ಬಿಜೆಪಿಗೆ ಸೇರ್ಪಡೆಯಾದ ಟಿಎಂಸಿ ಸಂಸದ ಸೌಮಿತ್ರ ಖಾನ್

ಕೋಲ್ಕತ್ತಾ, ಗುರುವಾರ, 10 ಜನವರಿ 2019 (09:17 IST)

ಕೋಲ್ಕತ್ತಾ : ಲೋಕಸಭಾ ಚುನಾವಣೆಗೆ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಬೆನ್ನಲೇ ಇದೀಗ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ  ಟಿಎಂಸಿ ಸಂಸದರೊಬ್ಬರು ಬಿಗ್ ಶಾಕ್ ನೀಡಿದ್ದಾರೆ.


ಪಶ್ಚಿಮ ಬಂಗಾಳದ ಬಿಷ್ಣುಪುರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಟಿಎಂಸಿ ಸದಸ್ಯ ಸೌಮಿತ್ರ ಖಾನ್ ಬುಧವಾರ  ದೆಹಲಿಯ ಬಿಜೆಪಿ ಮುಖ್ಯ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷ ಸೇರಿದ್ದಾರೆ. ಈ ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಮುಖಲ್ ರಾಯ್ ಹಾಜರಿದ್ದರು.


ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಸೌಮಿತ್ರ ಖಾನ್ ಅವರು, ಪಶ್ಚಿಮ ಬಂಗಾಳದಲ್ಲಿ ಸಿಂಡಿಕೇಟ್ ರಾಜ್ ಮತ್ತು ಪೊಲೀಸ್ ರಾಜ್ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ತೃಣಮೂಲ ಕಾಂಗ್ರೆಸ್ ಗೂಂಡಾಗಳಿಗೆ ಬೆಂಬಲ ನೀಡುತ್ತಿದೆ. ರಾಜ್ಯದಲ್ಲಿ ಅಹಿತಕರ ಘಟನೆಗಳು ಹೆಚ್ಚಾಗುತ್ತಿವೆ. ಹೀಗಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಿ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಮಂತ್ರಿಗೆ ಅಭಿನಂದನೆ ಸಲ್ಲಿಸಿದ ಸಚಿವ ಆರ್. ವಿ.ದೇಶಪಾಂಡೆ

ಬೆಂಗಳೂರು : ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಗೌರವಾನ್ವಿತ ...

news

ಕಪ್ಪು ಕಾಗದಕ್ಕೆ ಲಿಕ್ವಿಡ್ ಹಾಕಿದ್ರೆ ನೈಜ ನೋಟಾಗುತ್ತೆ ಎಂದ ವಂಚಕರು ಅರೆಸ್ಟ್

ಬಾಗಲಕೋಟೆ : ಕಪ್ಪು ಕಾಗದಕ್ಕೆ ಲಿಕ್ವಿಡ್ ಹಾಕಿದ್ರೆ ನೈಜ ನೋಟಾಗಿ ಬದಲಾಗುತ್ತವೆ ಎಂದು ಜನರನ್ನು ನಂಬಿಸಿ ...

news

ಲವ್ ಬ್ರೇಕ್ ಅಪ್ ಮಾಡಿದ್ದಕ್ಕೆ ಪ್ರೇಯಸಿಗೆ ಪ್ರಿಯತಮ ಮಾಡಿದ್ದೇನು ಗೊತ್ತಾ?

ನವದೆಹಲಿ : ಲವ್ ಬ್ರೇಕ್ ಅಪ್ ಮಾಡಿದ್ದಕ್ಕೆ ಕೋಪಗೊಂಡ ಪ್ರಿಯತಮ ಸುತ್ತಿಗೆಯಿಂದ ಪ್ರೇಯಸಿಯ ತಲೆಗೆ ...

news

ಭಾರತ ಬಂದ್ ಗೆ ಗುಮ್ಮಟ ನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ

ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಗೆ ಗುಮ್ಮಟ ನಗರಿ ಖ್ಯಾತಿಯ ವಿಜಯಪುರ ಜಿಲ್ಲೆಯಲ್ಲಿ ಮಿಶ್ರ ...