಸ್ಥಾನಕ್ಕೆ ಒಮ್ಮೆ ಭೇಟಿ ಕೊಡಬಹುದು. 
ಜಗತ್ಪುರ 
 
ಅಷ್ಟೇ ಅಲ್ಲ ರಾಜಸ್ಥಾನದಲ್ಲಿ ಇನ್ನೊಂದು ಸ್ಥಳವಿದೆ. ಅದು ದೆವ್ವಗಳ ನಗರ ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ಇದು ಸಹ ಕುಲಾಧರ ತರಹದಲ್ಲೇ ಇದ್ದು ಸುರ್ಯಾಸ್ತವಾಗುತ್ತಿದ್ದಂತೆ ಅಲ್ಲಿ ಯಾರು ಉಳಿಯುವಂತಿಲ್ಲ. ಈ ನಗರದಲ್ಲಿ ಯಾರೂ ಕೂಡಾ ವಾಸಮಾಡುವುದಿಲ್ಲ ಅಷ್ಟೇ ಅಲ್ಲ ಇಲ್ಲಿರುವ ಜನರು ಎಲ್ಲಿಗೆ ಹೋದರು ಎಂಬುದಕ್ಕೂ ಇಲ್ಲಿ ಯಾವುದೇ ಪುರಾವೆ ಇಲ್ಲ. ಅಲ್ಲದೇ ಈ ಪ್ರದೇಶಕ್ಕೆ ದೆವ್ವಗಳು ಹೇಗೆ ಬಂದವು ಎನ್ನುವುದೂ ಕೂಡಾ ಇಲ್ಲಿ ರಹಸ್ಯವಾಗಿಯೇ ಇದೆ.
 
ಈ ಪ್ರದೇಶವು ರಾಜಸ್ಥಾನ ರಾಜ್ಯದ ಜೈಪುರದಲ್ಲಿರುವ ಈ ಗ್ರಾಮವನ್ನು ಜಗತ್ಪುರ ಎಂದು ಕರೆಯುತ್ತಾರೆ. ಈ ಪ್ರದೇಶದ ಸುತ್ತಮುತ್ತಲೂ ಆರಾವಳಿ ಪರ್ವತದಿಂದ ಅವೃತ್ತಗೊಂಡಿದ್ದು, ಈ ಪ್ರದೇಶದಲ್ಲಿ ಯಾವುದೇ ವ್ಯಕ್ತಿಯು ವಾಸಮಾಡದಷ್ಟು ಭಯಾನಕವಾಗಿದೆ ಅಂತಾರೆ ಇಲ್ಲಿನ ಸುತ್ತಮುತ್ತಲಿನ ಜನರು. ಈ ಪ್ರದೇಶವು ದೆವ್ವದ ನಗರ ಎಂದೇ ಪ್ರಖ್ಯಾತಿಯನ್ನು ಪಡೆದಿದ್ದು, ಸೂರ್ಯಾಸ್ತ ಸಮಯದ ನಂತರ ಈ ಪ್ರದೇಶಕ್ಕೆ  ಪ್ರವೇಶವನ್ನು ನಿಷೇಧಿಸಲಾಗಿದೆ ಏಕೆಂದರೆ ಆ ಸಮಯದಲ್ಲಿ ಈ ಪ್ರದೇಶದಲ್ಲಿ ದೆವ್ವಗಳ ಹಾವಳಿ ಹೆಚ್ಚಾಗುತ್ತದೆ ಅಂತೆ. ಆ ಸಮಯದಲ್ಲಿ ಇಲ್ಲಿ ಯಾರೋ ಕಿರುಚಿದ ಹಾಗೆ ಗೀಳಿಡುವ ಹಾಗೆ, ಚಿರಾಟ, ನಗುವುದು, ಆಳುವುದು ಇನ್ನೂ ಹಲವಾರು ರೀತಿಯಲ್ಲಿ ಭಯಂಕರ ಶಬ್ದಗಳು ಕೇಳಿಸುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಇಲ್ಲಿ ಸಂಜೆಯಾಗುತಿದ್ದಂತೆ ಮೇಲೆ ಒಬ್ಬ ನರಪಿಳ್ಳೆಯು ಇತ್ತಕಡೆ ಸುಳಿಯುವುದಿಲ್ಲವಂತೆ.
 
