ಉತ್ತರಾಖಂಡ್`ನ ಸಿಎಂ ಆಗಿ ತ್ರಿವೇಂದ್ರ ಸಿಂಗ್ ರಾವತ್ ಪದಗ್ರಹಣ

ಡೆಹ್ರಾಡೂನ್, ಶನಿವಾರ, 18 ಮಾರ್ಚ್ 2017 (17:22 IST)

Widgets Magazine

ಉತ್ತರಾಖಂಡ್`ನ ಮುಖ್ಯಮಂತ್ರಿಯಾಗಿ ಬಿಜೆಪಿಯ ತ್ರಿವೇಂದ್ರ ಸಿಂಗ್ ರಾವತ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಗವರ್ನರ್ ಕೆ.ಕೆ. ಪೌಲ್ ಪ್ರತಿಜ್ಞಾವಿಧಿ ಬೋಧಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿದ್ದ ಬಿಜೆಪಿ 70 ಕ್ಷೇತ್ರಗಳ ಪೈಕಿ 57 ಸ್ಥಾನಗಳನ್ನ ಗೆದ್ದು ಸ್ಪಷ್ಟ ಬಹುಮತ ಪಡೆದಿತ್ತು.


ಪ್ರಧಾನಮಂತ್ರಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ಗಣ್ಯರು ಪ್ರಮಾಣವಚನ ಸಮಾರಂಭಕ್ಕೆ ಸಾಕ್ಷಿಯಾದರು. ರಾವತ್ ಜೊತೆ 9 ಮಂದಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸತ್ಪಾಲ್ ಮಹಾರಾಜ್, ಹರಕ್ ಸಿಂಗ್ ರಾವತ್, ಮದನ್ ಕೌಶಿಕ್, ಅರವಿಂದ್ ಪಾಂಡೇ, ಸುಭೋದ್ ಉನಿಯಾಲ್, ಯಶ್ ಪಾಲ್ ಆರ್ಯ, ಪ್ರಕಾಶ್ ಪಂತ್ ಪ್ರಮಾಣವಚನ ಸ್ವೀಕರಿಸಿದ ಪ್ರಮುಖರು.

ತ್ರಿವೇಂದ್ರ ಸಿಂಗ್ ರಾವತ್ ಕಾಂಗ್ರೆಸ್ ಅಭ್ಯರ್ಥಿ ಹೀರಾ ಸಿಂಗ್ ಅವರನ್ನ 24000 ಮತಗಳ ಅಂತರದಿಂದ ಸೋಲಿಸಿದ್ದರು. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

100 ರೂ. ಲಂಚ ಕೊಟ್ಟರೆ ಮಾತ್ರ ಸಿಗುತ್ತೆ ವ್ಹೀಲ್ ಚೇರ್

ಆಸ್ಪತ್ರೆಯ ಸಿಬ್ಬಂದಿಯ ಲಂಚ ದಾಹಕ್ಕೆ ಮಿತಿಯೇ ಇಲ್ಲದಂತಾಗಿದೆ. 100 ರೂ. ಲಂಚ ಕೊಡಲಿಲ್ಲವೆಂಬ ಕಾರಣಕ್ಕೆ ...

news

ಮರ್ಮಾಂಗ, ನಾಲಿಗೆಗೆ ಕತ್ತರಿ ಹಾಕಿದ ದುಷ್ಕರ್ಮಿಗಳು..!

ವ್ಯಕ್ತಿಯ ಮರ್ಮಾಂಗಕ್ಕೆ ದುಷ್ಕರ್ಮಿಗಳು ಕತ್ತರಿ ಹಾಕಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್`ನ ...

news

ಸರಣಿ ಅಪಘಾತ: 11 ಜನರ ದುರ್ಮರಣ

ಮೊಳಕಾಲ್ಮೂರು ತಾಲೂಕಿನ ರಾಮಾಪುರ ಸಂಭವಿಸಿದ ಸರಣಿ ಅಪಘಾತದಲ್ಲಿ 13 ಮಂದಿ ಮೃತಪಟ್ಟಿರುವ ಘಟನೆ ಶನಿವಾರ ...

news

`ನಿನ್ನ ದಾಖಲೆಗಳು ನಕಲಿ ಎಂದು ಸಾಬೀತಾದರೆ ಜೈಲಿಗೆ ಹಾಕುತ್ತೇವೆ’

ನಾನು ಜಯಲಲಿತಾ ಮತ್ತು ಶೋಭನ್ ಬಾಬು ಪುತ್ರ. ಅಮ್ಮನನ್ನ ಕೊಲೆ ಮಾಡಲಾಗಿದೆ.. ಅಮ್ಮನ ಆಸ್ತಿ ನನಗೇ ...

Widgets Magazine