ನಾಳೆ ಸಂಜೆ 5 ಗಂಟೆಗೆ ಉತ್ತರಪ್ರದೇಶದ ನೂತನ ಸಿಎಂ ಆಯ್ಕೆ

ಲಕ್ನೋ, ಗುರುವಾರ, 16 ಮಾರ್ಚ್ 2017 (18:45 IST)

Widgets Magazine

ನಾಳೆ ಸಂಜೆ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರು ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಉತ್ತರಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರಿ ಬಹುಮತ ಪಡೆದಿದೆ. ಇದೀಗ ನೂತನ ಮುಖ್ಯಮಂತ್ರಿ ಆಯ್ಕೆಗೆ ಚಾಲನೆ ನೀಡಲಾಗಿದ್ದು, ನಾಳೆ ಅಂತಿಮವಾಗಿ ಕುತೂಹಲಕ್ಕೆ ತೆರೆ ಬೀಳಲಿದೆ.
 
ಮುಖ್ಯಮಂತ್ರಿ ರೇಸ್‌ನಲ್ಲಿ ಘಟಾನುಘಟಿಗಳು ಸ್ಥಾನ ಪಡೆದಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ, ಮಹೇಶ್ ಶರ್ಮಾ, ಜಲಸಂಪನ್ಮೂಲ ಖಾತೆ ಸಚಿವೆ ಉಮಾ ಭಾರತಿ ಸೇರಿದಂತೆ ಇನ್ನು ಕೆಲವರು ಸಿಎಂ ಸ್ಥಾನದ ಆಕಾಂಕ್ಷಿಗಳಿದ್ದಾರೆ.
 
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸೇರಿದಂತೆ ಇತರ ನಾಯಕರು ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ಯಾರಿಸ್‌ನ ಐಎಂಎಫ್ ಕಚೇರಿಯಲ್ಲಿ ಪಾರ್ಸಲ್ ಬಾಂಬ್ ಸ್ಫೋಟ

ಪ್ಯಾರಿಸ್‌: ಪ್ಯಾರಿಸ್‌ನ ಐಎಂಎಫ್ ಕಚೇರಿಯಲ್ಲಿ ಪಾರ್ಸಲ್ ಬಾಂಬ್ ಸ್ಫೋಟಿಸಿದ್ದರಿಂದ ಒಬ್ಬ ವ್ಯಕ್ತಿ ...

news

ಉತ್ತರಪ್ರದೇಶದ ಸಿಎಂ ಸ್ಥಾನದ ಆಕಾಂಕ್ಷಿ ಆಸ್ಪತ್ರೆಗೆ ದಾಖಲು

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿನ ಪ್ರಮುಖು ರೂವಾರಿ, ಸಿಎಂ ಸ್ಥಾನದ ಆಕಾಂಕ್ಷಿ, ಉತ್ತರಪ್ರದೇಶದ ...

news

ಡ್ರಗ್ಸ್ ಮಾಫಿಯಾ ನಿರ್ನಾಮಕ್ಕೆ ಸರಕಾರ ಬದ್ಧ: ಗೃಹ ಸಚಿವ

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಮಾಫಿಯಾ ಸದೆಬಡೆಯಲು ಸರಕಾರ ಸರ್ವಸನ್ನದ್ಧವಾಗಿದೆ. ಸರಕಾರ ...

news

ಭ್ರಷ್ಟಾಚಾರ ಬಹಿರಂಗವಾಗುವ ಆತಂಕದಿಂದ ಡೈರಿ ಚರ್ಚೆಗೆ ನಕಾರ: ಶೆಟ್ಟರ್

ಬೆಂಗಳೂರು: ಹೈಕಮಾಂಡ್‌ಗೆ ಕಪ್ಪು ಕಾಣಿಕೆ ಬಗ್ಗೆ ವಿವರವುಳ್ಳ ಡೈರಿಯ ಬಗ್ಗೆ ಚರ್ಚೆ ನಡೆದಲ್ಲಿ ಕಾಂಗ್ರೆಸ್ ...

Widgets Magazine Widgets Magazine