OMG...ಟೊಮೆಟೋಗೂ ಕಳ್ಳರ ಭಯ: ಭದ್ರತಾ ಸಿಬ್ಬಂದಿಗಳ ನೇಮಕ...

ನವದೆಹಲಿ, ಭಾನುವಾರ, 23 ಜುಲೈ 2017 (11:32 IST)

ನವದೆಹಲಿ: ಟೊಮೆಟೋಗೆ ಚಿನ್ನದ ಬೆಲೆ ಬಂದಿದ್ದು, ಮಾರುಕಟ್ಟೆಗಳಲ್ಲಿ ಕೆಜಿ ಟೊಮೆಟೋ 100 ರೂ ಗಡಿ ದಾಟಿದೆ. ಟೊಮೆಟೊಗೆ ಉತ್ತಮ ದರ ಬಂದ ಹಿನ್ನಲೆಯಲ್ಲಿ ಕಳ್ಳರ ಕಣ್ಣು ಟೊಮೆಟೋ ಮೇಲೆ ಬಿದ್ದಿದ್ದು, ಲಕ್ಷಾಂತರ ರೂ ಮೌಲವ್ಯದ ಟೊಮೆಟೋ ದರೋಡೆ ಘಟನೆ ನಡೆಯುತ್ತಿದೆ.
 
ಮುಂಬೈನ ಮಾರುಕಟ್ಟೆಯೊಂದರಲ್ಲಿ 300 ಕೆಜಿ ತೂಕದ ರೂ. 30 ಸಾವಿರ ಮೌಲ್ಯದ ಟೊಮೆಟೋಗಳನ್ನು ದರೋಡೆ ಮಾಡಲಾಗಿದೆ. ಮುಂಬೈನ್ ಶಾಂತಿನಗರ ನಿವಾಸಿಯಾಗಿರುವ ಶಾಂತಿಲಾಲ್ ಶ್ರೀವಾಸ್ತವ್ ಎಂಬುವವರು ಮಾರಾಟಕ್ಕಾಗಿ ನವಿ ಮುಂಬೈ ಎಪಿಎಂಸಿಯಲ್ಲಿ ಟೊಮೆಟೋ ಖರೀದಿಸಿದ್ದರು. ಅಂಗಡಿ ಮುಂದೆ ಇಡಲಾಗಿದ್ದ ಟೊಮೆಟೋಗಳನ್ನು ಖದೀಮರು ರಾತ್ರೋರಾತ್ರಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಇದರಿಂದ ಎಚ್ಚೆತ್ತ ಮಾರಾಟಗಾರರು ಈಗ ಟೊಮೆಟೊ ಕಾಯಲು ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿದ್ದಾರೆ.
 
ಇನ್ನು ಮಧ್ಯಪ್ರದೇಶದಲ್ಲಿಯೋ ಟೊಮೆಟೊ ಕಳ್ಳತನದ ಆತಂಕ ಎದುರಾಗಿರುವುದರಿಂದ ಭದ್ರತಾಪಡೆಗಳನ್ನು ನಿಯೋಜಿಸಿದ್ದಾರೆ. ಇಂದೋರ್‌‌ನಲ್ಲಿ ಆತಂಕಕ್ಕೊಳಗಾಗಿರುವ ವ್ಯಾಪಾರಿಗಳು ಟೊಮೆಟೊಗೆ ಬಂದೂಕುಧಾರಿಯ ಭದ್ರತೆ ನೀಡಿದ್ದಾರೆ. ಮಾರ್ಕೆಟ್‌‌ಗೆ ಟೊಮೆಟೊ ಟ್ರಕ್‌ಗಳು ಬರುತ್ತಿದಂತೆ ಭದ್ರತಾ ಸಿಬ್ಬಂದಿ, ಟೊಮೆಟೊವನ್ನು ಗನ್‌‌ಗಳನ್ನು ಹಿಡಿದುಕೊಂಡು ಭದ್ರತೆ ನೀಡುತ್ತಿದ್ದಾರೆ. 
 ಇದರಲ್ಲಿ ಇನ್ನಷ್ಟು ಓದಿ :  
ಟೊಮೆಟೋ ದರೋಡೆ ಭದ್ರತಾ ಸಿಬ್ಬಂದಿ ನೇಮಕ Indore Tomato Guard Men With Arms Guard Tomatoes

ಸುದ್ದಿಗಳು

news

ಮನೆ ಮುಂದಿನ ಗಾರ್ಡನ್`ಗಳಲ್ಲೇ ಸೆಕ್ಸ್ ದಂಧೆ, ಗಿರಾಕಿಗಳ ಜೊತೆ ಕಂಡ ಕಂಡಲ್ಲೇ ಕಾಮದಾಟ

ಬ್ರಿಟನ್ನಿನ ನಾರ್ಮಂಟನ್`ನ ಡರ್ಬಿ ಹೌಸ್ ಪ್ರದೇಶದಲ್ಲಿ ಈಗ ವೇಶ್ಯೆಯರದ್ದೇ ದರ್ಬಾರ್. ಬೀದಿ ಬೀದಿಗಳಲ್ಲಿ ...

news

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಆತ್ಮೀಯ ಬೀಳ್ಕೊಡುಗೆ

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದಾಯ ಆತಿಥ್ಯ ...

news

‘ಅಮೆರಿಕಾ ಮಧ್ಯಸ್ಥಿಕೆ ವಹಿಸಿದರೆ ಕಾಶ್ಮೀರ ಕತೆ ಮುಗಿದೇ ಹೋಯ್ತು’

ನವದೆಹಲಿ: ಕಾಶ್ಮೀರ ಗಡಿ ವಿಚಾರದಲ್ಲಿ ಅಮೆರಿಕಾ ಮಧ್ಯಪ್ರವೇಶಿಸಿದ್ದೇ ಆದಲ್ಲಿ ಈ ರಾಜ್ಯದ ಕತೆ ಸಿರಿಯಾ ಅಥವಾ ...

news

ವೀರಶೈವ, ಲಿಂಗಾಯುತ ಬೇರೆ ಬೇರೆಯಲ್ಲ: ಬಿಎಸ್‌ವೈ

ಬೆಂಗಳೂರು: ವೀರಶೈವ, ಲಿಂಗಾಯುತ ಬೇರೆ ಬೇರೆಯಲ್ಲ ಎರಡು ಒಂದೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

Widgets Magazine