ಬಾಲಕಿಗೆ ಮದ್ಯ ಕುಡಿಸಿ 2 ವರ್ಷ ಅತ್ಯಾಚಾರಗೈದ ಐವರು ಕಾಮುಕರು

ಚೆರ್ತಾಲಾ(ಕೇರಳ), ಸೋಮವಾರ, 25 ಸೆಪ್ಟಂಬರ್ 2017 (20:25 IST)

ಅಪ್ರಾಪ್ತ ಬಾಲಕಿಯೊಬ್ಬಳಿಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಚೆರ್ತಾಲಾ ಬಳಿಯ ತುವರಾವೂರ್‌ನಲ್ಲಿ ನಡೆದಿದೆ.

ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳಾದ ವಲಮಂಗಲಂ ಮೂಲದ 28 ವರ್ಷ ವಯಸ್ಸಿನ ರಾಜೇಶ್ ಪಟ್ಟಾನಕ್ಕಡ್ ಮೂಲದ ಬಿನಾ ಆಕಾ ಜಿನಾದೇವ್ ನಾಪತ್ತೆಯಾಗಿದ್ದರು. ಆದರೆ, ಪೊಲೀಸರು ಕೊನೆಗೂ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
  
ಪಟ್ಟಾನಕ್ಕಡ್‌ ಪಟ್ಟಣದ ಅಟೋ ಚಾಲಕ ಅಖಿಲ್ ಕೃಷ್ಣ 18 ತಿಂಗಳ ಹಿಂದೆ ಬಾಲಕಿಯೊಂದಿಗೆ ಸ್ನೇಹಗಳಿಸಿದ್ದ. ಆಕೆಯನ್ನು ನಿರ್ಜನ ಪ್ರದೇಶಗಳಿಗೆ ಕರೆದುಕೊಂಡು ಹೋಗಿ ಮದುವೆಯಾಗುವುದಾಗಿ ನಂಬಿಸಿ ಮದ್ಯ ಕುಡಿಸಿ ಅತ್ಯಾಚಾರವೆಸಗುತ್ತಿದ್ದ. ಕೆಲತಿಂಗಳುಗಳ ನಂತರ ಆಕೆಯನ್ನು ತನ್ನ ಗೆಳೆಯರಿಗೆ ಪರಿಚಯಿಸಿದ್ದ. ಸುಮಾರು ಒಂದು ವರ್ಷ ಕಾಲ ಎಲ್ಲರು ಸೇರಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಬಾಲಕಿಯ ದೇಹದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದ ತಾಯಿ, ಆಕೆಯನ್ನು ವೈದ್ಯರ ಬಳಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾಳೆ. ಬಾಲಕಿ ಗರ್ಭವತಿಯಾಗಿರುವುದು ಆಸ್ಪತ್ರೆಯ ಸಿಬ್ಬಂದಿಗೆ ತಿಳಿದಿದೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
 
ಪೊಲೀಸರು ಬಾಲಕಿಯ ವಿಚಾರಣೆ ನಡೆಸಿದಾಗ ಹಲವಾರು ಮಂದಿ ಅತ್ಯಾಚಾರವಸೆಗಿರುವುದು ಬೆಳಕಿಗೆ ಬಂದಿದೆ. ಬಾಲಕಿಯ ಹೇಳಿಕೆಯ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಶ್ವದ ಧಡೂತಿ ಮಹಿಳೆ ಎಮಾನ್ ಅಹಮದ್ ಇನ್ನಿಲ್ಲ

ಅಬುಧಾಬಿ: ವಿಶ್ವದ ಅತಿ ಹೆಚ್ಚು ತೂಕದ ಮಹಿಳೆ ಈಜಿಪ್ಟ್ ನ ಎಮಾನ್ ಅಹಮದ್(37) ಅಬುಧಾಬಿಯ ಬುರ್ಜಿಲ್ ...

news

ಕಮಲದ ಜತೆ ರೂಪದರ್ಶಿ ಫೋಟೊ ತೆಗೆಸಿದ್ದಕ್ಕೆ ಭಾರೀ ದಂಡ.. ಯಾಕೆ ಗೊತ್ತಾ…?

ರಷ್ಯಾ: ಕಮಲದ ಹೂವಿನೊಂದಿಗೆ ಫೋಟೊಗೆ ಪೋಸ್ ಕೊಟ್ಟಿದ್ದ ಮಾಡೆಲ್ ಗೆ ಈಗ ರಷ್ಯಾ ಸರ್ಕಾರ ಭಾರೀ ದಂಡ

news

ಸೌಭಾಗ್ಯ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ: ಬಡವರ ಮನೆಗಳಿಗೆ ಉಚಿತ ವಿದ್ಯುತ್ ವಿತರಿಸುವ ಸೌಭಾಗ್ಯ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ...

news

2022 ರ ವೇಳೆಗೆ ರೈತರ ಆದಾಯ ದ್ವಿಗುಣ: ಪ್ರಧಾನಿ ಮೋದಿ

ನವದೆಹಲಿ: ಮುಂಬರುವ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ ...

Widgets Magazine
Widgets Magazine