ಈ ಪ್ರದೇಶ ಇದೀಗ ದೆವ್ವಗಳ ತಾಣವಾಗಿದ್ದು ಅದನ್ನು ವೀಕ್ಷಿಸಲು ಇಲ್ಲಿಗೆ ಸಾಕಷ್ಟು ಪ್ರವಾಸಿಗರು ಬರುತ್ತಾರೆ ಬೆಳಿಗ್ಗೆಯಿಂದ ಸುರ್ಯಾಸ್ತದವರೆಗೆ ಈ ಪ್ರದೇಶದಲ್ಲಿ ಸುತ್ತಾಡಲು ಅವಕಾಶವಿದ್ದು ಸಂಜೆ ಸುರ್ಯಾಸ್ತದ ನಂತರ ಇಲ್ಲಿ ವಾಸಿಸಲು ಇಲ್ಲವೇ ಸ್ವಲ್ಪ ಸಮಯ ಕಳೆಯಲು ಇಲ್ಲಿ ಅನುಮತಿಸಲಾಗುವುದಿಲ್ಲ. ದೆವ್ವಗಳ ಮಾತು ಪಕ್ಕಕ್ಕೆ ಇಟ್ಟರೆ ಇಲ್ಲಿ ಪುರಾತನವಾದ ಪ್ಯಾಲೆಸ್, ದೇವಾಲಯಗಳು ನಿಮಗೆ ವಿಶೇಷವಾದ ಆಕರ್ಷಣೆ ಎಂದೇ ಹೇಳಬಹುದು. 
ದೆವ್ವದ ನಗರ ಎಂದು ಹೆಸರು ಪಡೆದಿರುವ ಈ ನಗರ ಒಂದು ಕಾಲದಲ್ಲಿ ಸ್ವರ್ಗದಂತೆ ಬಾಳಿದ ನಗರವಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ. 1631ರಲ್ಲಿ ಅಕ್ಬರ್ ಸಂಸ್ಥಾನದಲ್ಲಿ ಮಾನ್‌ಸಿಂಗ್ ಹಾಗೂ ಕುಮಾರ ಮಧುಸಿಂಗ್ ಈ ನಗರವನ್ನು ನಿರ್ಮಿಸಿದರೆಂದು ಹೇಳಲಾಗುತ್ತಿದೆ. ಸುಮಾರು 700 ವರ್ಷಗಳ ಹಿಂದೆ ಅತ್ಯಂತ ವೈಭವದಿಂದ ಸುಖ ಸಂತೋಷದಿಂದ ಬಾಳಿದ ರಾಜ್ಯವಿದು. ಒಬ್ಬ ತಾಂತ್ರಿಕನ ಶಾಪದಿಂದ ಈ ಪ್ರದೇಶ ಸ್ಮಶಾನವಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.
 
ಅಲ್ಲದೇ ಇಲ್ಲಿ ಸಾಕಷ್ಟು ಹಳೆಯ ಕಾಲದ ಮಂದಿರಗಳನ್ನು ನಾವು ಕಾಣಬಹುದಾಗಿದ್ದು ಅದು ಕೂಡಾ ಇಲ್ಲಿನ ಪ್ರಮುಖ ಆಕರ್ಷಣೆ ಎಂದೇ ಹೇಳಬಹುದು. ಅಲ್ಲದೇ ಇಲ್ಲಿರುವ ಕೋಟೆಗಳು ಆಗಿನ ಕಾಲದ ವೈಭವನನ್ನು ಸಾರುವ ಕುರುಹುಗಳಾಗಿವೆ ಎಂದರೆ ತಪ್ಪಿಲ್ಲ. ನೀವು ಇವೆಲ್ಲವನ್ನು ವೀಕ್ಷಿಸಬೇಕು ಎಂದು ನೀವು ಅಂದುಕೊಂಡಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅವಿವಾಹಿತ ಮಹಿಳೆಯರಲ್ಲಿ ಕಾಂಡೋಮ್ ಬಳಕೆ ಹೆಚ್ಚಳವಾಗಿದೆಯಂತೆ!

ನವದೆಹಲಿ: ಪ್ರಸ್ತುತ ದಿನದಲ್ಲಿ ಅವಿವಾಹಿತ ಮಹಿಳೆಯರು ಹೆಚ್ಚು ಸುರಕ್ಷಿತ ಲೈಂಗಿಕ ಸಂಪರ್ಕ ಹೊಂದಲು ...

news

ಓವೈಸಿ ಜತೆ ಬಿಜೆಪಿ ರಹಸ್ಯ ಮಾತುಕತೆ; ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ

ಬೆಂಗಳೂರು: ಅಸಾದುದ್ದೀನ್ ಒವೈಸಿ ಜತೆ ಬಿಜೆಪಿ ರಹಸ್ಯವಾಗಿ ಸಭೆ ನಡೆಸಿದೆ ಮುಂದಿನ ಚುನಾಚಣೆಯಲ್ಲಿ ...

news

ಬಜೆಟ್ 2018: ನೋಟ್ ಬ್ಯಾನ್ ಇಫೆಕ್ಟ್ ಏನಾಗಿದೆ? ಬಜೆಟ್ ನೀಡಲಿದೆ ಉತ್ತರ!

ನವದೆಹಲಿ: ನೋಟು ನಿಷೇಧ ಸೇರಿದಂತೆ ಪ್ರಧಾನಿ ಮೋದಿ ಸರ್ಕಾರದ ಹೊಸ ಹೊಸ ಆರ್ಥಿಕ ಆವಿಷ್ಕಾರದ ಫಲಿತಾಂಶ ಈ ಬಾರಿ ...

news

ಬಜೆಟ್ 2018: ಪ್ರಧಾನಿ ಮೋದಿ ಕೊಡ್ತಾರಾ ಚುನಾವಣಾ ಬಜೆಟ್?

ನವದೆಹಲಿ: ಲೋಕಸಭೆ ಚುನಾವಣೆ ಮುಂದಿನ ವರ್ಷ ನಡೆಯಲಿರುವ ಹಿನ್ನಲೆಯಲ್ಲಿ ಈ ಬಾರಿಯ ಬಜೆಟ್ ಮೇಲೆ ಎಲ್ಲರ ಗಮನ ...

Widgets Magazine
Widgets Magazine