ಪೂಂಛ್ ಸೆಕ್ಟರ್ ಮತ್ತು ಬಂಡಿಪೋರಾದಲ್ಲಿ ಗುಂಡಿನ ದಾಳಿ: ಇಬ್ಬರು ನಾಗರಿಕರು ಬಲಿ; ಮೂರು ಸೈನಿಕರಿಗೆ ಗಾಯ

ಶ್ರೀನಗರ, ಶನಿವಾರ, 8 ಜುಲೈ 2017 (10:34 IST)

Widgets Magazine

ಶ್ರೀನಗರ:ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪೂಂಛ್ ಸೆಕ್ಟರ್‌ನಲ್ಲಿ ಪಾಕ್ ಸೇನಾಪಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಪರಿಣಾಮ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ ಉಗ್ರರು ನಡೆಸಿದ ಗುಂಡಿನ ದಾಳಿಗೆ ಮೂರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. 
 
ಎಲ್ ಒಸಿ ಬಳಿಯ ಗುಲ್ಪುರಾ ಬಳಿ ಈ ದಾಳಿ  ನಡೆದಿದ್ದು, ಸಣ್ಣ ಶಸ್ತ್ರಾಸ್ತ್ರಗಳು ಮತ್ತು ಮೋರ್ಟಾರ್‌ ಶೆಲ್‌ ಗಳಿಂದ ಪಾಕ್ ಪಡೆ ದಾಳಿ ನಡೆಸಿದೆ. ದಾಳಿಯಲ್ಲಿ ಸ್ಥಳೀಯ ದಂಪತಿಗಳಿಬ್ಬರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಸೇನಾ ದಾಳಿಗೆ ಭಾರತೀಯ ಯೋಧರು ದಿಟ್ಟ ಉತ್ತರ ನೀಡುತ್ತಿದ್ದಾರೆ.
 
ಇನ್ನು ಬಂಡಿಪೋರಾ ಜಿಲ್ಲೆಯ ಹಾಜಿನ್‌ ಪ್ರದೇಶದಲ್ಲಿರುವ ಸೇನಾ ನೆಲೆಯ ಮೇಲೆ ಉಗ್ರೠ ಖೂಡ ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಜ್‌ಬುಲ್‌ ಮುಜಾಹಿದೀನ್‌ ಕಮಾಂಡರ್‌, ಉಗ್ರ ಬುರ್ಹಾನ್‌ ವಾನಿಯ ಹತ್ಯೆಗೆ ಇಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಸಲು ಸಿದ್ಧತೆ ನಡೆಸಲಾಗಿದೆ.  ಈ ಹಿನ್ನಲೆಯಲ್ಲಿ ಕಣಿವೆ ರಾಜ್ಯದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬೌ..ಬೌ..! ಈ ನಾಯಿ ಮನುಷ್ಯರು ಮಾಡಬೇಕಾದ ಕೆಲಸ ಮಾಡುತ್ತದೆ!

ಬೀಜಿಂಗ್: ಪರಿಸರವಾದಿಗಳು, ಕಾರ್ಯಕರ್ತರು ನಮ್ಮ ಸುತ್ತಮುತ್ತಲ ಪ್ರದೇಶ ಶುಚಿಯಾಗಿರಬೇಕು ಎಂದು ಏನೇನೋ ...

news

‘ಅಣ್ಣನ ಮಗನನ್ನೇ ಬಿಡದ ಕುಮಾರಸ್ವಾಮಿ ನಮ್ಮನ್ನು ಬಿಡ್ತಾರಾ?’

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಾರ್ಯಕ್ರಮವೊಂದರಲ್ಲಿ ...

news

ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಸಾವು: ಬಂಟ್ವಾಳ ಮತ್ತೆ ಉದ್ವಿಗ್ನ

ಮಂಗಳೂರು: ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಆರ್ ಎಸ್ಎಸ್ ಕಾರ್ಯಕರ್ತ ಶರತ್ ...

news

ಕಲ್ಲಡ್ಕ ಪ್ರಭಾಕರ್‌ಗೆ ಇವತ್ತೇ ಕೊನೆಯ ದಿನ: ಫೇಸ್‌ಬುಕ್‌ನಲ್ಲಿ ಜೀವಬೆದರಿಕೆ

ಬಂಟ್ವಾಳ: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್‌ಗೆ ಇವತ್ತೇ ಕೊನೆಯ ದಿನವಾಗಿದೆ ಎಂದು ಫೇಸ್‌ಬುಕ್‌ ...

Widgets Magazine Widgets Magazine