ಡೇರಾ ಆಶ್ರಮದಿಂದ ಲೇಡೀಸ್ ಹಾಸ್ಟೆಲ್`ಗೆ ಸೇರಾ ಸುರಂಗ: ಬೆಚ್ಚಿಬಿದ್ದ ಪೊಲೀಸರು

ಚಂಢೀಗಡ, ಭಾನುವಾರ, 10 ಸೆಪ್ಟಂಬರ್ 2017 (10:12 IST)

Widgets Magazine

ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಜೈಕು ಪಾಲಾಗಿರುವಡೇರಾ ಸಚ್ಚಾ ಸೌಧದ ಗುರು ರಾಮ್ ರಹೀಮನ ಒಂದೊಂದೇ ಕರ್ಮಕಾಂಡ ಬಯಲಾಗುತ್ತಿದೆ. ಆಶ್ರಮದ ಸರ್ಚ್ ಆಪರೇಶನ್ ನಡೆಸುತ್ತಿರುವ ಪೊಲೀಸರು ಬೆಚ್ಚಿ ಬೀಳುವಂಥಾ ಸಂಗತಿಗಳು ಕಣ್ಣಿಗೆ ಬೀಳುತ್ತಿವೆ.


 ವೈಭೋಪೇತ ಸ್ಟಾರ್ ಹೋಟೆಲ್, ಐಶಾರಾಮಿ ರೆಸಾರ್ಟ್, ವಿಲಾಸಿ ಕೊಠಡಿಗಳು, ಹಲವು ಈಜುಕೊಳಗಳು ಹೀಗೆ ಒಂದಾ ಎರಡಾ.. ದುಬಾರಿ ಬೆಲೆಯ ಝಗಮಗಿಸುವ ಉಡುಪುಗಳು, ಐಶಾರಾಮಿ ಕಾರು, ಜೀಪ್`ಗಳು, ಫ್ಲಡ್ ಲೈಟ್ ಕ್ರಿಕೆಟ್ ಸ್ಟೇಡಿಯಂ, ತರಬೇತಿ ಹೊಂದಿದ್ದ ಕಮಾಂಡೋ ಭದ್ರತಾ ಪಡೆಗಳು ಸೇರಿದಂತೆ ಹತ್ತು ಹಲವು ವಿಲಾಸಿ ಅಂಶಗಳು ಪತ್ತೆಯಾಗಿವೆ. ಎಲ್ಲಕ್ಕಿಂತ ಬೆಚ್ಚಿ ಬೀಳಿಸುವ ಅಂಶವೆಂದರೆ ಆಶ್ರಮದ ರಾಮ್ ರಹೀಮ್಻ವರ ರಹಸ್ಯ ಐಶಾರಾಮಿ ಮನೆಯಲ್ಲಿ ಪತ್ತೆಯಾಗಿರುವ ಎರಡು ಸುರಂಗಗಳು.

ಹೌದು, ಎರಡೂ ಸುರಂಗಗಳು ಡೇರಾ ಗುರುವಿನ ಅಕ್ರಮದ ಕುರುಹುಗಳಂತಿದ್ದು, ಒಂದು ಸುರಂಗ ನೇರಾ ಮಹಿಳಾ ಹಾಸ್ಟೆಲ್`ಗೆ ಸಂಪರ್ಕ ಕಲ್ಪಿಸುತ್ತಿದೆ. ಸಾಧ್ವಿಯರ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಡೇರಾ ಗುರು ಈ ಸುರಂಗ ಬಳಸಿಕೊಂಡು ಮತ್ತಿನ್ನೇನೂ ಕಾಮಕಾಂಡ ಎಸಗಿದ್ಧಾನೋ ಎಂಬ ಅನುಮಾನ ಶುರುವಾಗಿದೆ. ಇದರ ಜೊತೆಗೆ ಮತ್ತೊಂದು ಮಣ್ಣಿನ ಸುರಂಗವಿದ್ದು, 5 ಕಿ.ಮೀ ದೂರದಲ್ಲಿ ತೆರೆದುಕೊಳ್ಳುತ್ತದೆ. ಪರಿಸ್ಥಿತಿ ಕೈಮೀರಿದರೆ ಈ ಸುರಂಗದ ಮೂಲಕ ಎಸ್ಕೇಪ್ ಆಗಲು ಡೇರಾ ಗುರು ನಿರ್ಮಿಸಿದ್ದಾ..? ಎಂಬ ಸಹಜ ಅನುಮಾನ ಮೂಡತೊಡಗಿದೆ. ಇದರ ಜೊತೆಗೆ ಅಕ್ರಮ ಸ್ಫೋಟಕ ತಯಾರಿಕೆ ಸೇರಿದಂತೆ ಹಲವಾರು ಅಚ್ಚರಿಗಳ ಸಂಗತಿಗಳು ಬಯಲಾಗಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಡೇರಾ ರಾಮ್ ರಹೀಮ್ ಸಿರ್ಸಾ ಹರ್ಯಾಣ Haryana Ladies Hosten Dera Sachcha Soudha

Widgets Magazine

ಸುದ್ದಿಗಳು

news

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶ

ಬೆಂಗಳೂರು: ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶ ನಡೆಸಲಾಗುವುದು ...

news

ಜಮ್ಮು ಕಾಶ್ಮಿರದ ಅನಂತ್‌ನಾಗ್‌ನಲ್ಲಿ ಉಗ್ರರ ಅಟ್ಟಹಾಸ

ಕಾಶ್ಮಿರ: ಜಮ್ಮು ಕಾಶ್ಮಿರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಪೊಲೀಸ್ ಬೆಂಗಾವಲು ಪಡೆಯ ವಾಹನಗಳ ಮೇಲೆ ನಡೆಸಿ ...

news

ಜಯಂತಿ ನಟರಾಜನ್ ಮನೆ ಮೇಲೆ ಸಿಬಿಐ ದಾಳಿ

ಚೆನ್ನೈ: ಹಿರಿಯ ಕಾಂಗ್ರೆಸ್ ನಾಯಕಿ ಮಾಜಿ ಕೇಂದ್ರ ಸಚಿವೆ ಜಯಂತಿ ನಟರಾಜನ್ ನಿವಾಸದ ಮೇಲೆ ಸಿಬಿಐ ...

news

ಸಿಬಿಐ ಮೇಲೆ ನಂಬಿಕೆಯಿಲ್ಲ, ಎಸ್‌ಐಟಿ ತನಿಖೆಯೇ ಸೂಕ್ತ: ಇಂದಿರಾ ಲಂಕೇಶ್

ಬೆಂಗಳೂರು: ಯಾವುದೇ ಕಾರಣಕ್ಕೂ ಸಿಬಿಐ ತನಿಖೆ ಬೇಡ. ಎಸ್‍‌ಐಟಿ ತನಿಖೆ ಮುಂದುವರಿಯಲಿ ಎಂದು ಗೌರಿ ಲಂಕೇಶ್ ...

Widgets Magazine