ಭೂಗತ ಪಾತಕಿ ರವಿ ಪೂಜಾರಿಯಿಂದ ಸಂಸದ ಡಿ.ಕೆ. ಸುರೇಶ್`ಗೆ ಬೆದರಿಕೆ ಕರೆ

ಬೆಂಗಳೂರು, ಬುಧವಾರ, 16 ಆಗಸ್ಟ್ 2017 (10:53 IST)

ಡಿಕೆ. ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ ಸಂದರ್ಭದಲ್ಲೇ ಭೂಗತ ಪಾತಕಿ ರವಿ ಪೂಜಾರಿ, ಸಂಸದ ಡಿ.ಕೆ. ಸುರೇಶ್ ಅವರಿಗೆ ಕರೆ ಮಾಡಿ ಹಣ ಸುಲಿಗೆಗೆ ಯತ್ನಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
 


ಡಿ.ಕೆ. ಸುರೇಶ್ ಕಚೇರಿಗೆ 14 ನಂಬರಿನಿಂದ ಕರೆ ಬಂದಿದ್ದು, ನಿಮ್ಮ ಬಳಿ ಬೇನಾಮಿ ಆಸ್ತಿ ಇರುವುದು ನನಗೆ ಗೊತ್ತಿದೆ. ನಮಗೂ ಕೊಡಿ ಎಂದು ಬೇಡಿಕೆ ಇಟ್ಟಿದ್ದಾನೆಂದು ತಿಳಿದು ಬಂದಿದೆ. ನಮಗೂ ಕೊಡಿ ಇಲ್ಲವಾದರೆ ಪರಿಣಾಮ ಎದುರಿಸುತ್ತಿರಿ ಎಂದು ಬೆದರಿಕೆ ಹಾಕಿದ್ದಾನೆ. ಕರೆ ಸ್ವೀಕರಿಸಿದ್ದ ಆಪ್ತ ಸಹಾಯಕರು ಸುರೇಶ್ ಮನೆಯಲ್ಲಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ. ೆ.
 
ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಹಫ್ತಾ ವಸೂಲಿಗೆ ಯತ್ನಿಸಿದ್ದಾನೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರವಿ ಪೂಜಾರಿ ಹೆಸರಿನಲ್ಲಿ ಬೇರೆಯವರೂ ಕರೆ ಮಾಡಿರುವ ಸಾಧ್ಯತೆ ಇದ್ದು, ಇಂಟರ್ನೆಟ್ ಕಾಲ್ ಮೂಲದ ಬಗ್ಗೆ ತನಿಖೆ ನಡೆಸಲು ಸೈಬರ್ ಕ್ರೈಂಗೆ ಪ್ರಕರಣ ಹಸ್ತಾಂತರಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರವಿ ಪೂಜಾರಿ ಡಿ.ಕೆ. ಸುರೇಶ್ ಡಿ.ಕೆ. ಶಿವಕುಮಾರ್ Dksuresh Dkshivakumar Rp Dksureshavi Poojary

ಸುದ್ದಿಗಳು

news

ಕರುಣಾನಿಧಿ ಆಸ್ಪತ್ರೆಗೆ ದಾಖಲು

ಚೆನ್ನೈ: ಡಿಎಂಕೆ ಮುಖ್ಯಸ್ಥ, ತಮಿಳುನಾಡು ಮಾಜಿ ಸಿಎಂ ಎಂ. ಕರುಣಾನಿಧಿಯವರನ್ನು ಅನಾರೋಗ್ಯ ನಿಮಿತ್ತ ...

news

ರಾಹುಲ್ ಗಾಂಧಿಯಾಯ್ತು.. ಇದೀಗ ಸೋನಿಯಾ ಗಾಂಧಿ ನಾಪತ್ತೆ ಪೋಸ್ಟರ್

ನವದೆಹಲಿ: ಇತ್ತೀಚೆಗಷ್ಟೇ ಅಮೇಠಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಪತ್ತೆ ...

news

‘ಪಾಕ್ ಸಹಾಯದೊಂದಿಗೆ ಭಾರತದ ಮೇಲೆ ದಾಳಿಗೆ ಚೀನಾ ಯೋಜನೆ’

ನವದೆಹಲಿ: ಪಾಕಿಸ್ತಾನದ ಸಹಾಯದೊಂದಿಗೆ ಭಾರತದ ಮೇಲೆ ದಾಳಿ ನಡೆಸಲು ಚೀನಾ ಯೋಜನೆ ರೂಪಿಸಿದೆ ಎಂದು ಸಮಾಜವಾದಿ ...

news

ಶರತ್ ಕೊಲೆ ಪ್ರಕರಣ: ಕೊನೆಗೂ ಆರೋಪಿಗಳು ಅರೆಸ್ಟ್

ಮಂಗಳೂರು: ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಕೊನೆಗೂ ಪೊಲೀಸರು ...

Widgets Magazine