ಬ್ರೇಕ್ ಫೇಲ್ ಆದ ಬಸ್ ಹರಿದು ಮೂವರು ಸ್ಥಳದಲ್ಲೇ ಸಾವು

ಆಂಧ್ರ ಪ್ರದೇಶ, ಶುಕ್ರವಾರ, 27 ಅಕ್ಟೋಬರ್ 2017 (17:53 IST)

ಆಂಧ್ರ ಪ್ರದೇಶ: ಬ್ರೇಕ್ ಫೇಲ್ ಆದ ಸಾರಿಗೆ ಬಸ್ ಜನರ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯವಾಡದ ಅಜಿತ್‌ಸಿಂಗ್ ನಗರದಲ್ಲಿ ನಡೆದಿದೆ.


ಮೃತರನ್ನು ಮೈಲಾವರಂ ಮೂಲದ ಖುರ್ಷಿದ್ (32), ಅಶ್ರತ್(12) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಏಲೂರು ರಸ್ತೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಹಿನ್ನೆಲೆಯಲ್ಲಿ ಕೋಪಗೊಂಡ ಮೃತರ ಸಂಬಂಧಿಕರು ಬಸ್ ಗೆ ಬೆಂಕಿ ಹಚ್ಚಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಸ್ ವಾಂಬೆ ಕಾಲೋನಿಯಿಂದ ಪಂಡಿತ್ ನೆಹರೂ ಬಸ್ ನಿಲ್ದಾಣಕ್ಕೆ ತೆರಳುತ್ತಿತ್ತು. ಈ ವೇಳೆ ಬುದಮೇರು ಫ್ಲೈ ಓವರ್ ಬಳಿ ಬಸ್ ಬ್ರೇಕ್ ಫೇಲ್ ಆಗಿದ್ದು, ಬೈಕ್, ಆಟೋರಿಕ್ಷಾ ಸೇರಿದಂತೆ ಹಲವು ವಾಹನಗಳಿಗೆ ಡಿಕ್ಕಿಹೊಡೆದಿದೆ. ಕೊನೆಗೆ ಮುಂದಿದ್ದ ಲಾರಿಯೊಂದರ ಚಾಲಕ ಲಾರಿಯನ್ನು ಬಸ್‌ ಗೆ ಅಡ್ಡ ನಿಲ್ಲಿಸಿದ್ದಾನೆ. ಇದರಿಂದ ಬಸ್ ಮತ್ತಷ್ಟು ಜನರ ಮೇಲೆ ಹರಿದು ಸಂಭವಿಸಬೇಕಾದ ಮತ್ತಷ್ಟು ಅನಾಹುತ ತಪ್ಪಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಿಮಿಷದಲ್ಲೇ ಆ್ಯಪಲ್ ಐಫೋನ್ X ಪ್ರೀ ಬುಕ್ಕಿಂಗ್ ನಲ್ಲಿ sold out

ಮುಂಬೈ: ಮೊಬೈಲ್ ಫೋನ್ ಗಳ ದಿಗ್ಗಜ ಆ್ಯಪಲ್ ಐಫೋನ್. ಈಗ 8 ಹಾಗೂ X ನೇ ಆವೃತ್ತಿ ರಿಲೀಸ್ ಗೆ ಕ್ಷಣಗಣನೆ ...

news

ಮೈತ್ರಿ ಬೇಕೋ, ಬೇಡವೋ: ಶಿವಸೇನೆಗೆ ಸಿಎಂ ದೇವೇಂದ್ರ ಫಡ್ನವೀಸ್ ವಾರ್ನಿಂಗ್

ಮುಂಬೈ: ಮಿತ್ರಪಕ್ಷವಾದ ಶಿವಸೇನೆಯ ಟೀಕೆಗಳಿಂದ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ...

news

ಗುಜರಾತ್ ಗೆಲ್ಲಲು ರಣತಂತ್ರ: ಪ್ರಧಾನಿ ಮೋದಿ ಮಾಡಲಿದ್ದಾರೆ 70 ಬಹಿರಂಗ ಸಭೆ

ಗುಜರಾತ್: ರಾಜ್ಯ ವಿಧಾನಸಭೆ ಚುನಾವಣೆ ಗೆಲುವನ್ನು ಪ್ರತಿಷ್ಟೆಯಾಗಿ ಪರಿಗಣಿಸಿರುವ ಬಿಜೆಪಿ ಶತಾಯಗತಾಯ ...

news

ಸಚಿವ ಕೆ.ಜೆ. ಜಾರ್ಜ್ ಪರ ಎಚ್‌.ಡಿ.ಕುಮಾರಸ್ವಾಮಿ ಬ್ಯಾಟಿಂಗ್

ಬೆಂಗಳೂರು: ಸಿಬಿಐ ಎಫ್‌ಐಆರ್ ದಾಖಲಿಸಿದ ಕೂಡಲೇ ರಾಜೀನಾಮೆ ನೀಡಬೇಕು ಎನ್ನುವದು ಸರಿಯಲ್ಲ ಎಂದು ಜೆಡಿಎಸ್ ...

Widgets Magazine