ಪಕ್ಷದ ಚಿಹ್ನೆಗಾಗಿ ಲಂಚದ ಆರೋಪ ತಳ್ಳಿಹಾಕಿದ ಟಿಟಿವಿ ದಿನಕರನ್

ಚೆನ್ನೈ, ಸೋಮವಾರ, 17 ಏಪ್ರಿಲ್ 2017 (12:42 IST)

Widgets Magazine

ಅಣ್ಣಾಡಿಎಂಕೆ ಎರಡು ಎಲೆಯ ಚಿಹ್ನೆಯನ್ನ ಪಡೆಯಲು ಮಧ್ಯವರ್ತಿ ಮೂಲಕ ಲಂಚದ ಆಮಿಷವೊಡ್ಡಿದ್ದಾರೆಂಬ ಆರೋಪವನ್ನ ಅಣ್ಣಾಡಿಎಂಕೆ ಅಮ್ಮ ಪಕ್ಷದ ಮುಖಂಡ ಟಿಟಿವಿ ದಿನಕರನ್ ತಳ್ಳಿ ಹಾಕಿದ್ದಾರೆ. ದೆಹಲಿ ಪೊಲೀಸರು ಬಂಧಿಸಿರುವ ವ್ಯಕ್ತಿ ನನಗೆ ಗೊತ್ತೇ ಇಲ್ಲ, ನಾನು ಅವನನ್ನ ಒಮ್ಮೆಯೂ ಸಂಪರ್ಕಿಸಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ ಎಂದು ರಾಷ್ಟ್ರಿಯ ಸುದ್ದಿವಾಹಿನಿಗೆ ದಿನಕರನ್ ಪ್ರತಿಕ್ರಿಯಿಸಿದ್ದಾರೆ.
 


`ನಾನು ಆ ವ್ಯಕ್ತಿಯನ್ನ ಭೇಟಿ ಮಾಡಿಲ್ಲ. ಟಿವಿಗಳಲ್ಲಿ ಮಾತ್ರ ಆತನ ಮುಖ ನೋಡುತ್ತಿದ್ಧೇನೆ. ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಎಫ್`ಐಆರ್ ಬಗ್ಗೆಯೂ ಮಾಹಿತಿ ಇಲ್ಲ. ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ.
 
ಮಧ್ಯವರ್ತಿ ಸುಖೇಶ್ ಚಂದ್ರಸೇಖರ್ ಯಾರೆಂಬುದೇ ನನಗೆ ಗೊತ್ತಿಲ್ಲ. ನಮ್ಮನ್ನ ರಾಜಕೀಯವಾಗಿ ಮುಗಿಸಲು ಇಂತಹ ಸುದ್ದಿ ಹರಡಲಾಗುತ್ತಿದೆ. ಸುಖೇಶ್ ನನ್ನ ಬಗ್ಗೆ ಮಾತನಾಡಿದ್ದಾನೆಂಬುದು ಖಂಡಿತಾ ಸುಳ್ಳು, ಯಾರು ಇದನ್ನ ಮಾಡುತ್ತಿದ್ದಾರೆ. ಯಾಕೆ ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲವೆಂದು ದಿನಕರನ್ ಹೇಳಿದ್ದಾರೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಪಿಸಿಸಿ ಅಧ್ಯಕ್ಷಗಾದಿಗೆ ನಾನೇನು ಅರ್ಜಿ ಹಾಕಿಕೊಂಡು ಕುಳಿತಿಲ್ಲ: ಡಿ.ಕೆ. ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತಂತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ...

news

11ನೇ ವಯಸ್ಸಿಗೆ 12ನೇ ತರಗತಿ ಪರೀಕ್ಷೆ ಪಾಸ್ ಮಾಡಿದ ವಿದ್ಯಾರ್ಥಿ..!

11ನೇ ವಯಸ್ಸಿಗೆ ಮಕ್ಕಳು 5 ಅಥವಾ 6ನೇ ತರಗತಿಯಲ್ಲಿ ಓದುತ್ತಿರುತ್ತಾರೆ. ಆದರೆ, ಇಲ್ಲೊಬ್ಬ ಬಾಲಕ 11ನೇ ...

news

ಅಣ್ಣಾಡಿಎಂಕೆ ಚಿಹ್ನೆಗಾಗಿ ಲಂಚದ ಆರೋಪ: ಟಿಟಿವಿ ದಿನಕರನ್ ವಿರುದ್ಧ ಎಫ್ಐಆರ್

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ಬಣಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ ...

news

ಮೈಸೂರಿನ ಬಳಿ ಕೊತ ಕೊತ ಕುದಿಯುತ್ತಿರುವ ಭೂಮಿ: ಬಾಲಕ ಬಲಿ

ಮೈಸೂರು ಬಳಿಯ ಗ್ರಾಮವೊಂದರ ಭೂಮಿಯಲ್ಲಿ ಕೊತ ಕೊತ ಕುದಿಯುವ ಬೆಂಕಿ ಕಾಣಿಸಿಕೊಂಡು ಬಹಿರ್ದೆಸೆಗೆ ತೆರಳಿದ್ದ ...