ತ್ರಿವಳಿ ತಲಾಕ್: ಮೋದಿಯನ್ನು ಹೊಗಳಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಮಹಿಳೆ

ಡೆಹರಾಡೂನ್, ಬುಧವಾರ, 19 ಏಪ್ರಿಲ್ 2017 (13:14 IST)

Widgets Magazine

ತ್ರಿವಳಿ ತಲಾಕ್ ವಿವಾದ ಮುಂದುವರಿದಿರುವಂತೆಯೇ ಮುಸ್ಲಿಂ ಮಹಿಳೆಯೊಬ್ಬಳು ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಹೊಗಳಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಘೋಷಿಸಿದ್ದಾಳೆ.
 
ತ್ರಿವಳಿ ತಲಾಕ್‌ ಕುರಿತಂತೆ ಬದಲಾವಣೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಡೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದ್ದಾಳೆ. 
 
ಮುಸ್ಲಿಂ ಸಮುದಾಯದಲ್ಲಿರುವ ತ್ರಿವಳಿ ತಲಾಕ್‌ ವ್ಯವಸ್ಥೆಯಿಂದ ಅನ್ಯಾಯ ಎದುರಿಸುವ ಬದಲು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದು ಸೂಕ್ತ ಎಂದು ಉತ್ತರಾಖಂಡ್ ಮಹಿಳೆ ತಿಳಿಸಿದ್ದಾಳೆ.
 
ಉತ್ತರಾಖಂಡ್ ರಾಜ್ಯದ ಕಿಚ್ಚಾ ಪ್ರದೇಶದ ನಿವಾಸಿಯಾಗಿರುವ ಮಹಿಳೆ, ತ್ರಿವಳಿ ತಲಾಕ್‌ನಿಂದ ತೀವ್ರ ಆಕ್ರೋಶಗೊಂಡಿದ್ದಾಳೆ. ಆಕೆಯ ಸಹೋದರಿ ಕೂಡಾ ತ್ರಿವಳಿ ತಲಾಕ್‌ಗೆ ಬಲಿಪಶುವಾಗಿರುವುದು ಗಮನಾರ್ಹವಾಗಿದೆ. 
 
ಕಳೆದ ರವಿವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ತ್ರಿವಳಿ ತಲಾಕ್ ಇದೊಂದು ಸಾಮಾಜಿಕ ಅನ್ಯಾಯ. ಇಂತಹ ಅನ್ಯಾಯವನ್ನು ಸಮಾಜವನ್ನು ಜಾಗೃತಗೊಳಿಸುವ ಮೂಲಕ ತಡೆಯಬಹುದಾಗಿದೆ. ಇದೊಂದು ಕಾರಣಕ್ಕೆ ಬಿಜೆಪಿ ಪಕ್ಷ, ಮುಸ್ಲಿಂ ಸಮುದಾಯದಲ್ಲಿ ಒಡಕು ಉಂಟು ಮಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಸ್ತೆಯಲ್ಲಿ ಉರುಳಿಬಿದ್ದ ಬಿಯರ್ ಲಾರಿ: ಬಿಯರ್ ಬಾಟಲ್`ಗೆ ಮುಗಿಬಿದ್ದ ಜನ

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬಿಯರ್ ಲಾರಿಯಿಂದ ಕೆಳಗೆಬಿದ್ದ ಬಿಯರ್ ಬಾಟಲ್`ಗಳನ್ನ ...

news

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ ಮತ್ತಿತರರ ವಿರುದ್ಧಧ ಒಳ ಸಂಚು ಆರೋಪದ ಮರು ವಿಚಾರಣೆಗೆ ಸುಪ್ರೀಂಕೋರ್ಟ್ ಆದೇಶ

ಭಾರೀ ಕುತೂಹಲ ಕೆರಳಿಸಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ಮುಖಂಡ ...

news

ನಿರೀಕ್ಷಣಾ ಜಾಮೀನು ಕೋರಿ ರೌಡಿ ಶೀಟರ್ ನಾಗರಾಜ್ ಅರ್ಜಿ

ಪೊಲೀಸರ ಕೈಗೆ ಸಿಗದಂತೆ ತಲೆಮರೆಸಿಕೊಂಡಿರುವ ರೌಡಿ ಶೀಟರ್ ನಾಗರಾಜ್ ನಿರೀಕ್ಷಣಾ ಜಾಮೀನು ಅರ್ಜಿ ...

news

ಎಂಟೆದೆಯ ಬಂಟ ಈ ವೀರ ಯೋಧನದ್ದು ಎಂಥಾ ಮಾತು ನೋಡಿ!

ನವದೆಹಲಿ: ದೇಶ ಕಾಯುವ ಯೋಧರೆಂದರೆ ಹಾಗೆ. ಅವರು ಬಿಸಿಲು, ಚಳಿ ಮಳೆಗಾಳಿಗೆ ಜಗ್ಗುವವರಲ್ಲ. ಶತ್ರುಗಳ ನೋಡಿ ...