ಬಾಲಕಿಯ ಮೇಲೆ ಗ್ಯಾಂಗ್‌ರೇಪ್: ಇಬ್ಬರು ಕಾಮುಕರು ಅರೆಸ್ಟ್

ಮುಜಾಫರ್‌‌ಪುರ್, ಭಾನುವಾರ, 7 ಮೇ 2017 (16:19 IST)

Widgets Magazine
rape attempt

ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.
 
ಆರೋಪಿಗಳು ಪಾಟ್ನಾದಿಂದ 70 ಕಿ.ಮೀ ದೂರದಲ್ಲಿರುವ ಮುಜಾಫರ್‌ಪುರ್ ಜಿಲ್ಲೆಯ ಬ್ರಹ್ಮಪುರಾ ಗ್ರಾಮದ ನಿವಾಸಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ಆರೋಪಿಗಳಾದ 19 ವರ್ಷ ವಯಸ್ಸಿನ ಆಕಾಶ್ ಕುಮಾರ್ ಮತ್ತು 18 ವರ್ಷ ವಯಸ್ಸಿನ ಶಿವಮ್ ಇಂಜಿನಿಯರಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ ದೆಹಲಿಯಲ್ಲಿ ವಾಸವಾಗಿದ್ದರು. ಆಕಾಶ್ ತಂದೆ ಅರ್ಚಕರಾಗಿದ್ದರೆ, ಶಿವಮ್ ತಂದೆ ತರಕಾರಿ ಸಗಟು ವ್ಯಾಪಾರಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಕುಮಾರ್ ತಿಳಿಸಿದ್ದಾರೆ.
 
ಆರೋಪಿಗಳು ಅತ್ಯಾಚಾರಕ್ಕೊಳಗಾದ ಬಾಲಕಿಯ ನೆರೆಹೊರೆಯವರಾಗಿದ್ದು, ಆಕೆಯನ್ನು ಮನೆಗೆ ಕರೆಸಿಕೊಂಡು ಗ್ಯಾಂಗ್‌ರೇಪ್ ಎಸಗಿದ್ದಾರೆ. ಆರೋಪಿಗಳ ಗೆಳೆಯನ ಸಹಾಯದಿಂದ ಅವರ ಮೊಬೈಲ್ ನಂಬರ್ ಸಹಾಯದಿಂದ ಹಿಂಬಾಲಿಸಿ ಬಂಧಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ. 
 
ಬಾಲಕಿಯ ತಾಯಿ ಶಕರ್‌ಪುರ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ನೀಡಿದ್ದರಿಂದ ತನಿಖೆ ಕೈಗೆತ್ತಿಕೊಳ್ಳಲಾಯಿತು. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬೆಂಬಲಿಗರ ಅಸಮಾಧಾನ ಸ್ಫೋಟಗೊಳ್ಳುವುದನ್ನು ತಡೆದ ಬಿಎಸ್‌ವೈ

ಮೈಸೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಕೊನೆಯ ದಿನವಾದ ಇಂದು ಬೆಂಬಲಿಗರ ಅಸಮಾಧಾನ ಸ್ಫೋಟಗೊಳ್ಳುವುದನ್ನು ...

news

ಮೋದಿಜೀ, ನನ್ನ ಗೆಳತಿಯೊಂದಿಗೆ ವಿವಾಹವಾಗಲು ಸಹಾಯ ಮಾಡಬಹುದೇ?

ಚಂಡೀಗಢ್: ಸ್ಥಳೀಯ ನಿವಾಸಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪ್ರಧಾನಿ ಮೋದಿಯವರಿಗೆ ಪತ್ರ ...

news

ಪತಿಯ ಎದುರಲ್ಲೇ ಪತ್ನಿಯ ಮೇಲೆ ಎಂಟು ಕಾಮುಕರಿಂದ ಗ್ಯಾಂಗ್‌ರೇಪ್

ಝಾಂಸಿ(ಉತ್ತರಪ್ರದೇಶ): ಎಂಟು ಮಂದಿ ಕಾಮುಕರು ಪತಿಯ ಮುಂದೆಯೇ ಪತ್ನಿಯ ಮೇಲೆ ಅತ್ಯಾಚಾರೆವಸಗಿದ ಹೇಯ ಘಟನೆ ...

news

ಕಪಿಲ್ ಮಿಶ್ರಾ ಆರೋಪ ಪ್ರತಿಕ್ರಿಯೆ ನೀಡಲು ಯೋಗ್ಯವಲ್ಲ: ಸಿಸೋಡಿಯಾ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 2 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನುವ ಆಪ್ ...

Widgets Magazine